ಗುಂಡಿನ ಚಕಮಕಿ

ಛತ್ತೀಸ್‌ಗಢ: ಭದ್ರತಾ ಪಡೆಯೊಂದಿಗೆ ಗುಂಡಿನ ಚಕಮಕಿ; ಇಬ್ಬರು ನಕ್ಸಲರು ಹತ
ಕಿಸ್ತಾರಾಮ್ ಪೊಲೀಸ್ ಠಾಣಾ ವ್ಯಾಪ್ತಿಯ ಅರಣ್ಯದಲ್ಲಿ ಇಂದು ಬೆಳಗ್ಗೆ ಗುಂಡಿನ ಚಕಮಕಿ ನಡೆದಿದ್ದು, ಭದ್ರತಾ ಸಿಬ್ಬಂದಿಯ ಜಂಟಿ ತಂಡವು ನಕ್ಸಲೈಟ್ ವಿರೋಧಿ ಕಾರ್ಯಾಚರಣೆ ನಡೆಸುತ್ತಿತ್ತು.

ಮಣಿಪುರ: ಭೀಕರ ಗುಂಡಿನ ಚಕಮಕಿ; ಜಿರಿಬಾಮ್ ನಲ್ಲಿ ಎರಡು ಮೃತದೇಹ ಪತ್ತೆ; ನಿಷೇಧಾಜ್ಞೆ ಜಾರಿ
ನಾಪತ್ತೆಯಾದವರಿಗಾಗಿ ಶೋಧ ಕಾರ್ಯಾಚರಣೆಯ ಸಂದರ್ಭದಲ್ಲಿ, ನಿನ್ನೆ ಶಂಕಿತ ಉಗ್ರಗಾಮಿಗಳು ಜಕುರಾಧೋರ್ ಕರೋಂಗ್ ಪ್ರದೇಶದಲ್ಲಿ ಕೆಲವು ಅಂಗಡಿಗಳಿಗೆ ಬೆಂಕಿ ಹಚ್ಚಿದ ಸಂದರ್ಭದಲ್ಲಿ ಲೈಶ್ರಾಮ್ ಬಾಲೆನ್ ಮತ್ತು ಮೈಬಮ್ ಕೇಶೋ ಅವರ ಶವಗಳು ಪತ್ತೆಯಾಗಿವೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಕಾಶ್ಮೀರ: ಕುಲ್ಗಾಮ್‌ನಲ್ಲಿ ಉಗ್ರರೊಂದಿಗಿನ ಗುಂಡಿನ ಚಕಮಕಿಯಲ್ಲಿ ಯೋಧ ಹುತಾತ್ಮ
ಗುಂಡಿನ ಚಕಮಕಿಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಭಾರತೀಯ ಸೇನೆಯ ಯೋಧ ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮಣಿಪುರ ಉಗ್ರಗಾಮಿ ಗುಂಪುಗಳ ನಡುವೆ ಗುಂಡಿನ ಚಕಮಕಿ; 13 ಮಂದಿ ಸಾವು
ಮಣಿಪುರದ ತೆಂಗ್ನೌಪಾಲ್ ಜಿಲ್ಲೆಯಲ್ಲಿ ಸೋಮವಾರ ಉಗ್ರಗಾಮಿಗಳ ಎರಡು ಗುಂಪುಗಳ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ಕನಿಷ್ಠ 13 ಜನ ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕೊಡಗು: ಕೇರಳ ಗಡಿಯಲ್ಲಿ ಪೊಲೀಸ್, ನಕ್ಸಲರ ನಡುವೆ ಗುಂಡಿನ ಚಕಮಕಿ
ಕೊಡಗು ಜಿಲ್ಲೆಯ ಕರ್ನಾಟಕ-ಕೇರಳ ಗಡಿಭಾಗದಲ್ಲಿ ನಕ್ಸಲ್ ಶಿಬಿರದ ಬಳಿ ನಕ್ಸಲೀಯರು ಮತ್ತು ಕೇರಳದ ನಕ್ಸಲ್ ನಿಗ್ರಹ ಪಡೆ ನಡುವೆ ಭಾರೀ ಗುಂಡಿನ ಚಕಮಕಿ ನಡೆದು ಗುಂಡಿನ ಕಾಳಗದಲ್ಲಿ ಓರ್ವ ನಕ್ಸಲ್ ಗಾಯಗೊಂಡಿದ್ದಾನೆ.

