won

ಐಪಿಎಲ್ 2020 ಮೊದಲ ಕ್ವಾಲಿಫೈಯರ್: ಡೆಲ್ಲಿ ವಿರುದ್ಧ ಮುಂಬೈಗೆ 57 ರನ್ ಗಳ ಭರ್ಜರಿ ಗೆಲುವು, ಫೈನಲ್ ಗೆ ಲಗ್ಗೆ!
ಐಪಿಎಲ್ 2020 ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು 57 ರನ್ ಗಳ ಅಂತರದಿಂದ ಮಣಿಸಿದ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ಫೈನಲ್ ಪಂದ್ಯಕ್ಕೆ ಲಗ್ಗೆ ಇಟ್ಟಿದೆ

ಐಪಿಎಲ್ 2020: 10 ವಿಕೆಟ್ ಗಳಿಂದ ಗೆಲುವು ಸಾಧಿಸಿ ಪ್ಲೇ ಆಫ್ ಗೆ ಎಂಟ್ರಿಯಾದ ಸನ್ ರೈಸರ್ಸ್
ಇಲ್ಲಿನ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ 56 ನೇ ಐಪಿಎಲ್ ಪಂದ್ಯದಲ್ಲಿ ಹಾಲಿ ಚಾಂಪಿಯನ್ಮುಂಬೈ ಇಂಡಿಯನ್ಸ್ ತಂಡವನ್ನು ಭರ್ಜರಿ 10 ವಿಕೆಟ್ ಗಳಿಂದ ಸೋಲಿಸಿದ ಹೈದರಾಬಾದ್ ಸನ್ ರೈಸರ್ಸ್ ಪ್ಲೇ ಆಫ್ ಗೆ ಸಾಗಿದೆ.

ರಾಜಸ್ಥಾನ ರಾಯಲ್ಸ್ ತಂಡವನ್ನು 60 ರನ್ ಗಳಿಂದ ಸೋಲಿಸಿದ ಕೆಕೆಆರ್, ಫ್ಲೇ ಆಫ್ ಕನಸು ಜೀವಂತ
ಮಹತ್ವದ ಪಂದ್ಯದಲ್ಲಿ ನಿರಾಸೆ ಅನುಭವಿಸಿದ ರಾಜಸ್ಥಾನ ರಾಯಲ್ಸ್ ಎಡವಿದ್ದು, ಫ್ಲೇ ಆಫ್ ರೇಸ್ ನಿಂದ ಹೊರಗೆ ಬಿದ್ದಿದೆ.ಇನ್ನೂ ಈ ಪಂದ್ಯವನ್ನು 60 ರನ್ ಗಳ ಅಂತರದಲ್ಲಿ ಗೆದ್ದ ಕೊಲ್ಕತ್ತಾ ನೈಟ್ ರೈಡರ್ಸ್ ತಂಡ, ಫ್ಲೇ ಆಫ್ ಕನಸನ್ನು ಜೀವಂತವಾಗಿರಿಸಿಕೊಂಡಿದೆ.

ಐಪಿಎಲ್ 2020: 5 ವಿಕೆಟ್ ಗಳಿಂದ ಆರ್ ಸಿಬಿಯನ್ನು ಮಣಿಸಿದ ಸನ್ ರೈಸರ್ಸ್ ಹೈದ್ರಾಬಾದ್
ಇಲ್ಲಿನ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ 52ನೇ ಪಂದ್ಯದಲ್ಲಿ ಸನ್ ರೈಸರ್ಸ್ ಹೈದ್ರಾಬಾದ್ ತಂಡ ಐದು ವಿಕೆಟ್ ಗಳ ಅಂತರದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಸೋಲಿಸಿದೆ.

