West Asia conflicts

'ಶೀಘ್ರದಲ್ಲೇ ವಿಶ್ವಕ್ಕೆ ಸಿಹಿ ಸುದ್ದಿ': ಅಮೆರಿಕಾ-ಇರಾನ್ ಸಂಘರ್ಷ ಅಂತ್ಯ ಸಾಧ್ಯತೆ; ಮಾರ್ಕೊ ರುಬಿಯೊ ಮಹತ್ವದ ಹೇಳಿಕೆ..!
ಒಪ್ಪಂದದಲ್ಲಿ ಪ್ರಮುಖವಾಗಿ ಹಾರ್ಮುಜ್ ಜಲಸಂಧಿಯನ್ನು (Strait of Hormuz) ತೆರೆಯುವ ವಿಷಯ ಸೇರಿದ್ದು, ಇತ್ತೀಚಿನ ಸಂಘರ್ಷದಿಂದಾಗಿ ಉಂಟಾದ ಜಾಗತಿಕ ತೈಲ ಸಾಗಣೆ ಸಮಸ್ಯೆಗಳಿಗೆ ಪರಿಹಾರ ನೀಡುವ ಸಾಧ್ಯತೆ ಇದೆ.

ಅಮೆರಿಕಾದ ಪ್ರಮುಖ ಮಿತ್ರ, ಗೆಲುವಿನ ಸೂತ್ರ ತಿಳಿದ ರಾಷ್ಟ್ರ: ಇಸ್ರೇಲ್ ಕೊಂಡಾಡಿದ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್
ಇಸ್ರೇಲ್ ಧೈರ್ಯಶಾಲಿ, ದಿಟ್ಟ, ನಿಷ್ಠಾವಂತ ಮತ್ತು ಬುದ್ಧಿವಂತ ರಾಷ್ಟ್ರ. ಸಂಘರ್ಷ ಮತ್ತು ಒತ್ತಡದ ಕ್ಷಣದಲ್ಲಿ ತಮ್ಮ ನಿಜವಾದ ಬಣ್ಣವನ್ನು ತೋರಿಸಿದ ಇತರರಿಗಿಂತ ಭಿನ್ನವಾದ ರಾಷ್ಟ್ರವಾಗಿದೆ. ಆ ರಾಷ್ಟ್ರ ಸಂಕಷ್ಟದ ಸಮಯದಲ್ಲಿ ಕಠಿಣವಾಗಿ ಹೋರಾಡುತ್ತದೆ ಮತ್ತು ಗೆಲುವಿನ ಸೂತ್ರ ತಿಳಿದ ರಾಷ್ಟ್ರವಾಗಿದೆ.

West-Asia war: 'ಬೇಜವಾಬ್ದಾರಿಯುತ ಬೆದರಿಕೆ'ಗಳಿಗೆ ತಲೆಬಾಗಲ್ಲ: ಟ್ರಂಪ್'ಗೆ ಇರಾನ್ ತಿರುಗೇಟು!
ಟ್ರಂಪ್ ಅವರ ಈ ಬೆದರಿಕೆ ಅಮೆರಿಕ ಮತ್ತು ಇಸ್ರೇಲ್ ಪಡೆಗಳ ವಿರುದ್ಧ ಇಸ್ಲಾಮಿಕ್ ಹೋರಾಟಗಾರರು ನಡೆಸುತ್ತಿರುವ ನಿರಂತರ ಆಕ್ರಮಣಕಾರಿ ಕಾರ್ಯಾಚರಣೆಗಳ ಮೇಲೆ ಪರಿಣಾಮ ಬೀರುವುದಿಲ್ಲ. ಅಲ್ಲದೆ, ಮಧ್ಯಪ್ರಾಚ್ಯದಲ್ಲಿ ಅಮೆರಿಕ ಅನುಭವಿಸಿರುವ ಅವಮಾನವನ್ನು ಇದರಿಂದ ಅಳಿಸಿಹಾಕಲು ಸಾಧ್ಯವಿಲ್ಲ.

ಹಾರ್ಮುಜ್ ಜಲಸಂಧಿ ತೆರೆಯದಿದ್ದರೆ ನರಕ ಸೃಷ್ಟಿಸುತ್ತೇವೆ: ಅಮೆರಿಕಾ ಬೆದರಿಕೆಗೆ ಕ್ಯಾರೆ ಎನ್ನದ ಇರಾನ್; ಇಸ್ರೇಲ್-ಕುವೈತ್ ಮೇಲೆ ಕ್ಷಿಪಣಿ-ಡ್ರೋನ್ ದಾಳಿ..!
ಅಮೆರಿಕಾ ಎಚ್ಚರಿಕೆಗೆ ಬಗ್ಗದ ಇರಾನ್ ಇಸ್ರೇಲ್ ಮತ್ತು ಕುವೈತ್ ಮೇಲೆ ಕ್ಷಿಪಣಿ ಮತ್ತು ಡ್ರೋನ್ ಮೂಲಕ ದಾಳಿ ನಡೆಸಿದ್ದು, ದಾಳಿಗೆ ಇಸ್ರೇಲ್ ಮತ್ತು ಕುವೈತ್ ತಮ್ಮ ವಾಯು ರಕ್ಷಣಾ ವ್ಯವಸ್ಥೆಗಳ ಮೂಲಕ ಪ್ರತಿಕ್ರಿಯೆ ನೀಡುತ್ತಿವೆ.

