ಸಮುದ್ರ ತೀರದಲ್ಲಿ ಪತಿ ಜೊತೆ ಫೋಟೋ ತೆಗೆಸಿಕೊಳ್ಳುತ್ತಿದ್ದಾಗ ಬಲವಾದ ಅಲೆಗೆ ಮಕ್ಕಳ ಮುಂದೆಯೇ ಕೊಚ್ಚಿ ಹೋದ ಮಹಿಳೆ!
ಭಾರೀ ಸಮುದ್ರದಲೆಗಳ ಮಧ್ಯೆ ನಿಂತು ಫೋಟೋ ತೆಗೆಸಿಕೊಳ್ಳುವ ಧಾವಂತದಲ್ಲಿ ಮಕ್ಕಳೆದುರೇ ತಾಯಿ ಜಲಸಮಾಧಿಯಾದ ಘಟನೆ ಮುಂಬೈಯ ಬಾಂದ್ರಾ ಸಮುದ್ರ ತೀರದಲ್ಲಿ ಕಳೆದ ತಿಂಗಳು ನಡೆದಿದ್ದು ಅದರ ವಿಡಿಯೊ ಈಗ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.

ಮುಂಬೈ: ಭಾರೀ ಸಮುದ್ರದಲೆಗಳ ಮಧ್ಯೆ ನಿಂತು ಫೋಟೋ ತೆಗೆಸಿಕೊಳ್ಳುವ ಧಾವಂತದಲ್ಲಿ ಮಕ್ಕಳೆದುರೇ ತಾಯಿ ಜಲಸಮಾಧಿಯಾದ ಘಟನೆ ಮುಂಬೈಯ ಬಾಂದ್ರಾ ಸಮುದ್ರ ತೀರದಲ್ಲಿ ಕಳೆದ ತಿಂಗಳು ನಡೆದಿದ್ದು ಅದರ ವಿಡಿಯೊ ಈಗ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.
27 ವರ್ಷದ ಮಹಿಳೆ ಜ್ಯೋತಿ ಸೋನಾರ್ ಸಮುದ್ರದಲೆಯಲ್ಲಿ ಕೊಚ್ಚಿಹೋದ ಮಹಿಳೆಯಾಗಿದ್ದಾರೆ. ಬಾಂದ್ರಾ ಫೋರ್ಟ್ ನ ಬಾಂಡ್ ಸ್ಟಾಂಡ್ ಬಳಿ ಸಮುದ್ರ ತೀರಕ್ಕೆ ಪತಿ ಮತ್ತು ಮಕ್ಕಳೊಂದಿಗೆ ಕಳೆದ ತಿಂಗಳು ಜೂನ್ 9ರಂದು ಜ್ಯೋತಿ ಸೋನಾರ್ ತೆರಳಿದ್ದರು.
ಈ ಸಂದರ್ಭದಲ್ಲಿ ಮೋಜಿಗೆಂದು ಪತಿ ಮುಕೇಶ್ ಜೊತೆ ಸಮುದ್ರ ತೀರದಲ್ಲಿ ಬಂಡೆಗಲ್ಲಿನ ಮೇಲೆ ಸೋನಾರ್ ಕುಳಿತು ಖುಷಿಯಿಂದ ಫೋಟೋಗೆ ಫೋಸ್ ಕೊಡುತ್ತಿದ್ದರು. ಅವರ ಮೂವರು ಮಕ್ಕಳು ದೂರದಲ್ಲಿ ನಿಂತು ತಂದೆತಾಯಿ ಬಂಡೆಗಲ್ಲಿನ ಮೇಲೆ ಖುಷಿಯಿಂದ ಕುಳಿತಿರುವುದನ್ನು ನೋಡುತ್ತಿದ್ದರು.
ಸಮುದ್ರದಲೆಗಳಿಗೆ ಮೈಯೊಡ್ಡುತ್ತಾ ದಂಪತಿ ಮೈಮರೆತವರಂತೆ ಕುಳಿತಿದ್ದರು. ಈ ವೇಳೆ ಅವರ ಫೋಟೋ ವಿಡಿಯೊ ಕ್ಲಿಕ್ಕಿಸಲಾಗುತ್ತಿತ್ತು. ಈ ಸಂದರ್ಭದಲ್ಲಿ ಬಲವಾದ ಅಲೆಯೊಂದು ಅಪ್ಪಳಿಸಿ ಜ್ಯೋತಿ ಸೋನಾರ್ ಅವರನ್ನು ಕೊಚ್ಚಿಕೊಂಡು ಹೋಗಿದೆ.
ಅಕ್ಕಪಕ್ಕದವರು ಸುದ್ದಿ ಮುಟ್ಟಿಸಿದಾಗ ಕೂಡಲೇ ಸ್ಥಳಕ್ಕೆ ಪೊಲೀಸರು ಧಾವಿಸಿದರು. ಮಹಿಳೆಯ ಮೃತದೇಹ ಮರುದಿನ 20 ಗಂಟೆ ಕಾರ್ಯಾಚರಣೆ ನಂತರ ಮುಂಬೈ ಸಮುದ್ರ ತೀರದಲ್ಲಿ ಸಿಕ್ಕಿದೆ.
ತಮ್ಮನ್ನು ವ್ಯಕ್ತಿಯೊಬ್ಬರು ಎಳೆದಿದ್ದರಿಂದ ಬಚಾವಾದೆ, ಆದರೆ ಪತ್ನಿ ಅಲೆಯಲ್ಲಿ ಕೊಚ್ಚಿ ಹೋದಳು ಎಂದು ಪತಿ ಮುಕೇಶ್ ಹೇಳಿಕೆ ನೀಡಿದ್ದಾರೆ. ನಾವಿಬ್ಬರೂ ಬಲವಾದ ಅಲೆ ಅಪ್ಪಳಿಸಿದಾಗ ಸಮತೋಲನ ಕಳೆದುಕೊಂಡು ಬಿದ್ದುಬಿಟ್ಟೆವು. ನನ್ನನ್ನು ಹತ್ತಿರದಲ್ಲಿದ್ದವರೊಬ್ಬರು ಎಳೆದುಕೊಂಡರು, ಆದರೆ ಪತ್ನಿಯನ್ನು ಕಾಪಾಡಲು ಸಾಧ್ಯವಾಗಲಿಲ್ಲ ಎಂದು ಹೇಳುತ್ತಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


