ಜಾನುವಾರುಗೆ ಡಿಕ್ಕಿ ಹೊಡೆದ ವಂದೇ ಭಾರತ್ ರೈಲು; ಒಂದೇ ತಿಂಗಳಲ್ಲಿ ಇದು ಮೂರನೇ ಬಾರಿ!
ಮುಂಬೈ- ಗಾಂಧಿನಗರ ನಡುವೆ ಓಡಾಡುವ 'ವಂದೇ ಭಾರತ್ ಸೂಪರ್ ಪಾಸ್ಟ್ ಎಕ್ಸ್ ಪ್ರೆಸ್ ರೈಲು' ಇಂದು ಮತ್ತೆ ಜಾನುವಾರಿಗೆ ಡಿಕ್ಕಿ ಹೊಡೆದಿದೆ. ಇದರಿಂದಾಗಿ ಸಂಚಾರದಲ್ಲಿ 20 ನಿಮಿಷ ವ್ಯತ್ಯಯವಾಯಿತು ಎಂದು ರೈಲ್ವೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಮುಂಬೈ: ಮುಂಬೈ- ಗಾಂಧಿನಗರ ನಡುವೆ ಓಡಾಡುವ 'ವಂದೇ ಭಾರತ್ ಸೂಪರ್ ಪಾಸ್ಟ್ ಎಕ್ಸ್ ಪ್ರೆಸ್ ರೈಲು' ಇಂದು ಮತ್ತೆ ಜಾನುವಾರಿಗೆ ಡಿಕ್ಕಿ ಹೊಡೆದಿದೆ. ಇದರಿಂದಾಗಿ ಸಂಚಾರದಲ್ಲಿ 20 ನಿಮಿಷ ವ್ಯತ್ಯಯವಾಯಿತು ಎಂದು ರೈಲ್ವೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಘಟನೆಯಿಂದಾಗಿ ರೈಲ್ವಿನ ಮುಂಭಾಗದ ಪ್ಯಾನಲ್ ಗೆ ಹಾನಿಯಾಗಿದೆ. ಅದರ ಮೊದಲ ಬೋಗಿಯ ಉಪಕರಣಗಳು ಮುರಿದಿವೆ ಎಂದು ರೈಲ್ವೆ ಮೂಲಗಳು ತಿಳಿಸಿವೆ. ಇದು ಈ ತಿಂಗಳಲ್ಲಿ ಸಂಭವಿಸಿದ ಮೂರನೇ ಪ್ರಕರಣವಾಗಿದೆ.
ಬೆಳಗ್ಗೆ 8-20ರ ಸುಮಾರಿನಲ್ಲಿ ಅಟಲ್ ರೈಲ್ವೆ ನಿಲ್ದಾಣದ ಬಳಿಕ ಜಾನುವಾರ ಹಳಿ ಮೇಲೆ ಬಂದಾಗ ರೈಲು ಡಿಕ್ಕಿ ಹೊಡೆದಿದೆ. ಘಟನೆಯಿಂದಾಗಿ ರೈಲ್ವೆ ಸುಮಾರು 20 ನಿಮಿಷ ಅಲ್ಲಿಯೇ ನಿಲ್ಲಬೇಕಾಯಿತು, ನಂತರ ಸಂಚಾರವನ್ನು ಪುನರ್ ಆರಂಭಿಸಿತು. ಪ್ರಯಾಣಿಕರೆಲ್ಲರೂ ಸುರಕ್ಷಿತರಾಗಿದ್ದಾರೆ ಎಂದು ಪಶ್ಚಿಮ ರೈಲ್ವೆ ವಲಯದ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಸುಮಿತ್ ಠಾಕೂರ್ ತಿಳಿಸಿದ್ದಾರೆ.
ಅಕ್ಟೋಬರ್ 6 ರಂದು ಇದೇ ಮಾರ್ಗದಲ್ಲಿ ಈ ರೈಲು ಡಿಕ್ಕಿ ಹೊಡೆದು ನಾಲ್ಕು ಎಮ್ಮೆಗಳು ಸಾವನ್ನಪ್ಪಿದ್ದವು. ಅಕ್ಟೋಬರ್ 7 ರಂದು ಗುಜರಾತ್ ನ ಆನಂದ್ ಬಳಿ ಹಸುವೊಂದಕ್ಕೆ ವಂದೇ ಭಾರತ್ ಸೂಪರ್ ಪಾಸ್ಟ್ ಎಕ್ಸ್ ಪ್ರೆಸ್ ಡಿಕ್ಕಿ ಹೊಡೆದಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


