ಪಶ್ಚಿಮ ಏಷ್ಯಾ ಸಂಘರ್ಷ: ಯುಎಇಯಲ್ಲಿ ಸಿಲುಕಿದ ಭಾರತೀಯರಿಗಾಗಿ ಸ್ಪೈಸ್‌ಜೆಟ್ ನಿಂದ 13 ವಿಶೇಷ ವಿಮಾನ ಹಾರಾಟ
ಮುಂಬೈಗೆ ಏಳು ವಿಶೇಷ ವಿಮಾನಗಳು, ದೆಹಲಿಗೆ ಐದು ವಿಶೇಷ ವಿಮಾನಗಳು ಮತ್ತು ದುಬೈನಿಂದ ಮುಂಬೈಗೆ ಒಂದು ವಿಶೇಷ ವಿಮಾನವನ್ನು ನಿರ್ವಹಿಸಲಾಗುವುದು" ಎಂದು ಸ್ಪೈಸ್‌ಜೆಟ್ ಪ್ರಕಟಣೆಯಲ್ಲಿ ತಿಳಿಸಿದೆ.

ನವದೆಹಲಿ: ಪಶ್ಚಿಮ ಏಷ್ಯಾ ಸಂಘರ್ಷದಿಂದಾಗಿ ಯುಎಇಯಲ್ಲಿ ಸಿಲುಕಿರುವ ಭಾರತೀಯರು ದೇಶಕ್ಕೆ ವಾಪಸ್ ಬರಲು ಅನುಕೂಲವಾಗುವಂತೆ ಸ್ಪೈಸ್‌ಜೆಟ್ ಗುರುವಾರ ಯುಎಇಯಿಂದ 13 ವಿಶೇಷ ವಿಮಾನಗಳನ್ನು ನಿರ್ವಹಿಸುತ್ತಿದೆ.
"13 ವಿಮಾನಗಳಲ್ಲಿ 12 ವಿಮಾನಗಳು ಫುಜೈರಾದಿಂದ ಮತ್ತು ಒಂದು ದುಬೈನಿಂದ ಕಾರ್ಯನಿರ್ವಹಿಸಲಿವೆ.
ಮುಂಬೈಗೆ ಏಳು ವಿಶೇಷ ವಿಮಾನಗಳು, ದೆಹಲಿಗೆ ಐದು ವಿಶೇಷ ವಿಮಾನಗಳು ಮತ್ತು ದುಬೈನಿಂದ ಮುಂಬೈಗೆ ಒಂದು ವಿಶೇಷ ವಿಮಾನವನ್ನು ನಿರ್ವಹಿಸಲಾಗುವುದು" ಎಂದು ಸ್ಪೈಸ್‌ಜೆಟ್ ಪ್ರಕಟಣೆಯಲ್ಲಿ ತಿಳಿಸಿದೆ.
ಮಂಗಳವಾರ ಮತ್ತು ಬುಧವಾರ, ವಿಮಾನಯಾನ ಸಂಸ್ಥೆಯು, ಫುಜೈರಾದಿಂದ ದೆಹಲಿ, ಮುಂಬೈ ಮತ್ತು ಕೊಚ್ಚಿಗೆ 12 ವಿಶೇಷ ವಿಮಾನಗಳನ್ನು ನಿರ್ವಹಿಸಿದೆ ಎಂದು ಹೇಳಿದೆ.
ಮಧ್ಯಪ್ರಾಚ್ಯದಲ್ಲಿ ಅಮೆರಿಕ, ಇಸ್ರೇಲ್ ಮತ್ತು ಇರಾನ್ ನಡುವೆ ಹೆಚ್ಚುತ್ತಿರುವ ಸಂಘರ್ಷದಿಂದ ವಾಯು ಪ್ರದೇಶವನ್ನು ಹಠಾತ್ ಬಂದ್ ಮಾಡಲಾಗಿದ್ದು, ವಿಮಾನ ಕಾರ್ಯಾಚರಣೆಗೆ ಅಡ್ಡಿಯಾಗಿದೆ. ಇದರಿಂದಾಗಿ ಹೆಚ್ಚಿನ ಸಂಖ್ಯೆಯ ಪ್ರಯಾಣಿಕರು ವಿವಿಧ ನಗರಗಳಲ್ಲಿ ಸಿಲುಕಿಕೊಂಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



