ಕೋಟ್ಪಾ ಕಾಯ್ದೆ

COTPA ಕಾಯ್ದೆ ಉಲ್ಲಂಘನೆ: 11,507 ಪ್ರಕರಣ ದಾಖಲು, 21 ಲಕ್ಷ ರೂ ದಂಡ ವಸೂಲಿ
ನಗರದಾದ್ಯಂತ ವೈನ್‌ಶಾಪ್, ಬಾರ್ ಆ್ಯಂಡ್ ರೆಸ್ಟೋರೆಂಟ್, ಲಾಡ್ಜ್‌ಗಳು, ಪಿ.ಜಿಗಳು ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಮೇ 31ರಿಂದ ಜೂನ್ 2ರವರೆಗೆ ವಿಶೇಷ ಕಾರ್ಯಾಚರಣೆ ನಡೆಸಲಾಗಿದ್ದು, 11,507 ಪ್ರಕರಣ ದಾಖಲು, 21 ಲಕ್ಷ ರೂ. ದಂಡ ವಸೂಲಿ ಮಾಡಲಾಗಿದೆ.

ಕೋಟ್ಪಾಗೆ ಬಲ ತುಂಬಲು ತಿದ್ದುಪಡಿ ತರಬೇಕು, ಧೂಮಪಾನಕ್ಕೆ ಕನಿಷ್ಠ ಕಾನೂನು ವಯಸ್ಸನ್ನು 18 ರಿಂದ 21ಕ್ಕೆ ಏರಿಸಬೇಕು!
ತಂಬಾಕು ನಿಯಂತ್ರಣಕ್ಕೆ ಸದ್ಯ ಚಾಲ್ತಿಯಲ್ಲಿರುವ ಕೋಟ್ಪಾ 2003 ಕಾಯ್ದೆಯಲ್ಲಿ ಬಹಳಷ್ಟು ನ್ಯೂನತೆಗಳಿವೆ ಎಂದು ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿ (ಏನ್ಎಲ್ಎಸ್ಐಯು) ಮಂಗಳವಾರ ಬಿಡುಗಡೆ ಮಾಡಿದ “ಭಾರತದಲ್ಲಿ ತಂಬಾಕು ನಿಯಂತ್ರಣ ಕಾನೂನು - ಮೂಲ ಮತ್ತು ಪ್ರಸ್ತಾವಿತ ಸುಧಾರಣೆಗಳು” ವರದಿ ಹೇಳಿದೆ.

