weather

ಕಾದು ಕೆಂಡವಾಗಿದ್ದ ಬೆಂಗಳೂರಿನಲ್ಲಿ ವರ್ಷದ ಮೊದಲ ಮಳೆ: ಎಲ್ಲೆಲ್ಲಿ ಮಳೆಯಾಗುತ್ತಿದೆ?
ಸುಡು ಬಿಸಿಲಿನಿಂದ ಪರಿತಪಿಸುತ್ತಿದ್ದ ಬೆಂಗಳೂರಿಗೆ ಮಳೆರಾಯ ತಂಪೆರೆದಿದ್ದಾನೆ. ಬೆಂಗಳೂರಿನ ಹಲವು ಭಾಗಗಳಲ್ಲಿ ತುಂತುರು ಮಳೆಯಾಗುತ್ತಿದೆ.

ದೇಶದಲ್ಲಿ ತಾಪಮಾನ ಹೆಚ್ಚಳ: ಬಿಸಿಲ ಶಾಖದಿಂದ ತಪ್ಪಿಸಿಕೊಳ್ಳಲು ನಾಲ್ಕು ಪ್ರಮುಖ ಅಂಶಗಳ ಮಾರ್ಗಸೂಚಿ ಪ್ರಕಟ
2024 ಚಳಿಗಾಲದ ನಂತರ ಬಿಸಿಗಾಳಿಯು ಈಗ ಸುಡುವ ಶಾಖದೊಂದಿಗೆ ಪ್ರಾರಂಭವಾಗಿದೆ. ದೇಹದಲ್ಲಿ ನೀರಿನ ಕೊರತೆಯಿಂದಾಗಿ ಹೆಚ್ಚಿನ ಜನರು ಅನೇಕ ರೋಗಗಳಿಗೆ ತುತ್ತಾಗುತ್ತಿದ್ದಾರೆ. ಈ ವಿಪರೀತ ಶಾಖ ಮತ್ತು ಶಾಖದ ