ತಿರುಪತಿ ತಿರುಮಲ

ತಿರುಮಲದಲ್ಲಿ ಕರ್ನಾಟಕದ ಹೆಸರಿನಲ್ಲಿ ಮೊದಲ ಆರತಿ; ಮುಖ್ಯಮಂತ್ರಿಗಳಿಗೆ ಮಾತ್ರ ಇದ್ದ ಹಕ್ಕು ಇನ್ಮುಂದೆ ಸಚಿವ, ಶಾಸಕರಿಗೂ ಲಭ್ಯ!
ಹೊಸ ಪ್ರೋಟೋಕಾಲ್ ಜಾರಿಯಾದರೆ, ರಾಜ್ಯದ ಪರವಾಗಿ ದೇವಸ್ಥಾನಕ್ಕೆ ಭೇಟಿ ನೀಡುವ ಅರ್ಹ ಗಣ್ಯರೂ ಶ್ರೀ ವೆಂಕಟೇಶ್ವರ ಸ್ವಾಮಿ ಸನ್ನಿಧಿಯಲ್ಲಿ ನಿಂತು ಮೊದಲ ಆರತಿಯನ್ನು ಸ್ವೀಕರಿಸಲು ಅವಕಾಶ ದೊರೆಯಲಿದೆ.

ಭಕ್ತಿಗೆ ವಯಸ್ಸಿನ ಹಂಗಿಲ್ಲ: ತಿರುಪತಿ ಬೆಟ್ಟವನ್ನು ಬರಿಗಾಲಲ್ಲಿ ಹತ್ತಿ ಎಲ್ಲರನ್ನೂ ಚಕಿತಗೊಳಿಸಿದ 116 ವರ್ಷದ ಅಜ್ಜಿ; Video
ತಿರುಪತಿ ವೆಂಕಟೇಶ್ವರ ಸ್ವಾಮಿ ಮೇಲಿನ ಅಚಲ ಭಕ್ತಿಯಿಂದ ಪ್ರೇರಿತರಾದ ಅವರು, ಕುಟುಂಬ ಸದಸ್ಯರ ಬೆಂಬಲದೊಂದಿಗೆ ಶೇಷಾಚಲ ಬೆಟ್ಟಗಳ ಮೂಲಕ ಸುಮಾರು 9 ಕಿ.ಮೀ. ದೂರದ, 3,550 ಮೆಟ್ಟಿಲುಗಳಿರುವ ಅಲಿಪಿರಿ ಪಾದಯಾತ್ರೆ ಮಾರ್ಗವನ್ನು ಯಶಸ್ವಿಯಾಗಿ ಏರಿದರು.

Tirupati: ತಿಮ್ಮಪ್ಪನಿಗೆ 3.63 ಕೋಟಿ ರೂ. ಮೌಲ್ಯದ ಚಿನ್ನದ ಆಭರಣಗಳನ್ನು ಸಮರ್ಪಿಸಿದ ಸಂಜೀವ್ ಗೋಯೆಂಕಾ!
ಆರ್‌ಪಿ-ಸಂಜೀವ್ ಗೋಯೆಂಕಾ ಗ್ರೂಪ್‌ನ ಅಧ್ಯಕ್ಷ ಮತ್ತು ಇಂಡಿಯನ್ ಪ್ರೀಮಿಯರ್ ಲೀಗ್ (IPL) ಫ್ರಾಂಚೈಸಿ ಲಕ್ನೋ ಸೂಪರ್ ಜೈಂಟ್ಸ್ (LSG) ಮಾಲೀಕ ಸಂಜೀವ್ ಗೋಯೆಂಕಾ ಅವರು ಪವಿತ್ರ ತಿರುಮಲ ತಿರುಪತಿ ದೇವಸ್ಥಾನ (TTD) ದೇವಸ್ಥಾನಕ್ಕೆ ಸುಮಾರು 3.63 ಕೋಟಿ ಮೌಲ್ಯದ ಚಿನ್ನದ ಆಭರಣಗಳನ್ನು ಸಮರ್ಪಿಸಿದ್ದಾರೆ.

ಕಾಲ್ತುಳಿತಕ್ಕೆ ಭಕ್ತರ ಸಾವು: ಇಂದು ತಿರುಪತಿಗೆ ಚಂದ್ರಬಾಬು ನಾಯ್ಡು ಭೇಟಿ, ಪರಿಶೀಲನಾ ಸಭೆ ಕರೆದ ಸಿಎಂ
ವೈಕುಂಠ ಏಕಾದಶಿ ಪ್ರಯುಕ್ತ ತಿರುಪತಿಯ ವಿಷ್ಣು ನಿವಾಸಂನಲ್ಲಿ ಶುಕ್ರವಾರದಿಂದ 10 ದಿನಗಳ ಕಾಲ ವೈಕುಂಠ ದ್ವಾರ ಸರ್ವ ದರ್ಶನಕ್ಕಾಗಿ ಟೋಕನ್ ವಿತರಣೆಯ ಸಂದರ್ಭದಲ್ಲಿ ಕಾಲ್ತುಳಿತ ಸಂಭವಿಸಿದೆ.

ಭಾರಿ ಮಳೆ: ತಿರುಮಲದಲ್ಲಿ ಸಿಲುಕಿರುವ ಭಕ್ತರಿಗಾಗಿ ರಸ್ತೆ ಸೇವೆ ಪುನರ್ ಸ್ಥಾಪಿಸಿದ ಟಿಟಿಡಿ
ಭಾರಿ ಮಳೆಯಿಂದ ತತ್ತರಿಸಿರುವ ತಿರುಪತಿ ತಿರುಮಲದಲ್ಲಿ ಸಿಲುಕಿರುವ ಭಕ್ತರಿಗಾಗಿ ಟಿಟಿಡಿಯು ಡೌನ್ ಘಾಟ್ ರಸ್ತೆಯಲ್ಲಿ ಸೇವೆಗಳನ್ನು ಪುನರ್ ಸ್ಥಾಪಿಸಿದೆ.

