ಇಂಧನ ದರ ಏರಿಕೆ

ಜಾಗತಿಕ ಕಚ್ಚಾ ತೈಲದ ಬೆಲೆ ಇಳಿದಿದ್ದರೂ, ಕೇಂದ್ರ ಸರ್ಕಾರ ಯಾಕೆ ಇಂಧನ ದರ ಇಳಿಸಿಲ್ಲ- ಖರ್ಗೆ ವಾಗ್ದಾಳಿ
ಕಚ್ಚಾ ತೈಲ ಬೆಲೆ ದುಬಾರಿಯಾಗಿದ್ದಾಗ ಸಾರ್ವಜನಿಕರು ತೊಂದರೆ ಅನುಭವಿಸಿದರು. ಈಗ ಕಚ್ಚಾ ತೈಲ ಅಗ್ಗವಾಗಿದೆ, ಸಾರ್ವಜನಿಕರು ಇನ್ನೂ ಏಕೆ ಹೊರೆಯನ್ನು ಹೊರುತ್ತಿದ್ದಾರೆ ಎಂದು ಅವರು ಪ್ರಶ್ನಿಸಿದ್ದಾರೆ.

ಇಂಧನ ಸಂಗ್ರಹಣೆ-ಕಾಳಸಂತೆ ವಿರುದ್ಧ ಕೇಂದ್ರ ಸರ್ಕಾರ ಕಠಿಣ ಕ್ರಮ: ಪೆಟ್ರೋಲ್ ಬಂಕ್‌ಗಳಲ್ಲಿ Bulk ಇಂಧನ ಖರೀದಿಗೆ ನಿಷೇಧ..!
ಕೈಗಾರಿಕಾ, ವಾಣಿಜ್ಯ ಹಾಗೂ ಸಾಂಸ್ಥಿಕ ಬಳಕೆದಾರರು ಇನ್ನು ಮುಂದೆ ಸಾಮಾನ್ಯ ಪೆಟ್ರೋಲ್ ಬಂಕ್‌ಗಳಿಂದ ದೊಡ್ಡ ಪ್ರಮಾಣದಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ಖರೀದಿಸಲು ಅವಕಾಶ ಇರುವುದಿಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ.

ಇಂಧನ ದರ ಏರಿಕೆ ಎಫೆಕ್ಟ್: ರಾಜ್ಯದಲ್ಲಿ ಎಲೆಕ್ಟ್ರಿಕ್ ವಾಹನಗಳ ಬಳಕೆ ಹೆಚ್ಚಳ; ಎರಡು ತಿಂಗಳಲ್ಲಿ ವಿದ್ಯುತ್ ಬೇಡಿಕೆ ಶೇ.2ರಷ್ಟು ಏರಿಕೆ..!
ಬೆಂಗಳೂರು ಹಾಗೂ ಹೆದ್ದಾರಿ ಪ್ರದೇಶಗಳಲ್ಲಿ ಫಾಸ್ಟ್ ಚಾರ್ಜಿಂಗ್ ಕೇಂದ್ರಗಳಿಗೆ ಬೇಡಿಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಸೌರಶಕ್ತಿ ಆಧಾರಿತ ಹೊಸ EV ಚಾರ್ಜಿಂಗ್ ಘಟಕಗಳನ್ನು ಸ್ಥಾಪಿಸಲು ಸರ್ಕಾರ ಯೋಜನೆ ರೂಪಿಸುತ್ತಿದೆ.

ಇಂಧನ ದರ ಏರಿಕೆ ಸಂಕಷ್ಟ: ಬಸ್ ಟಿಕೆಟ್ ದರ ಹೆಚ್ಚಳ ಸಾಧ್ಯತೆ!
ಡೀಸೆಲ್ ದರ ಏರಿಕೆಯಿಂದ ಕಾರ್ಯಾಚರಣಾ ವೆಚ್ಚದಲ್ಲಿ ಗಣನೀಯ ಹೆಚ್ಚಳವಾಗಿದ್ದು, ಈಗಿನ ಪರಿಸ್ಥಿತಿಯಲ್ಲಿ ಪ್ರಯಾಣ ದರ ಹೆಚ್ಚಳದ ಪ್ರಸ್ತಾಪವೇ ಏಕೈಕ ಆಯ್ಕೆಯಾಗಿ ಕಾಣಿಸುತ್ತಿದೆ.

ಪ್ರತಿ ದಿನವೂ ಜನರ ಜೇಬಿಗೆ ಕತ್ತರಿ; ಇಂಧನ ದರ ಏರಿಕೆ ಮೂಲಕ 43 ಲಕ್ಷ ಕೋಟಿ ರೂ ಲೂಟಿ: ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ವಾಗ್ದಾಳಿ..!
ಇಂಧನ ದರ ಏರಿಕೆಯ ದೈನಂದಿನ ದಾಳಿ ಇನ್ನೂ ನಿಂತಿಲ್ಲ. 10 ದಿನಗಳಲ್ಲಿ ನಾಲ್ಕನೇ ಬಾರಿ ಪೆಟ್ರೋಲ್ ಮತ್ತು ಡೀಸೆಲ್ ದರ ಹೆಚ್ಚಿಸಲಾಗಿದೆ. ಮೋದಿ ಸರ್ಕಾರ ಪೆಟ್ರೋಲ್ ಸಿಂಪಡಿಸಿ ಜನರ ಉಳಿತಾಯಕ್ಕೆ ಬೆಂಕಿ ಹಚ್ಚುತ್ತಿದೆ.

