well

ಮಹಾಕುಂಭಕ್ಕೆ ತೆರಳಲು ಹಣದ ಕೊರತೆ: ಹಿತ್ತಲಿನಲ್ಲಿ 40 ಅಡಿ ಬಾವಿ ತೋಡಿ 'ಗಂಗೆ' ಭೂಮಿಗೆ ತಂದ 'ಗೌರಿ'; ಶಿವರಾತ್ರಿಯಂದು ಪುಣ್ಯಸ್ನಾನ
ಮಹಾಕುಂಭಕ್ಕೆ ಹೋಗಲು ಅದೃಷ್ಟವಿರಬೇಕು. ನನಗೆ ಅಷ್ಟು ವೆಚ್ಚವನ್ನು ಭರಿಸಲಾಗುವುದಿಲ್ಲ. ಹೀಗಾಗಿ ನಾನು ಇಲ್ಲಿ ಬಾವಿ ತೋಡಿ ಗಂಗೆಯನ್ನು ತರಲು ನಿರ್ಧರಿಸಿದೆ.

ಶಿರಸಿ: ಗೌರಿ ನಾಯ್ಕ ಕೆಲಸಕ್ಕೆ ಅಡ್ಡಿ; ಬಾವಿ ತೋಡುವುದಕ್ಕೆ ಗ್ರಾಮ ಪಂಚಾಯಿತಿ ಅಧಿಕಾರಿಗಳಿಂದ ತಡೆ!
ಅಂಗನವಾಡಿ ಮಕ್ಕಳಿಗೆ ನೀರಿನ ವ್ಯವಸ್ಥೆಗೆ ಪೂರಕವಾಗಿ ಒಂಟಿಯಾಗಿ ಬಾವಿ ತೋಡುತ್ತಿದ್ದ ಗಣೇಶನಗರದ ಗೌರಿ ನಾಯ್ಕ ಅವರಿಗೆ ಕೆಲಸ ನಿಲ್ಲಿಸುವಂತೆ ಗ್ರಾಮ ಪಂಚಾಯಿತಿ ಅಧಿಕಾರಿಗಳು ಸೂಚಿಸಿದ್ದಾರೆ.

ಶಿರಸಿಯಲ್ಲಿ ಆಧುನಿಕ ಭಗೀರಥಿ: ಸಂಕಷ್ಟ ನೋಡಲಾಗದೆ ಅಂಗನವಾಡಿ ಮಕ್ಕಳಿಗಾಗಿ ಬಾವಿ ತೋಡುತ್ತಿರುವ ಮಹಿಳೆ!
ಶಿರಸಿ ಬಳಿಯ ಗಣೇಶನಗರದ ಅಂಗನವಾಡಿಯಲ್ಲಿ ಶಿಕ್ಷಕರು ಅಡುಗೆ ಮತ್ತು ಕುಡಿಯಲು ಬಳಸುವ ನೀರನ್ನು ತರಲು ಸುಮಾರು ಅರ್ಧ ಕಿಲೋಮೀಟರ್ ಎರಡು ಕಿಲೋಮೀಟರ್ ನಡೆದುಕೊಂಡು ಹೋಗಬೇಕಾಗಿದೆ.

ಉಡುಪಿ: 40 ಅಡಿ ಬಾವಿಗಿಳಿದು ಬೆಕ್ಕಿನ ಮರಿ ರಕ್ಷಿಸಿದ ಪೇಜಾವರ ಸ್ವಾಮೀಜಿ!
ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಅವರು ಬಾವಿಗೆ ಬಿದ್ದಿದ್ದ ಬೆಕ್ಕಿನ ಮರಿಯನ್ನು ಸ್ವತಃ ಬಾವಿಗೆ ಇಳಿದು ರಕ್ಷಿಸಿದ ಘಟನೆ ನಡೆದಿದೆ.

ಬೆಳಗಾವಿ: 100 ಅಡಿ ಆಳದ ಬಾವಿಗೆ ಬಿದ್ದು ಮುಳುಗುತ್ತಿದ್ದ ಮೂರು ವರ್ಷದ ಬಾಲಕನನ್ನು ರಕ್ಷಿಸಿದ ಮೇಸ್ತ್ರಿ
ಕರ್ನಾಟಕ-ಮಹಾರಾಷ್ಟ್ರದ ಗಡಿಭಾಗದ ಬೆಳಗಾವಿ ಸಮೀಪದ ಪಾಟ್ನೆ-ಫಟಾ ಗ್ರಾಮದಲ್ಲಿ ಸೋಮವಾರ ಆಕಸ್ಮಿಕವಾಗಿ 100 ಅಡಿ ಆಳದ ಬಾವಿಗೆ ಬಿದ್ದ ಮೂರು ವರ್ಷದ ಬಾಲಕನ ಜೀವವನ್ನು ಬೆಳಗಾವಿಯಲ್ಲಿ ಗಾರೆ ಕೆಲಸ ಮಾಡುವ 40 ವರ್ಷದ ಮೇಸ್ತ್ರಿಯೊಬ್ಬರು ರಕ್ಷಿಸಿದ್ದಾರೆ.

