ಕಾರು ಕಳ್ಳತನ

ದೆಹಲಿ: ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ಪತ್ನಿಗೆ ಸೇರಿದ ಎಸ್‌ಯುವಿ ಕಳ್ಳತನ
ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ಅವರ ಪತ್ನಿಯ ಹೆಸರಿನಲ್ಲಿ ನೋಂದಾಯಿಸಲಾದ ಎಸ್‌ಯುವಿ ದಕ್ಷಿಣ ದೆಹಲಿಯಿಂದ ಕಳವಾಗಿದೆ ಎಂದು ವರದಿಯಾಗಿದ್ದು, ಇನ್ನೂ ಪತ್ತೆಯಾಗಿಲ್ಲ ಎಂದು ಪೊಲೀಸರು ಭಾನುವಾರ ತಿಳಿಸಿದ್ದಾರೆ.

ಮೈಸೂರು: ಮಾಜಿ ಸಚಿವರ ಮನೆಯಲ್ಲಿ ಐಷಾರಾಮಿ ಕಾರು ಕಳ್ಳತನ; ಗಣೇಶ ವಿಗ್ರಹ -ಫೈಲ್ಸ್ ವಾಪಸ್ ಇಟ್ಟು ಪರಾರಿ!
ಮುಖಕ್ಕೆ ಮಾಸ್ಕ್ ಹಾಕಿಕೊಂಡು ರಾಜಾರೋಷವಾಗಿ ಮನೆಗೆ ನುಗ್ಗಿದ ಕಳ್ಳರು ಮಾಜಿ ಸಚಿವರ ಮನೆಯಲ್ಲಿ ಐಷಾರಾಮಿ ಕಾರು ಕಳ್ಳತನ ಮಾಡಿದ್ದಾರೆ. ಮಾಜಿ ಸಚಿವ ಕೋಟೆ ಶಿವಣ್ಣ ಅವರ ಇನ್ನೋವಾ ಕಾರು ಕಳ್ಳತನವಾಗಿದೆ.

ಬೆಂಗಳೂರು: ವಂಚನೆ ಪ್ರಕರಣ; ಸುಮಾರು 10 ಕೋಟಿ ರೂ. ಮೌಲ್ಯದ ಕಾರುಗಳೊಂದಿಗೆ ಆರೋಪಿ ಪರಾರಿ
ಬೆಂಗಳೂರಲ್ಲಿ ಮತ್ತೊಂದು ಬೃಹತ್ ವಂಚನೆ ಪ್ರಕರಣ ಬೆಳಕಿಗೆ ಬಂದಿದೆ. ಟ್ರಾವೆಲ್ಸ್ ಹೆಸರಿನಲ್ಲಿ ಕಾರುಗಳನ್ನ ಬಾಡಿಗೆಗೆ ಪಡೆದು 10 ಕೋಟಿಗೂ ಅಧಿಕ ಮೌಲ್ಯದ ಕಾರುಗಳ ಸಮೇತ ಆರೋಪಿ ಪರಾರಿಯಾಗಿದ್ದಾನೆ.

ಬೆಳಗಾವಿಯಲ್ಲಿ ಹೈ-ಟೆಕ್ ಕಳ್ಳರ ಕರಾಮತ್ತು: ರಿಮೋಟ್ ಕೀ ಹ್ಯಾಕ್ ಮಾಡಿ ಕಾರು ಕಳವು, ಸಿಸಿಟಿವಿಯಲ್ಲಿ ದೃಶ್ಯ ಸೆರೆ
ರಿಮೋಟ್ ಕೀ ಹ್ಯಾಕ್ ಮಾಡಿ ಮನೆ ಮುಂದೆ ನಿಲ್ಲಿಸಿದ್ದ ಎರಡು ಹೊಸ ಇನ್ನೋವಾ ಕ್ರಿಸ್ಟಾ ಕಾರನ್ನು ದುಷ್ಕರ್ಮಿಗಳು ಅಪಹರಿಸಿ ಪರಾರಿಯಾಗಿರುವ ಘಟನೆ ನಗರದ ಮಾಳಮಾರುತಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ವಾಹನ ಕಳ್ಳತನವಾಗಿದೆ ಎಂದು ಮಾಲೀಕ ದೂರು ದಾಖಲಿಸಿದ ಒಂದು ದಿನದ ನಂತರ ಓವರ್ ಸ್ಪೀಡ್ ಎಂದು ಚಲನ್ ನೀಡಿದ ಪೊಲೀಸರು
ಪೂರ್ವ ದೆಹಲಿಯಿಂದ ಕಾರನ್ನು ಕಳ್ಳತನ ಮಾಡಲಾಗಿದೆ ಎಂದು ಕಾರ್ ಮಾಲೀಕರು ದೂರು ದಾಖಲಿಸಿದೆ 24 ಗಂಟೆಗಳ ನಂತರ ರಾಷ್ಟ್ರದ ರಾಜಧಾನಿಯ ಎನ್‌ಎಚ್ -10 ರಲ್ಲಿ ಅತಿವೇಗವಾಗಿ ಚಲಿಸಿದ್ದಕ್ಕಾಗಿ ಸಂಚಾರಿ ಪೊಲೀಸರು ಚಲನ್ ನೀಡಿದ್ದಾರೆ.

ಪ್ರವಾಸಿಗನ ಸೋಗಿನಲ್ಲಿ 22 ಲಕ್ಷ ರೂ ಮೌಲ್ಯದ ಕಾರು ಕಳವು ಮಾಡಿದ್ದ ಆರೋಪಿ ಬಂಧನ
ಇತ್ತೀಚೆಗಷ್ಟೇ ಪ್ರವಾಸಿಗನ ಸೋಗಿನಲ್ಲಿ ಟ್ರಾವೆಲ್ವೊಂದಕ್ಕೆ ಕರೆ ಮಾಡಿ 22 ಲಕ್ಷ ರೂ ಮೌಲ್ಯದ ಕಾರು ಕಳವು ಮಾಡಿದ್ದ ಆರೋಪಿಯನ್ನು ಬ್ಯಾಟರಾಯನಪುರ ಪೊಲೀಸರು ಬಂಧಿಸಿದ್ದಾರೆ.

ಬೆಂಗಳೂರು: ಪ್ರವಾಸಿಗನ ಸೋಗಿನಲ್ಲಿ ಕಾರು ಕಳವು, ಆರೋಪಿಗೆ ಶೋಧ
ಪ್ರವಾಸಿಗನ ಸೋಗಿನಲ್ಲಿ ಟ್ರಾವೆಲ್ವೊಂದಕ್ಕೆ ಕರೆ ಮಾಡಿ 22 ಲಕ್ಷ ರೂ ಮೌಲ್ಯದ ಕಾರೊಂದು ಕಳ್ಳತನ ಮಾಡಿರುವ ಘಟನೆ ಬ್ಯಾಟರಾಯನಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಬೆಂಗಳೂರು: ಲಿಫ್ಟ್ ಕೇಳಿ ಕಾರನ್ನೇ ಹೊತ್ತೊಯ್ದ ಕಿರಾತಕ ಕಳ್ಳ
ಡ್ರಾಪ್ ಕೇಳಿದ ದುಷ್ಕರ್ಮಿಯೊಬ್ಬ ನಂತರ ನೆಪ ಮಾಡಿ ಕಾರನ್ನೇ ದೋಚಿ ಪರಾರಿಯಾಗಿರುವ ಘಟನೆ ನಾಗವಾರ ಸಿಗ್ನಲ್ ಬಳಿ ನಡೆದಿದೆ...

ಕಾರು ಖರೀದಿಗೆ ಮಾಲೀಕನ ಮನೆಗೇ ಕನ್ನ!
ಚಾಲಕನಾಗಿ ಕೆಲಸ ಮಾಡುತ್ತಿದ್ದ ಮನೆಯಲ್ಲಿ ಚಿನ್ನಾಭರಣ ಕದ್ದು ಪರಾರಿಯಾಗಲು ಯತ್ನಿಸುತ್ತಿದ್ದವನನ್ನು ಬಂಧಿಸಿರುವ ಎಚ್‍ಎಎಲ್ ಪೊಲೀಸರು ರು.7 ಲಕ್ಷ ಮೌಲ್ಯದ 230 ಗ್ರಾಂ ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ...

