Workers

ವಿಸ್ಟ್ರಾನ್ ಘಟಕ ಧ್ವಂಸ ಪ್ರಕರಣ: ಸ್ಥಳದ ಅಭಾವ ಕಾರಣ ಬಂಧಿತರನ್ನು ಪ್ರತ್ಯೇಕ ಕಾರಾಗೃಹಗಳಿಗೆ ರವಾನೆ
ನರಸಾಪುರದ ಸಮೀಪದ ವಿಸ್ಟ್ರಾನ್ ಘಟಕದ ಮೇಲೆ ನಡೆದ ದಾಳಿಯ ಕೃತ್ಯದಲ್ಲಿ ಪೊಲೀಸರು 149 ಮಂದಿಯನ್ನು ಬಂಧನಕ್ಕೊಳಪಡಿಸಿದ್ದು, ಬಂಧಿತರನ್ನು ಪ್ರತ್ಯೇಕ ಜೈಲುಗಳಿಗೆ ರವಾನಿಸಲಾಗುತ್ತಿದೆ ಎಂದು ವರದಿಗಳು ತಿಳಿಸಿವೆ.

ಹಿಂಸಾಚಾರಕ್ಕೆ ತಿರುಗಿದ ವಿಸ್ಟ್ರಾನ್ ಕಂಪನಿಯ ಕಾರ್ಮಿಕರ ಮುಷ್ಕರ; ವಾಹನಗಳಿಗೆ ಬೆಂಕಿ, ಲಾಠಿಪ್ರಹಾರ
ಇತ್ತೀಚೆಗೆ ಕೋಲಾರದ ನರಸಾಪುರ ಕೈಗಾರಿಕಾ ಪ್ರದೇಶದಲ್ಲಿ ಆರಂಭಿಸಲಾಗಿದ್ದ ವಿಸ್ಟ್ರಾನ್ ಕಂಪನಿಯಲ್ಲಿ ಕಾರ್ಮಿಕರ ಮುಷ್ಕರ ಹಿಂಸಾಚಾರಕ್ಕೆ ತಿರುಗಿದ್ದು, ಕಂಪನಿಯ ಕಿಟಕಿ ಗಾಜುಗಳನ್ನು ಪುಡಿ ಪುಡಿ ಮಾಡಿ ವಾಹನಗಳಿಗೆ ಬೆಂಕಿ ಹಚ್ಚಿದ್ದಾರೆ.

ಉಪಚುನಾವಣೆ ಸೋಲು ಬಳಿಕ ಕಾರ್ಯಕರ್ತರಿಗಾಗಿ ತರಬೇತಿ ನೀಡಲು ಕಾಂಗ್ರೆಸ್ ಮುಂದು!
ಉಪಚುನಾವಣೆ ಸೋಲನ್ನು ಗಂಭೀರವಾಗಿ ಪರಿಗಣಿಸಿರುವ ರಾಜ್ಯ ಕಾಂಗ್ರೆಸ್, ಮುಂಬರುವ ಚುನಾವಣೆಗಳನ್ನು ಸವಾಲಾಗಿ ಪರಿಗಣಿಸುತ್ತಿದ್ದು, ಇದಕ್ಕಾಗಿ ಭರ್ಜರಿ ಸಿದ್ಧತೆಗಳನ್ನು ನಡೆಸುತ್ತಿದೆ.

ಪಕ್ಷದ ಮುಖ್ಯಸ್ಥರಾಗಿ ರಾಹುಲ್ ಗಾಂಧಿ ವಾಪಾಸಾಗುವುದು ಕೋಟ್ಯಂತರ ಕಾರ್ಯಕರ್ತರ ಬಯಕೆ: ಕಾಂಗ್ರೆಸ್
ಪಕ್ಷದ ಸೈದ್ಧಾಂತಿಕ ಚಿಂತನೆಯನ್ನು ಅತ್ಯುತ್ತಮವಾಗಿ ನಿರ್ಹಿಸುವ ರಾಹುಲ್ ಗಾಂಧಿ ತಮ್ಮ ಉನ್ನತ ನಾಯಕ ಆಗಬೇಕೆಂದು ಹಾಗೂ ವಾಪಸ್ ಮರಳುವಂತೆ ಕೋಟ್ಯಂತರ ಕಾಂಗ್ರೆಸ್ ಕಾರ್ಯಕರ್ತರು ಬಯಸಿದ್ದಾರೆ ಎಂದು ಪಕ್ಷ ತಿಳಿಸಿದೆ.

ಕಾರ್ಮಿಕರ ದಿಢೀರ್ ಪ್ರತಿಭಟನೆ: ಟೊಯೋಟಾ ಮೋಟಾರ್ಸ್ ಬಿಡದಿ ತಯಾರಿಕಾ ಘಟಕ ಲಾಕೌಟ್!
ಕಾರ್ಮಿಕ ಸಂಘದ ಪದಾಧಿಕಾರಿಯನ್ನು ಸೇವೆಯಿಂದ ಅಮಾನತು ಮಾಡಿದ್ದನ್ನು ಖಂಡಿಸಿ ಸಾವಿರಾರು ಕಾರ್ಮಿಕರು ದಿಢೀರ್ ಪ್ರತಿಭಟನೆಗಿಳಿದ ಬಳಿಕ ಬಿಡದಿಯ ಕೈಗಾರಿಗಾ ಪ್ರದೇಶದಲ್ಲಿರುವ ಟೊಯೋಟಾ ಕಿರ್ಲೋಸ್ಕರ್ ಮೋಟಾರ್ಸ್ ಕಂಪನಿ (ಟಿಕೆಎಂ)ಯನ್ನು ಅನಿರ್ದಿಷ್ಟಾವಧಿವರೆಗೂ ಲಾಕೌಟ್ ಮಾಡಲಾಗಿದೆ.