ತೆಲಂಗಾಣ: ವಿದ್ಯಾರ್ಥಿನಿಯರ ಹಾಸ್ಟೆಲ್‌ನಲ್ಲಿ ಮೊಬೈಲ್, ಲ್ಯಾಪ್‌ಟಾಪ್ ಕಳ್ಳತನ ಮಾಡಿ ಬಾವಿಗೆ ಬಿದ್ದ ಕಳ್ಳ
ತೆಲಂಗಾಣದ ಹನಮಕೊಂಡ ಜಿಲ್ಲೆಯ ಎಂಜಿನಿಯರಿಂಗ್ ಕಾಲೇಜಿನ ಬಾಲಕಿಯರ ಹಾಸ್ಟೆಲ್‌ನಿಂದ ಮೊಬೈಲ್ ಫೋನ್ ಮತ್ತು ಲ್ಯಾಪ್‌ಟಾಪ್‌ಗಳನ್ನು ಕದ್ದು ಕಳ್ಳನೊಬ್ಬ ಬಾವಿಗೆ ಬಿದ್ದಿದ್ದಾನೆ.

ವಿಜಯಪುರ: ಇಬ್ಬರೂ ಹೆಣ್ಣು ಮಕ್ಕಳನ್ನು ಬಾವಿಗೆ ತಳ್ಳಿ ತಾನೂ ಆತ್ಮಹತ್ಯೆ ಮಾಡಿಕೊಂಡ ತಾಯಿ!
ತಾಯಿಯೊಬ್ಬಳು ತಮ್ಮ ಪುಟ್ಟ ಮಕ್ಕಳನ್ನು ನಿರ್ದಯವಾಗಿ ಬಾವಿಗೆ ತಳ್ಳಿ ನಂತರ ತಾನೂ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ವಿಜಯಪುರದಲ್ಲಿ ನಡೆದಿದೆ.

ಮಧ್ಯ ಪ್ರದೇಶ: ಮಣ್ಣು ಕುಸಿದು ಬಾವಿಗೆ ಬಿದ್ದ 40ಕ್ಕೂ ಹೆಚ್ಚು ಮಂದಿ; 19 ಜನರ ರಕ್ಷಣೆ, ಸಾವಿನ ಸಂಖ್ಯೆ 4ಕ್ಕೆ ಏರಿಕೆ
ಬಾವಿಗೆ ಬಿದ್ದ 8 ವರ್ಷದ ಬಾಲಕಿಯನ್ನು ರಕ್ಷಿಸಲು ಹೋಗಿ ಧಾರಾಕಾರ ಮಳೆಗೆ ಮಣ್ಣು ಕುಸಿದು ಬಿದ್ದು ಸುಮಾರು 40 ಮಂದಿ ಬಾವಿಗೆ ಬಿದ್ದಿದ್ದು, ಇದುವರೆಗೆ ಮೃತಪಟ್ಟವರ ಸಂಖ್ಯೆ 4ಕ್ಕೆ ಏರಿದೆ, 19 ಮಂದಿಯನ್ನು ಕಾರ್ಯಾಚರಣೆಯಲ್ಲಿ ರಕ್ಷಿಸಲಾಗಿದೆ.

ತುಮಕೂರು: ಬಾವಿಗೆ ಬಿದ್ದು ತಾಯಿ, ಇಬ್ಬರು ಮಕ್ಕಳ ಸಾವು
ಆಕಸ್ಮಿಕವಾಗಿ ಬಾವಿಗೆ ಬಿದ್ದು ತಾಯಿ, ಇಬ್ಬರು ಮಕ್ಕಳು ಸೇರಿ ಮೂವರು ಮೃತಪಟ್ಟಿರುವ ದಾರುಣ ಘಟನೆ ತಾಲೂಕಿನ ಕೋರ ಹೋಬಳಿಯ ಚಿಕ್ಕತೊಟ್ಲುಕೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ತಿರುಮಲಪಾಳ್ಯದಲ್ಲಿ ಗುರುವಾರ ಜರುಗಿದೆ.

