ರಾಜ್ಯ'ಕ್ರಿಮಿನಲ್ ಟ್ರ್ಯಾಕಿಂಗ್ ವ್ಯವಸ್ಥೆ' ಬಲಪಡಿಸಲು ಹೊಸ ಕಾನೂನು ಸಹಾಯಕವಾಗಲಿದೆ: ಸಚಿವ ಆರಗ ಜ್ಞಾನೇಂದ್ರ
ಅಪರಾಧಿಗಳ ಅಳತೆಯ, ಪಾದದ ಗುರುತು ಸಂಗ್ರಹಿಸುವ ಬದಲು ರಕ್ತದ ಮಾದರಿ, ಡಿಎನ್ಎ ಮಾದರಿ, ಧ್ವನಿ ಮಾದರಿ ಮತ್ತು ಕಣ್ಣಿನ ಪಾಪೆಯ ಸ್ಕ್ಯಾನಿನ ಮಾದರಿಯನ್ನು ಪಡೆಯುವ ಸಂಬಂಧ 2021ನೇ ಸಾಲಿನ ಬಂದಿಗಳ ಗುರುತಿಸುವಿಕೆ ವಿಧೇಯಕ ಸೇರಿದಂತೆ 3 ವಿಧೇಯಕಗಳನ್ನು ಸುಧೀರ್ಘ ಚರ್ಚೆಯ ಬಳಿಕ ಸದನವು ಅಂಗೀಕರಿಸಿತು.