ಮಧ್ಯ ಪ್ರದೇಶ: ಎರಡು ಗುಂಪುಗಳ ನಡುವೆ ಗುಂಡಿನ ಚಕಮಕಿ; ಐವರು ಸಾವು, 8 ಮಂದಿಗೆ ಗಾಯ
ಮಧ್ಯಪ್ರದೇಶದ ದಾತಿಯಾ ಜಿಲ್ಲೆಯಲ್ಲಿ ಬುಧವಾರ ಸಾಕು ಪ್ರಾಣಿಗಳನ್ನು ಮೇಯಿಸುವ ವಿಚಾರಕ್ಕೆ ಸಂಬಂಧಿಸಿದಂತೆ ಎರಡು ಗುಂಪುಗಳು ನಡುವೆ ಗುಂಡಿನ ಚಕಮಕಿ ನಡೆದಿದ್ದು, ಘಟನೆಯಲ್ಲಿ ಐವರು ಸಾವನ್ನಪ್ಪಿದ್ದಾರೆ ಮತ್ತು ಎಂಟು ಮಂದಿ...

ಮೆಟ್ರೋ ಬಳಿ ಗುಂಡಿನ ಚಕಮಕಿ ನಂತರ ಪೆಂಟಗನ್ ಲಾಕ್ ಡೌನ್
ಅಮೆರಿಕದ ಸುರಕ್ಷಿತ ಮಿಲಿಟರಿ ಪ್ರಧಾನ ಕಚೇರಿಯ ಹೊರಭಾಗದಲ್ಲಿರುವ ಮೆಟ್ರೋ ನಿಲ್ದಾಣದ ಬಳಿ ಗುಂಡಿನ ಚಕಮಕಿ ನಡೆದ ನಂತರ ಪೆಂಟಗನ್ ನಲ್ಲಿ ಲಾಕ್ ಡೌನ್ ಹೇರಲಾಗಿದೆ.

20 ದಿನಗಳಲ್ಲಿ ಭಾರತ-ಚೀನಾ ನಡುವೆ ಗುಂಡಿನ ಚಕಮಕಿಯ 3 ಘಟನೆ ವರದಿ
ಭಾರತ-ಚೀನಾ ಗಡಿಯಲ್ಲಿ ಗುಂಡಿನ ಮೊರೆತ ಕೇಳಿ 45 ವರ್ಷಗಳೇ ಕಳೆದಿದ್ದವು. ಆದರೆ ಈಗ ಗಡಿ ಭಾಗದಲ್ಲಿ ಪರಿಸ್ಥಿತಿ ಸಂಪೂರ್ಣ ಬದಲಾಗಿದ್ದು, ಕಳೆದ 20 ದಿನಗಳಲ್ಲಿ ಭಾರತ-ಚೀನಾ ನಡುವೆ ಬರೊಬ್ಬರಿ 3 ಬಾರಿ ಭರ್ಜರಿ ಗುಂಡಿನ ಚಕಮಕಿ ನಡೆದಿದೆ.

ಎಲ್ ಎಸಿಯಲ್ಲಿ ಭಾರತ- ಚೀನಾ ಸೇನಾಪಡೆಗಳಿಂದ ಗುಂಡಿನ ಚಕಮಕಿ
ಕಳೆದ ಮೂರು ತಿಂಗಳಿನಿಂದಲೂ ಭಾರತ ಹಾಗೂ ಚೀನಾ ನಡುವಣ ವಿವಾದವಾಗುತ್ತಿರುವ ಪೂರ್ವ ಲಡಾಖ್ ನ ವಾಸ್ತವ ನಿಯಂತ್ರಣ ರೇಖೆಯಲ್ಲಿ ಉಭಯ ದೇಶಗಳ ಸೇನಾಪಡೆಗಳ ನಡುವೆ ಗುಂಡಿನ ಚಕಮಕಿ ನಡೆದಿರುವ ಬಗ್ಗೆ ಮಂಗಳವಾರ ಮೂಲಗಳಿಂದ ತಿಳಿದುಬಂದಿದೆ.

