20 ದಿನಗಳಲ್ಲಿ ಭಾರತ-ಚೀನಾ ನಡುವೆ ಗುಂಡಿನ ಚಕಮಕಿಯ 3 ಘಟನೆ ವರದಿ
ಭಾರತ-ಚೀನಾ ಗಡಿಯಲ್ಲಿ ಗುಂಡಿನ ಮೊರೆತ ಕೇಳಿ 45 ವರ್ಷಗಳೇ ಕಳೆದಿದ್ದವು. ಆದರೆ ಈಗ ಗಡಿ ಭಾಗದಲ್ಲಿ ಪರಿಸ್ಥಿತಿ ಸಂಪೂರ್ಣ ಬದಲಾಗಿದ್ದು, ಕಳೆದ 20 ದಿನಗಳಲ್ಲಿ ಭಾರತ-ಚೀನಾ ನಡುವೆ ಬರೊಬ್ಬರಿ 3 ಬಾರಿ ಭರ್ಜರಿ ಗುಂಡಿನ ಚಕಮಕಿ ನಡೆದಿದೆ.

ಭಾರತ-ಚೀನಾ ಗಡಿಯಲ್ಲಿ ಗುಂಡಿನ ಮೊರೆತ ಕೇಳಿ 45 ವರ್ಷಗಳೇ ಕಳೆದಿದ್ದವು. ಆದರೆ ಈಗ ಗಡಿ ಭಾಗದಲ್ಲಿ ಪರಿಸ್ಥಿತಿ ಸಂಪೂರ್ಣ ಬದಲಾಗಿದ್ದು, ಕಳೆದ 20 ದಿನಗಳಲ್ಲಿ ಭಾರತ-ಚೀನಾ ನಡುವೆ ಬರೊಬ್ಬರಿ 3 ಬಾರಿ ಭರ್ಜರಿ ಗುಂಡಿನ ಚಕಮಕಿ ನಡೆದಿದೆ.
ಈಶಾನ್ಯ ಲಡಾಖ್ ನಲ್ಲಿ ಗಡಿ ಸಂಘರ್ಷದ ಭಾಗವಾಗಿ ಈ ಗುಂಡಿನ ಚಕಮಕಿ ನಡೆದಿದೆ. ಮೊದಲ ಗುಂಡಿನ ಚಕಮಕಿ ಪ್ಯಾಂಗಾಂಗ್ ಲೇಕ್ ನ ದಕ್ಷಿಣ ಭಾಗದಲ್ಲಿದ್ದ ಗುಡ್ಡಗಳನ್ನು ವಶಪಡಿಸಿಕೊಳ್ಳಬೇಕಾದರೆ ಆ.29-31 ರ ವರೆಗೆ ನಡೆದಿದೆ. ಈ ವೇಳೆ ಭಾರತೀಯ ಸೇನೆ ಚೀನಾ ಸೇನೆಯು ವಶಪಡಿಸಿಕೊಳ್ಳಬೇಕಿದ್ದ ಪ್ರದೇಶವನ್ನು ಚೀನಾಗಿಂತ ಮುನ್ನವೇ ವಶಪಡಿಸಿಕೊಂಡಿತ್ತು.
ಎರಡನೆಯ ಬಾರಿಯ ಗುಂಡಿನ ಚಕಮಕಿ ಸೆ.7 ರಂದು ಮುಖ್ಪುರಿ ಗುಡ್ಡವನ್ನು ವಶಪಡಿಸಿಕೊಳ್ಳುವಾಗ ನಡೆದಿದೆ. ಇನ್ನು ಮೂರನೇ ಘಟನೆ ಸೆ.08 ರಂದು ನಡೆದಿದ್ದು ಪ್ಯಾಂಗಾಂಗ್ ಲೇಕ್ ನ ಉತ್ತರ ತೀರದ ಪ್ರದೇಶದಲ್ಲಿ ನಡೆದಿದ್ದು ಕನಿಷ್ಟ 100 ಸುತ್ತುಗಳ ಗುಂಡಿನ ಚಕಮಕಿ ನಡೆದಿದ್ದು ಚೀನಾ ತೀವ್ರವಾಗಿ ಪ್ರತಿಕ್ರಿಯಿಸಿತ್ತು ಎಂದು ತಿಳಿದುಬಂದಿದೆ.
ಈ ಘಟನೆ ಮಾಸ್ಕೋದಲ್ಲಿ ನಡೆದ ಶಾಂಘೈ ಸಹಕಾರ ಸಭೆಯ ಪಾರ್ಶ್ವದಲ್ಲಿ ವಿದೇಶಾಂಗ ಸಚಿವ ಎಸ್ ಜೈಶಂಕರ್ ಅವರು ಚೀನಾ ವಿದೇಶಾಂಗ ಸಚಿವರನ್ನು ಭೇಟಿ ಮಾಡಿದಾಗಲೂ ಸಹ ಗುಂಡಿನ ದಾಳಿ ನಡೆದಿತ್ತು ಎಂದು ತಿಳಿದುಬಂದಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