ಐಪಿಎಲ್ 2020: ಮುಂಬಯಿ ಇಂಡಿಯನ್ಸ್ ಗೆ 34 ರನ್ ಗೆಲುವು
ಕ್ವಿಂಟನ್ ಡಿ ಕಾಕ್ (67) ಅವರ ಅರ್ಧಶತಕದ ಜತೆಗೆ ಸಂಘಟಿತ ಬೌಲಿಂಗ್ ನಿರ್ವಹಣೆ ತೋರಿದ ಮುಂಬಯಿ ಇಂಡಿಯನ್ಸ್ ಐಪಿಎಲ್ 13ನೇ ಆವೃತ್ತಿಯ 17 ಪಂದ್ಯದಲ್ಲಿ 34 ರನ್ ಗಳಿಂದ ಸನ್ ರೈಸರ್ಸ್ ಹೈದರಾಬಾದ್ ತಂಡವನ್ನು ಮಣಿಸಿ ಟೂರ್ನಿಯಲ್ಲಿ ಮೂರನೇ ಜಯದ ಸವಿಯುಂಡಿತು.

ಐಪಿಎಲ್ 2020: 44 ರನ್ ಗಳಿಂದ ಸಿಎಸ್ ಕೆ ಸೋಲಿಸಿದ ಡೆಲ್ಲಿ ಕ್ಯಾಪಿಟಲ್ಸ್
ಇಲ್ಲಿನ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೆಡಿಯಂ ನಲ್ಲಿ ನಡೆದ ಐಪಿಎಲ್ ಟೂರ್ನಿಯ ಏಳನೇ ಪಂದ್ಯದಲ್ಲಿ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು 44 ರನ್ ಗಳಿಂದ ಡೆಲ್ಲಿ ಕ್ಯಾಪಿಟಲ್ಸ್ ಸೋಲಿಸಿದೆ.

ರಾಹುಲ್ ಶತಕದ ನೆರವಿನಿಂದ 97 ರನ್ ಗಳಿಂದ ಆರ್ ಸಿಬಿ ಮಣಿಸಿದ ಕಿಂಗ್ಸ್ ಇಲೆವೆನ್ ಪಂಜಾಬ್
ಕನ್ನಡಿಗ ಕೆ.ಎಲ್ ರಾಹುಲ್ ಅವರ ಮನಮೋಹಕ ಬ್ಯಾಟಿಂಗ್ ನೆರವಿನಿಂದ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ 2020ರ ಐಪಿಎಲ್ ನ ಆರನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು 97 ರನ್ ಗಳ ಅಂತರದಿಂದ ಮಣಿಸಿದೆ.

ಐಪಿಎಲ್ 2020: ಕೆಕೆಆರ್ ವಿರುದ್ಧ ಮುಂಬೈ ಇಂಡಿಯನ್ಸ್ ಗೆ 49 ರನ್ ಗಳ ಭರ್ಜರಿ ಗೆಲುವು
ಇಲ್ಲಿನ ಶೇಖ್ ಝಾಯೆದ್ ಕ್ರೀಡಾಂಗಣದಲ್ಲಿ ಇಂದು ನಡೆದ ಐಪಿಎಲ್ 13 ಆವೃತ್ತಿಯ ಪಂದ್ಯದಲ್ಲಿ ಹಿಟ್ ಮ್ಯಾನ್ ರೋಹಿತ್ ಶರ್ಮಾ ಅಬ್ಬರದ ಬ್ಯಾಟಿಂಗ್ ನೆರವಿನಿಂದ ಮುಂಬೈ ಇಂಡಿಯನ್ಸ್ 49 ರನ್ ಗಳಿಂದ ಕೊಲ್ಕತ್ತಾ ನೈಟ್ ರೈಡರ್ಸ್ ತಂಡವನ್ನು ಸೋಲಿಸಿದೆ.

ಐಪಿಎಲ್ 2020: ಸೈನ್ ರೈಸರ್ಸ್ ವಿರುದ್ಧ 10 ರನ್ ಗಳಿಂದ ಗೆಲುವು ಸಾಧಿಸಿ ಆರ್ ಸಿಬಿ ಶುಭಾರಂಭ
ಇಲ್ಲಿನ ಅಂತಾರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿ ನಡೆದ ಐಪಿಎಲ್ 2020 ಟೂರ್ನಿಯ ಮೂರನೇ ಪಂದ್ಯದಲ್ಲಿ ಸನ್ ರೈಸರ್ಸ್ ಹೈದ್ರಾಬಾದ್ ವಿರುದ್ಧ ರಾಯಲ್ ಚಾಲೆಂಜರ್ಸ್ 10 ರನ್ ಗಳಿಂದ ಗೆಲುವು ಸಾಧಿಸಿದೆ.