ಆರ್ ಎಸ್ ಎಸ್ ಮಾದರಿಯಲ್ಲಿ ಕಾರ್ಯಕರ್ತರಿಗೆ ತರಬೇತಿ ನೀಡಲು ಮುಂದಾದ ಕಾಂಗ್ರೆಸ್!
ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮಾದರಿಯಲ್ಲಿ ತರಬೇತಿ ನೀಡಲು ಕಾಂಗ್ರೆಸ್ ಪಕ್ಷ ನೀಡಲು ಸಜ್ಜಾಗುತ್ತಿದೆ. ಕೆಪಿಸಿಸಿ ಅಧ್ಯಕ್ಷರಾಗಿ ಡಿಕೆ ಶಿವಕುಮಾರ್ ಅಧಿಕಾರ ಸ್ವೀಕರಿಸಿದ ಮೇಲೆ ಪಕ್ಷವನ್ನು ತಳ ಮಟ್ಟದಿಂದ ಬೂತ್ ಮಟ್ಟದಲ್ಲಿ ಸಂಘಟಿಸಲು ನಿರ್ಧರಿಸಿದ್ದಾರೆ

ತೊಂದರೆಗೊಳಗಾದ ಕಾರ್ಮಿಕರಿಗೆ ಶೀಘ್ರ ಪರಿಹಾರ- ಸಚಿವ ಶಿವರಾಮ ಹೆಬ್ಬಾರ
ಕೋವಿಡ್-19 ಲಾಕ್ ಡೌನ್ ಸಂದರ್ಭದಲ್ಲಿ ತೊಂದರೆಗೊಳಗಾದ ಕ್ಷೌರಿಕರು, ಅಗಸರು, ಕಟ್ಟಡ ಕಾರ್ಮಿಕರು, ಉದ್ಯೋಗ ಖಾತರಿ ಯೋಜನೆಯಡಿ ನಿರ್ಮಾಣ ಕೆಲಸ ಮಾಡಿದ ಕಾರ್ಮಿಕರಿಗೆ ಹಾಗೂ ಜೋಳ ಬೆಳೆಗಾರರಿಗೆ ಮುಖ್ಯ ಮಂತ್ರಿ ಬಿಡುಗಡೆ ಮಾಡಿರುವ ಅನುದಾನ ಪ್ಯಾಕೇಜ್‍ಗಳನ್ನು ಫಲಾನುಭವಿಗಳಿಗೆ ಶೀಘ್ರವಾಗಿ ತಲುಪಿಸುವಂತೆ ಕಾರ್ಮಿಕ ಹಾಗೂ ಸಕ್ಕರೆ ಸಚಿವ ಅರಬೈಲ್ ಶಿವರಾಮ ಹೆಬ್ಬಾರ ತಿಳಿಸಿದ್ದ

ಬೆಂಕಿಯಿಂದ ಗುಡಿಸಲುಗಳು ನಾಶ: ಕಾರ್ಮಿಕರ ಪತ್ತೆ ಹಚ್ಚಿ, ಪುನರ್ವಸತಿ ಕಲ್ಪಿಸಿ; ಸರ್ಕಾರಕ್ಕೆ 'ಹೈ' ಸೂಚನೆ
ನಗರದ ಕಾಚರಕನಹಳ್ಳಿ ಬಳಿಯ ಕೊಳಗೇರಿಯಲ್ಲಿ ವಲಸೆ ಕಾರ್ಮಿಕರಿಗೆ ಸೇರಿದ 90ಕ್ಕೂ ಅಧಿಕ ಗುಡಿಸಲುಗಳಿಗೆ ಬೆಂಕಿ ಹಚ್ಚಿ ನಾಶಪಡಿಸಿರುವ ಪ್ರಕರಣ ಸಂಬಂಧ ಕಾರ್ಮಿಕರಿಗೆ ಪುನರ್ವಸತಿ ಹಾಗೂ ಪರಿಹಾರ ಕಲ್ಪಿಸುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶಿಸಿದೆ.

ಲಾಕ್‌ಡೌನ್ ಸಮಯದಲ್ಲಿ ವೇತನ ಪಾವತಿಸದ ಸಂಸ್ಥೆಗಳ ವಿರುದ್ಧ ಕ್ರಮ ಕೈಗೊಳ್ಳುವಂತಿಲ್ಲ: ಸುಪ್ರೀಂ ಕೋರ್ಟ್
ಖಾಸಗಿ ಕಂಪೆನಿಗಳ ಮಾಲೀಕರಿಗೆ ಸಮಾಧಾನದ ಸುದ್ದಿ ನೀಡಿರುವ ಸುಪ್ರೀಂ ಕೋರ್ಟ್, ಲಾಕ್ ಡೌನ್ ಸಮಯದಲ್ಲಿ ಕೆಲಸಗಾರರಿಗೆ ವೇತನ ನೀಡದಿರುವ ಕಂಪೆನಿಗಳ ಮಾಲೀಕರ ವಿರುದ್ಧ ಜುಲೈ ಕೊನೆಯವರೆಗೆ ಕಠಿಣ ಕ್ರಮ ತೆಗೆದುಕೊಳ್ಳಬಾರದು ಎಂದು ಆದೇಶ ನೀಡಿದೆ.

