ಕೇಂದ್ರ ಬಜೆಟ್ 2023

ಶಾರುಖ್ ಖಾನ್ ಅಭಿನಯದ ಪಠಾಣ್ ಸಿನಿಮಾದಂತೆ ಬಜೆಟ್ ಕೂಡ ಹಿಟ್ ಆಗಿದೆ: ಬಿಎಸ್‌ಪಿ ಸಂಸದ
ಕೇಂದ್ರ ಬಜೆಟ್‌ನಲ್ಲಿ ಸಾಮಾನ್ಯ ಜನರಿಗೆ ನೀಡಲಾದ ಪರಿಹಾರವು ಶಾರುಖ್ ಖಾನ್ ಅಭಿನಯದ 'ಪಠಾಣ್' ಚಿತ್ರದಂತೆ ಹಿಟ್ ಆಗಿದೆ ಎಂದು ಬಿಎಸ್‌ಪಿ ನಾಯಕ ಮಲೂಕ್ ನಗರ್ ಬುಧವಾರ ಹೇಳಿದ್ದಾರೆ.

ಕೇಂದ್ರ ಬಜೆಟ್ 2023: ಆರೋಗ್ಯ ಕ್ಷೇತ್ರಕ್ಕೆ ಸಿಕ್ಕಿದ್ದು 88 ಸಾವಿರ ಕೋಟಿ ರೂಪಾಯಿ, ಶೇ.2.71ರಷ್ಟು ಹೆಚ್ಚಳ!
ಬಜೆಟ್‌ನಲ್ಲಿ ಆರೋಗ್ಯ ಕ್ಷೇತ್ರಕ್ಕೆ 88,956 ಕೋಟಿ ರೂ. ಹಿಂದಿನ ಬಜೆಟ್ ಗೆ ಹೋಲಿಸಿದರೆ 2,350 ಕೋಟಿ ಅಂದರೆ ಶೇ. 2.71ರಷ್ಟು ಹೆಚ್ಚಿಸಲಾಗಿದೆ.

ಕೇಂದ್ರ ಬಜೆಟ್ 2023: ವಿರೋಧಿಸುವ ಏಕೈಕ ಉದ್ದೇಶ ಬಿಟ್ಟು ಕರ್ನಾಟಕದ ಸಂಸ್ಕೃತಿಗೆ ತಕ್ಕಂತೆ ಸಿದ್ದರಾಮಯ್ಯ ಮಾತನಾಡಲಿ: ಪ್ರಹ್ಲಾದ್ ಜೋಶಿ
ಎಲ್ಲವನ್ನೂ ವಿರೋಧಿಸಬೇಕೆಂಬುದನ್ನು ವಿರೋಧ ಪಕ್ಷಗಳು ಪಾಲಿಸಿ ಮಾಡಿಕೊಂಡು ಬಿಟ್ಟಿವೆ. ಆದರೆ, ಕೇಂದ್ರ ಬಜೆಟ್ ವಿರೋಧಿಸುವ ಭರದಲ್ಲಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದಾರೆಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿಯವರು ಹೇಳಿದ್ದಾರೆ.

ಕೇಂದ್ರ ಬಜೆಟ್ 2023: ಹಿರಿಯ ನಾಗರೀಕರಿಗೆ ಸಿಹಿ ಸುದ್ದಿ; ಉಳಿತಾಯಕ್ಕೆ ಹೊಸ ಯೋಜನೆಗಳ ಘೋಷಣೆ
ಕೇಂದ್ರ ಬಜೆಟ್ 2023ರಲ್ಲಿ ಹಿರಿಯ ನಾಗರಿಕರಿಗೆ ಕೇಂದ್ರ ಸರ್ಕಾರ ಸಿಹಿ ಸುದ್ದಿಯನ್ನು ನೀಡಿದೆ. ಬ್ಯಾಂಕ್ನಲ್ಲಿ ಠೇವಣಿ ಇರಿಸಿ ಬಡ್ಡಿಯ ಆಧಾರದ ಮೇಲೆ ಜೀವನ ಸಾಗಿಸುವ ಹಿರಿಯ ನಾಗರಿಕರಿಗೆ ಇದು ಶುಭ ಸುದ್ದಿಯಾಗಿದೆ.

