ದೇಶಸಮುದ್ರ ತೀರದಲ್ಲಿ ಪತಿ ಜೊತೆ ಫೋಟೋ ತೆಗೆಸಿಕೊಳ್ಳುತ್ತಿದ್ದಾಗ ಬಲವಾದ ಅಲೆಗೆ ಮಕ್ಕಳ ಮುಂದೆಯೇ ಕೊಚ್ಚಿ ಹೋದ ಮಹಿಳೆ!
ಭಾರೀ ಸಮುದ್ರದಲೆಗಳ ಮಧ್ಯೆ ನಿಂತು ಫೋಟೋ ತೆಗೆಸಿಕೊಳ್ಳುವ ಧಾವಂತದಲ್ಲಿ ಮಕ್ಕಳೆದುರೇ ತಾಯಿ ಜಲಸಮಾಧಿಯಾದ ಘಟನೆ ಮುಂಬೈಯ ಬಾಂದ್ರಾ ಸಮುದ್ರ ತೀರದಲ್ಲಿ ಕಳೆದ ತಿಂಗಳು ನಡೆದಿದ್ದು ಅದರ ವಿಡಿಯೊ ಈಗ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.