ಕೊರಗ ಸಮುದಾಯ

ಅಪೂರ್ಣ, ಪಾಳು ಬಿದ್ದ ಕಟ್ಟಡಗಳು: ಕೊರಗ ಸಮುದಾಯದ ಕುಟುಂಬಗಳಿಗೆ ಇನ್ನೂ 'ಸುರಕ್ಷಿತ ಮನೆ' ಯಾಕಿಲ್ಲ ಗೊತ್ತಾ?
ಒಂದು ಶತಮಾನದ ನಂತರವೂ, 'ವಿಶೇಷವಾಗಿ ದುರ್ಬಲ ಬುಡಕಟ್ಟು ಗುಂಪು' (PVTG) ಎಂದು ವರ್ಗೀಕರಿಸಲಾದ ಅನೇಕ ಕೊರಗ ಕುಟುಂಬಗಳು, ಘನತೆಯ ಅತ್ಯಂತ ಮೂಲಭೂತ ಸಂಕೇತವಾದ 'ಸುರಕ್ಷಿತ ಮನೆ'ಗಾಗಿ ಇನ್ನೂ ಪರದಾಡುತ್ತಿವೆ.

ವನ ಸಂಪತ್ತಿನಿಂದ ಸ್ವಾವಲಂಬಿ ಬದುಕು: ಗಲ್ಫ್ ರಾಷ್ಟ್ರಗಳಿಗೆ ಜೇನು ರಫ್ತು; ಇದು ಕೊರಗ ಜನಾಂಗದ ಯಶೋಗಾಥೆ..!
ಕಾಡಿನಲ್ಲಿ ಸಿಗುವ ಸಹಜ ಜೇನನ್ನು ಸಂಗ್ರಹಿಸಿ ‘ಪ್ರಕೃತಿ’ ಎಂಬ ಬ್ರ್ಯಾಂಡ್‌ನಡಿ ಮಾರಾಟ ಮಾಡುತ್ತಿರುವ ಈ ಸಮುದಾಯ, ಇದೀಗ ಗಲ್ಫ್ ರಾಷ್ಟ್ರಗಳಿಗೂ ತಮ್ಮ ಉತ್ಪನ್ನವನ್ನು ರಫ್ತು ಮಾಡುತ್ತಿದೆ.

ಕೊರಗ ಸಮುದಾಯದ ಕಲಾವತಿಗೆ ಡಾಕ್ಟರೇಟ್: ಬಡತನ, ಅಸ್ಪೃಶ್ಯತೆ ಬದಿಗೊತ್ತಿ ಸಾಧನೆಗೈದ ಮಹಿಳೆ!
ಅಸ್ಪೃಶ್ಯತೆ ಎಂಬ ಅಡತಡೆಗಳ ಬದಿಗೊತ್ತಿ ಛಲ ಬಿಡದೆ ಶಿಕ್ಷಣ ಪಡೆದು, ತಮ್ಮ ಜೀವನದ ಗುರಿಯಂತೆಯೇ ಡಾಕ್ಟರೇಟ್ ಪಡೆದು ಕೊರಗ ಸಮುದಾಯದ ಕಲಾವತಿಯವರು ಸಾಧನೆ ಮಾಡಿದ್ದಾರೆ.

ಜಾತಿ ತಾರತಮ್ಯ: ಮನೆ ನೀಡಲು ಮಾಲೀಕರ ನಿರಾಕರಣೆ, ಸಂಕಷ್ಟದಲ್ಲಿ ಕೊರಗ ಬುಡಕಟ್ಟು ಸಮುದಾಯದ ಪೌರಕಾರ್ಮಿಕರು!
ಜಾತಿ ನೋಡಿ ಮಾಲೀಕರು ಮನೆ ನೀಡಲು ನಿರಾಕರಿಸುತ್ತಿರುವ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲೆಯ ಬೈಂದೂರು ಪಟ್ಟಣದ ಕೊರಗ ಬುಡಕಟ್ಟು ಸಮುದಾಯದ ಪೌರಕಾರ್ಮಿಕರು ಸಂಕಷ್ಟ ಎದುರಿಸುತ್ತಿದ್ದಾರೆ.

‘ನಮ್ಮ ನ್ಯಾಯ ಕೂಟ’: ತಮ್ಮದೇ ನ್ಯಾಯಾಂಗ ವ್ಯವಸ್ಥೆ, ತೀರ್ಪಿನೊಂದಿಗೆ ಶಾಂತಿ ಕಾಪಾಡುತ್ತಿರುವ 'ಕೊರಗ ಸಮುದಾಯ'
ಭಾರತದ ಕೆಲವೇ ಆದಿವಾಸಿ ಬುಡಕಟ್ಟುಗಳಲ್ಲಿ ಕೊರಗ ಸಮುದಾಯ ಕೂಡ ಒಂದಾಗಿದೆ. ಈ ಸಮುದಾಯ ತನ್ನದೇ ಆದ ನ್ಯಾಯಾಂಗ ವ್ಯವಸ್ಥೆಯನ್ನು ಸ್ಥಾಪಿಸಿಕೊಂಡಿದ್ದು, ಹಲವು ಸಮಸ್ಯೆಗಳಿಗೆ ಪರಿಹಾರಗಳನ್ನು ಕಂಡುಕೊಳ್ಳುತ್ತಿದೆ. ಈ ಮೂಲಕ ಶಾಂತಿಯನ್ನು ಕಾಪಾಡುವ ಕೆಲಸವನ್ನು ಮಾಡುತ್ತಿದೆ.

ಕೊರಗ ಸಮುದಾಯದ ಮೇಲಿನ ಪೊಲೀಸರ ಪ್ರಕರಣ ಅಮಾನವೀಯ, ನಾಚಿಕೆಗೇಡಿನ ಸಂಗತಿ: ಸಿದ್ದರಾಮಯ್ಯ
ಕುಂದಾಪುರದ ಕೋಟ ತಟ್ಟುವಿನಲ್ಲಿ ಪೊಲೀಸರಿಂದ ದೌರ್ಜನ್ಯಕ್ಕೆ ಈಡಾಗಿರುವ ಕೊರಗ ಸಮುದಾಯದ ಮೇಲೆ ಪೊಲೀಸರೇ ಪ್ರಕರಣ ದಾಖಲು ಮಾಡಿರುವುದು ನೋಡಿದರೆ ದೌರ್ಜನ್ಯ ಆಕಸ್ಮಿಕ ಅಲ್ಲ, ಯೋಜಿತ ಸಂಚಿನಂತೆ ಕಾಣುತ್ತಿದೆ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಶುಕ್ರವಾರ ಹೇಳಿದ್ದಾರೆ.

ಉಡುಪಿ: ಕೊರಗ ಬುಡಕಟ್ಟು ಸಮುದಾಯಕ್ಕೆ ಪ್ರತ್ಯೇಕ ಕೋವಿಡ್ ಲಸಿಕಾ ಅಭಿಯಾನಕ್ಕೆ ಚಿಂತನೆ
ಕೊರಗ ಬುಡಕಟ್ಟು ಸಮುದಾಯದವರಿಗೆ ಪ್ರತ್ಯೇಕ ಕೋವಿಡ್ ಲಸಿಕಾ ಅಭಿಯಾನ ನಡೆಸಲು ಉಡುಪಿ ಜಿಲ್ಲಾ ಆಡಳಿತ ಮಂಡಳಿ ನಿರ್ಧರಿಸಿದೆ ಎಂದು ತಿಳಿದುಬಂದಿದೆ.