ಇಂಧನ ಬೆಲೆ ಏರಿಸುವ ಮೂಲಕ ಸರ್ಕಾರ ಜನರ ಸುಲಿಗೆ ಮಾಡುತ್ತಿದೆ: ಸೋನಿಯಾ ಗಾಂಧಿ
ದೇಶದಲ್ಲಿ ಲಾಕ್ ಡೌನ್ ಜಾರಿಗೊಳಿಸಿದ ನಂತರ 22 ಬಾರಿ ಪೆಟ್ರೋಲ್, ಡೀಸೆಲ್ ದರ ಏರಿಕೆ ಮಾಡಿದ ಕೇಂದ್ರ ಸರ್ಕಾರದ ವಿರುದ್ಧ ಸೋಮವಾರ ತೀವ್ರ ವಾಗ್ದಾಳಿ ನಡೆಸಿದ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು, ಇಂಧನ ದರ ಏರಿಕೆ ಮೂಲಕ ಸರ್ಕಾರ ಜನರ ಸುಲಿಗೆ ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇಂಧನ ದರ ಏರಿಕೆ ವಿರೋಧಿಸಿ ಸೈಕಲ್ ಜಾಥಾ: ದಿಗ್ವಿಜಯ್ ಸಿಂಗ್ ಸೇರಿ ನೂರಾರು ಕೈ ಕಾರ್ಯಕರ್ತರ ವಿರುದ್ಧ ಎಫ್ ಐಆರ್
ದೇಶದಲ್ಲಿ ಸತತವಾಗಿ ಇಂಧನ ದರ ಏರಿಕೆ ಮಾಡುತ್ತಿರುವ ಕೇಂದ್ರ ಸರ್ಕಾರದ ಕ್ರಮವನ್ನು ವಿರೋಧಿಸಿ ಸೈಕಲ್ ಜಾಥಾ ನಡೆಸಿದ್ದ ಕಾಂಗ್ರೆಸ್ ಮುಖಂಡ ದಿಗ್ವಿಜಯ್ ಸಿಂಗ್ ಹಾಗೂ ನೂರಾರು ಕಾಂಗ್ರೆಸ್ ಕಾರ್ಯಕರ್ತರ ವಿರುದ್ಧ ಇದೀಗ ಮಧ್ಯ ಪ್ರದೇಶ ಪೊಲೀಸರು ಎಫ್ ಐಆರ್ ದಾಖಲಿಸಿಕೊಂಡಿದ್ದಾರೆ.

ದೆಹಲಿ: ಎಎಪಿ ಸರ್ಕಾರ ಇಂಧನ ದರ ಇಳಿಸುವಂತೆ ಒತ್ತಾಯ: ಕೇಂದ್ರ ಸಚಿವ ಎತ್ತಿನ ಗಾಡಿ ಏರಿ ಪ್ರತಿಭಟನೆ !
ರಾಷ್ಟ್ರ ರಾಜಧಾನಿಯಲ್ಲಿ ಪೆಟ್ರೋಲ್ ಬೆಲೆ ಲೀಟರಿಗೆ 81.82 ಹಾಗೂ ಡೀಸೆಲ್ ಬೆಲೆ 73.53 ರೂ ಆಗಿದ್ದು, ಕೇಂದ್ರ ಸಚಿವ ವಿಜಯ್ ಗೋಯಲ್ ನೇತೃತ್ವದಲ್ಲಿ ಇಂದು ಬಿಜೆಪಿ ವತಿಯಿಂದ ಎತ್ತಿನ ಗಾಡಿ ಏರಿ ಪ್ರತಿಭಟನೆ ನಡೆಸಲಾಯಿತು.

ಮತ್ತೆ ತೈಲೋತ್ಪನ್ನಗಳ ದರ ಏರಿಕೆ: ಸಾರ್ವಕಾಲಿಕ ದಾಖಲೆ ಬರೆದ ಪೆಟ್ರೋಲ್, ಮುಂಬೈನಲ್ಲಿ 91.8 ರೂ
ಗಗನದತ್ತ ಮುಖ ಮಾಡಿರುವ ತೈಲೋತ್ಪನ್ನಗಳ ದರ ಮತ್ತೆ ಏರಿಕೆಯಾಗಿದ್ದು, ಪೆಟ್ರೋಲ್ ದರ ಮುಂಬೈನಲ್ಲಿ ಸಾರ್ವಕಾಲಿಕ ದಾಖಲೆ ಏರಿಕೆ ಕಂಡಿದೆ.

