ಜಾನುವಾರು

ದೇಶದಲ್ಲೇ ಮೊದಲು: ಜಾನುವಾರುಗಳಿಗೂ ಸಿಗಲಿದೆ 'ಆಧಾರ್' ಭಾಗ್ಯ; ಬಯೋಮೆಟ್ರಿಕ್ ಆಧಾರಿತ ಗುರುತು ವ್ಯವಸ್ಥೆ ಜಾರಿಗೆ ಸರ್ಕಾರ ಮುಂದು..!
ಈ ಹೊಸ ವ್ಯವಸ್ಥೆಯಲ್ಲಿ ಜಾನುವಾರುಗಳ ಮೂಗಿನ ಭಾಗದ (Muzzle) ವೈಶಿಷ್ಟ್ಯಪೂರ್ಣ ಗುರುತುಗಳನ್ನು ಆಧರಿಸಿ ಬಯೋಮೆಟ್ರಿಕ್ ಗುರುತಿನ ಚೀಟಿ ಸೃಷ್ಟಿಸಲಾಗುತ್ತದೆ.

ಬೆಂಗಳೂರು ಸುತ್ತಮುತ್ತಲಿನ ಜಾನುವಾರುಗಳಿಗೆ ಕಿವಿ ಸೋಂಕು: ಹಾಲಿನ ಉತ್ಪಾದನೆಯಲ್ಲಿ ಕುಸಿತ, ಹೈನುಗಾರರಲ್ಲಿ ಆತಂಕ
ಸೋಂಕು ಹಸುಗಳ ಕಿವಿಯಲ್ಲಿ ಕೀವು ರಚನೆಗೆ ಕಾರಣವಾಗುತ್ತದೆ. ಹೆಚ್ಚಿನ ಜಾನುವಾರುಗಳು ಎಡ ಕಿವಿಯಲ್ಲಿ ಸೋಂಕಿಗೆ ಒಳಗಾಗುತ್ತವೆ. ಈ ಬಾಧೆಯು ನರಗಳ ಮೇಲೆ ಪರಿಣಾಮ ಬೀರುತ್ತದೆ.

Bakrid 2024: ಬಕ್ರೀದ್ ಹಬ್ಬ ಹಿನ್ನೆಲೆ ಕುರ್ಬಾನಿ ಜಾನುವಾರುಗಳಿಗೆ ಭಾರಿ ಬೇಡಿಕೆ; ದರ ಏರಿಕೆ!
ಜೂನ್ 17 ರಂದು ಬಕ್ರೀದ್ ಹಬ್ಬದ ಹಿನ್ನೆಲೆ ಕುರಿ, ಮೇಕೆಯನ್ನು ಹೆಚ್ಚಿನ ಪ್ರಮಾಣದಲ್ಲಿ ಖರೀದಿಸುತ್ತಿದ್ದು, ಬೆಲೆ ಗಗನಕ್ಕೇರಿದೆ. 18-19 ಕೆಜಿ ತೂಕದ ಮೇಕೆಗಳ ಬೆಲೆ 20,000 ರೂ.ಗೆ ಏರಿಕೆಯಾಗಿದೆ.

ಗೋವುಗಳೊಂದಿಗೆ ಪ್ರತಿಭಟನೆ: 9 ಮಂದಿ ಬಿಜೆಪಿ ನಾಯಕರ ವಿರುದ್ಧ ಪ್ರಕರಣ ದಾಖಲು
ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸುವ ವೇಳೆ 6 ಗೋವುಗಳನ್ನು ಫ್ರೀಡಂ ಪಾರ್ಕ್‌ಗೆ ತಂದಿದ್ದ ಹಿನ್ನೆಲೆಯಲ್ಲಿ 9 ಮಂದಿ ಬಿಜೆಪಿ ನಾಯಕರ ವಿರುದ್ಧ ಪ್ರಾಣಿ ಹಿಂಸೆ ತಡೆ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.

ಅಕಾಲಿಕ ಮಳೆ ಅವಾಂತರ: ಗದಗದಲ್ಲಿ ಸಿಡಿಲು ಬಡಿದು ಇಬ್ಬರು, ಬಾಗಲಕೋಟೆಯಲ್ಲಿ ಛಾವಣಿ ಕುಸಿದು ಇಬ್ಬರು ಮಹಿಳೆಯರು ಸಾವು
ರಾಜ್ಯದ ಕೆಲವೆಡೆ ಸುರಿಯುತ್ತಿರುವ ಅಕಾಲಿಕ ಮಳೆ ಅವಾಂತರ ಸೃಷ್ಟಿಸಿದ್ದು, ಮಳೆ ಸಂಬಂಧಿತ ಘಟನೆಗಳಲ್ಲಿ ನಾಲ್ಕು ಮಂದಿ ಸಾವಿಗೀಡಾಗಿದ್ದು, ಜಾನುವಾರುಗಳು ಮೃತಪಟ್ಟಿವೆ ಎಂದು ಪೊಲೀಸರು ಶನಿವಾರ ತಿಳಿಸಿದ್ದಾರೆ.