ವಿವಾದ್ ಸೇ ವಿಶ್ವಾಸ್- 2: ವಾಣಿಜ್ಯ ವಿವಾದಗಳ ಪರಿಹಾರಕ್ಕೆ ಮತ್ತೊಂದು ಯೋಜನೆ ಪ್ರಕಟ
ವಾಣಿಜ್ಯ ವಿವಾದಗಳ ಇತ್ಯರ್ಥಕ್ಕಾಗಿ ವಿವಾದ್ ಸೆೇ ವಿಶ್ವಾಸ್-2 ಯೋಜನೆಯಡಿ ಸರ್ಕಾರ ಮತ್ತೊಂದು ಪರಿಹಾರ ಯೋಜನೆಯನ್ನು ಜಾರಿಗೆ ತರಲಿದೆ ಎಂದು ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಬುಧವಾರ ಹೇಳಿದ್ದಾರೆ.

ಕೇಂದ್ರ ಬಜೆಟ್ 2023: ರಕ್ಷಣಾ ವಲಯಕ್ಕೆ 5.39 ಲಕ್ಷ ಕೋಟಿ ರೂ. ಅನುದಾನ
ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಬುಧವಾರ ಪ್ರಸಕ್ತ ಸಾಲಿನ ಕೇಂದ್ರ ಬಜೆಟ್ ನ್ನು ಮಂಡನೆ ಮಾಡಿದ್ದು, ರಕ್ಷಣಾ ವಲಯಕ್ಕೆ ರೂ.5.39 ಲಕ್ಷ ಕೋಟಿ ಮೀಸಲಿಟ್ಟಿದ್ದಾರೆ.

ಲೋಕಸಭೆ ಚುನಾವಣೆ ಮೇಲೆ ಕಣ್ಣು: ಅಂತ್ಯೋದಯ ಉಚಿತ ಆಹಾರ ಯೋಜನೆ 1 ವರ್ಷ ವಿಸ್ತರಣೆ; ಸಂಪೂರ್ಣ ವೆಚ್ಚ ಭರಿಸಲಿದೆ ಕೇಂದ್ರ ಸರ್ಕಾರ
ಲೋಕಸಭಾ ಚುನಾವಣೆಯ ಮೇಲೆ ಕಣ್ಣಿಟ್ಟಿರುವ ಕೇಂದ್ರ ಸರ್ಕಾರ ಮುಂದಿನ ವರ್ಷದವರೆಗೆ ಉಚಿತ ಆಹಾರ ಯೋಜನೆಯನ್ನು ವಿಸ್ತರಿಸುವುದಾಗಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಪ್ರಕಟಿಸಿದ್ದಾರೆ.

ಕೇಂದ್ರ ಬಜೆಟ್ 2023-24: ಸರ್ಕಾರಿ ಒಡೆತನದ ಹಳೆಯ ವಾಹನಗಳನ್ನು ಸ್ಕ್ರ್ಯಾಪ್ ಮಾಡಲು ಹಣ ನಿಗದಿ
ಕೇಂದ್ರ ಸರ್ಕಾರದ ಒಡೆತನದ ಹಳೆಯ ವಾಹನಗಳನ್ನು ಸ್ಕ್ರ್ಯಾಪ್ ಮಾಡಲು ಸಾಕಷ್ಟು ಹಣವನ್ನು ಮಂಜೂರು ಮಾಡಲಾಗಿದೆ ಮತ್ತು ಹಳೆಯ ವಾಹನಗಳು ಹಾಗೂ ಆಂಬ್ಯುಲೆನ್ಸ್‌ಗಳನ್ನು ಬದಲಾಯಿಸುವಲ್ಲಿ ರಾಜ್ಯಗಳಿಗೆ ಬೆಂಬಲ ನೀಡಲಾಗುವುದು ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಬುಧವಾರ ಹೇಳಿದ್ದಾರೆ

ಹಣಕಾಸು ಸಚಿವೆ ನಿರ್ಮಲಾ ಸೀರೆಯ ಹಿಂದಿನ ಕಥೆ...
ಪ್ರತಿವರ್ಷ ಬಜೆಟ್ ಮಂಡನೆ ಸಂದರ್ಭದಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್ ಪ್ರತಿಗಳನ್ನು ಸದನಕ್ಕೆ ಹೇಗೆ ತಂದರು, ಯಾವ ಬಣ್ಣದ ಸೀರೆ ಉಟ್ಟುಕೊಂಡು ಬಂದರು ಎಂದು ಸುದ್ದಿಯಾಗುತ್ತದೆ.