ಪಶ್ಚಿಮ ಏಷ್ಯಾ ಸಂಘರ್ಷ: ಯುಎಇಯಲ್ಲಿ ಸಿಲುಕಿದ ಭಾರತೀಯರಿಗಾಗಿ ಸ್ಪೈಸ್‌ಜೆಟ್ ನಿಂದ 13 ವಿಶೇಷ ವಿಮಾನ ಹಾರಾಟ
ಮುಂಬೈಗೆ ಏಳು ವಿಶೇಷ ವಿಮಾನಗಳು, ದೆಹಲಿಗೆ ಐದು ವಿಶೇಷ ವಿಮಾನಗಳು ಮತ್ತು ದುಬೈನಿಂದ ಮುಂಬೈಗೆ ಒಂದು ವಿಶೇಷ ವಿಮಾನವನ್ನು ನಿರ್ವಹಿಸಲಾಗುವುದು" ಎಂದು ಸ್ಪೈಸ್‌ಜೆಟ್ ಪ್ರಕಟಣೆಯಲ್ಲಿ ತಿಳಿಸಿದೆ.

Iran war: ಅಲಿ ಖಮೇನಿ ಪುತ್ರ ಮೊಜ್ತಾಬಾ ಖಮೇನಿ ಇರಾನ್ ನೂತನ ಪರಮೋಚ್ಛ ನಾಯಕರಾಗಿ ಆಯ್ಕೆ ಸಾಧ್ಯತೆ
ಅಸೆಂಬ್ಲಿ ಆಫ್ ಎಕ್ಸ್‌ಪರ್ಟ್ಸ್ ಅಲಿ ಖಮೇನಿ ಅವರ ಪುತ್ರ ಮೊಜ್ತಾಬಾನನ್ನು ಮುಂದಿನ ಪರಮೋಚ್ಛ ನಾಯಕನಾಗಿ ಆಯ್ಕೆ ಮಾಡಿದೆ ಎಂದು ಮೂಲಗಳನ್ನು ಉಲ್ಲೇಖಿಸಿ Iran International ವರದಿ ಮಾಡಿದೆ.

West Asia conflict: ಇರಾನ್ ಮೇಲಿನ ಯುದ್ಧ ಇನ್ನು 4-5 ವಾರಗಳ ಕಾಲ ನಡೆಯಲಿದೆ- ಡೊನಾಲ್ಡ್ ಟ್ರಂಪ್
ಮಧ್ಯಪ್ರಾಚ್ಯದಲ್ಲಿ ಹೆಚ್ಚುತ್ತಿರುವ ಸೇನಾ ಉದ್ವಿಗ್ನತೆಯ ಮಧ್ಯೆ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸುದ್ದಿಗೋಷ್ಠಿ ನಡೆಸಿದರು. ಇರಾನ್ ವಿರುದ್ಧ ನಮ್ಮ ದಾಳಿಯನ್ನು ತೀವ್ರಗೊಳಿಸುತ್ತೇವೆ. ನಮ್ಮ ಕಾರ್ಯಾಚರಣೆ ಮುಂದುವರೆಸುತ್ತೇವೆ.

ಮಧ್ಯಪ್ರಾಚ್ಯದಲ್ಲಿ ಹೆಚ್ಚಿದ ಉದ್ವಿಗ್ನತೆ: ಪ್ರತೀ ಜಿಲ್ಲೆಯಲ್ಲಿ 24x7 ತುರ್ತು ಸಹಾಯವಾಣಿ ಕೇಂದ್ರ ಆರಂಭ
ಮಧ್ಯಪ್ರಾಚ್ಯದ ಕೆಲವು ದೇಶಗಳಲ್ಲಿನ ಪ್ರಚಲಿತ ಪರಿಸ್ಥಿತಿಯ ಹಿನ್ನೆಲೆಯಲ್ಲಿ, ಹಲವಾರು ರಾಷ್ಟ್ರಗಳು NOTAM - ವೈಮಾನಿಕ ಸಂಚಾರ ಬಂದ್ ಘೋಷಿಸಿವೆ. ಇದರ ಪರಿಣಾಮವಾಗಿ ಅಂತಾರಾಷ್ಟ್ರೀಯ ವಿಮಾನಯಾನ ಕಾರ್ಯಾಚರಣೆಗಳಲ್ಲಿ ಅಡಚಣೆಯಾಗಿದೆ.