ಮಾರ್ಚ್ ಅಂತ್ಯಕ್ಕೆ ಗದಗದಲ್ಲಿ ರಾಜ್ಯದ ಮೊದಲ ಗೋಶಾಲೆ ಆರಂಭ
ಮೊದಲ ಬಾರಿಗೆ ಗದಗದಲ್ಲಿ ಕರ್ನಾಟಕದ ಮೊದಲ ಗೋಶಾಲೆ ತಲೆಯೆತ್ತಲಿದೆ. ಕೆಲ ತಿಂಗಳ ಹಿಂದೆ ಗದಗ ಶಾಸಕ ಎಚ್.ಕೆ.ಪಾಟೀಲ ಕುರ್ತಕೋಟಿ ಗ್ರಾಮಕ್ಕೆ ಭೇಟಿ ನೀಡಿ ಗೋಶಾಲೆಗೆ ಸ್ಥಳ ಗುರುತಿಸಿದ್ದರು. 1 ಕೋಟಿ ರೂಪಾಯಿ ವೆಚ್ಚದಲ್ಲಿ ಹಾಸ್ಟೆಲ್ ಕಟ್ಟಡ ನಿರ್ಮಾಣವಾಗುತ್ತಿದ್ದು, ಮಾರ್ಚ್ ಅಂತ್ಯದೊಳಗೆ ಕಾರ್ಯಾರಂಭವಾಗುವ ಸಾಧ್ಯತೆ ಇದೆ.

ಕೊಡಗಿನಲ್ಲಿ ಮತ್ತೆ ಜಾನುವಾರುಗಳ ಮೇಲೆ ಹುಲಿ ದಾಳಿ; ನಿವಾಸಿಗಳಲ್ಲಿ ಆತಂಕ
ದಕ್ಷಿಣ ಕೊಡಗಿನಲ್ಲಿ ಹುಲಿಗಳ ಹಾವಳಿ ಮುಂದುವರಿದಿದ್ದು, ಜಿಲ್ಲೆಯಾದ್ಯಂತ ಹಲವು ಜಾನುವಾರುಗಳು ದಾಳಿಗೆ ಬಲಿಯಾಗುತ್ತಿರುವುದು ನಿವಾಸಿಗಳನ್ನು ಆತಂಕಕ್ಕೀಡು ಮಾಡಿದೆ.

ಚರ್ಮಗಂಟು ರೋಗ: ರಾಜ್ಯದಲ್ಲಿ 6 ತಿಂಗಳಲ್ಲಿ 1.44 ಲಕ್ಷ ಜಾನುವಾರುಗಳಿಗೆ ಸೋಂಕು!
ಜಾನುವಾರುಗಳಲ್ಲಿ ಮುದ್ದೆ ಚರ್ಮ ರೋಗ ವೇಗವಾಗಿ ಹರಡುತ್ತಿದ್ದು, ಈ ಪರಿಸ್ಥಿತಿ ರಾಜ್ಯ ಸರ್ಕಾರಕ್ಕೆ ದೊಡ್ಡ ಸವಾಲಾಗಿ ಪರಿಣಿಸಿದೆ.

ಜಾನುವಾರುಗೆ ಡಿಕ್ಕಿ ಹೊಡೆದ ವಂದೇ ಭಾರತ್ ರೈಲು; ಒಂದೇ ತಿಂಗಳಲ್ಲಿ ಇದು ಮೂರನೇ ಬಾರಿ!
ಮುಂಬೈ- ಗಾಂಧಿನಗರ ನಡುವೆ ಓಡಾಡುವ 'ವಂದೇ ಭಾರತ್ ಸೂಪರ್ ಪಾಸ್ಟ್ ಎಕ್ಸ್ ಪ್ರೆಸ್ ರೈಲು' ಇಂದು ಮತ್ತೆ ಜಾನುವಾರಿಗೆ ಡಿಕ್ಕಿ ಹೊಡೆದಿದೆ. ಇದರಿಂದಾಗಿ ಸಂಚಾರದಲ್ಲಿ 20 ನಿಮಿಷ ವ್ಯತ್ಯಯವಾಯಿತು ಎಂದು ರೈಲ್ವೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

