ವಾಹನ ಕಳ್ಳತನವಾಗಿದೆ ಎಂದು ಮಾಲೀಕ ದೂರು ದಾಖಲಿಸಿದ ಒಂದು ದಿನದ ನಂತರ ಓವರ್ ಸ್ಪೀಡ್ ಎಂದು ಚಲನ್ ನೀಡಿದ ಪೊಲೀಸರು
ಪೂರ್ವ ದೆಹಲಿಯಿಂದ ಕಾರನ್ನು ಕಳ್ಳತನ ಮಾಡಲಾಗಿದೆ ಎಂದು ಕಾರ್ ಮಾಲೀಕರು ದೂರು ದಾಖಲಿಸಿದೆ 24 ಗಂಟೆಗಳ ನಂತರ ರಾಷ್ಟ್ರದ ರಾಜಧಾನಿಯ ಎನ್‌ಎಚ್ -10 ರಲ್ಲಿ ಅತಿವೇಗವಾಗಿ ಚಲಿಸಿದ್ದಕ್ಕಾಗಿ ಸಂಚಾರಿ ಪೊಲೀಸರು ಚಲನ್ ನೀಡಿದ್ದಾರೆ.

ನವದೆಹಲಿ: ಪೂರ್ವ ದೆಹಲಿಯಿಂದ ಕಾರನ್ನು ಕಳ್ಳತನ ಮಾಡಲಾಗಿದೆ ಎಂದು ಕಾರ್ ಮಾಲೀಕರು ದೂರು ದಾಖಲಿಸಿದೆ 24 ಗಂಟೆಗಳ ನಂತರ ರಾಷ್ಟ್ರದ ರಾಜಧಾನಿಯ ಎನ್‌ಎಚ್ -10 ರಲ್ಲಿ ಅತಿವೇಗವಾಗಿ ಚಲಿಸಿದ್ದಕ್ಕಾಗಿ ಸಂಚಾರಿ ಪೊಲೀಸರು ಚಲನ್ ನೀಡಿದ್ದಾರೆ.
ಆಗಸ್ಟ್ 24 ರ ರಾತ್ರಿ ಪಶ್ಚಿಮ ವಿನೋದ್ ನಗರದ ಆಸ್ಪತ್ರೆಯ ಬಳಿ ವಾಹನವನ್ನು ನಿಲ್ಲಿಸಲಾಗಿದ್ದು, ಮರುದಿನ ಮಧ್ಯಾಹ್ನ ಕಾಣೆಯಾಗಿದೆ.
ಒಂದು ದಿನದ ನಂತರ, ವಾಹನವು ಮುಂಡ್ಕಾ ಬಳಿ ವೇಗದ ಮಿತಿಯನ್ನು ಉಲ್ಲಂಘಿಸಿರುವುದು ಕಂಡುಬಂದ ಕಾರಣ ದಂಡವನ್ನು ಪಾವತಿಸುವಂತೆ ಕಾರಿನ ಮಾಲೀಕರಿಗೆ ಸಂಚಾರಿ ಪೊಲೀಸರು ಚಲನ್ ಕಳುಹಿಸಿದ್ದಾರೆ.
ಅವರ ಪತ್ನಿ, ರಂಗಭೂಮಿ ಕಲಾವಿದೆ, ತುರ್ತು ಪರಿಸ್ಥಿತಿಯ ಕಾರಣ ಆಸ್ಪತ್ರೆಯ ಬಳಿ ಕಾರನ್ನು ರಸ್ತೆಯಲ್ಲಿ ನಿಲ್ಲಿಸಬೇಕಾಯಿತು. "ದುರದೃಷ್ಟವಶಾತ್, ಕುಟುಂಬ ತುರ್ತುಸ್ಥಿತಿ ಇರುವುದರಿಂದ ನಾನು ಕಾರನ್ನು ರಸ್ತೆಯ ಮೇಲೆ ನಿಲ್ಲಿಸಿದೆ" ಎಂದು ಅವರು ಹೇಳಿದ್ದಾರೆ.
ಕಾರು ಕಳ್ಳತನವಾದ ಬಗ್ಗೆ ಆಗಸ್ಟ್ 25ರಂದು ಆನ್ ಲೈನ್ ಮೂಲಕ ಎಫ್ಐಆರ್ ದಾಖಲಿಸಿರುವುದಾಗಿ ಕಾರು ಮಾಲೀಕರ ಪತ್ನಿ ಹೇಳಿದ್ದಾರೆ. ಆದರೆ ದೂರು ದಾಖಲಿಸಿದ ಒಂದು ದಿನದ ನಂತರ ಕಾರು ಪತ್ತೆಯಾಗಿದ್ದರೂ ಅದನ್ನು ವಶಕ್ಕೆ ಪಡೆಯದ ಪೊಲೀಸರು, ಓವರ್ ಸ್ಪೀಡ್ ಗಾಗಿ ಮಾಲೀಕರಿಗೆ ದಂಡ ವಿಧಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


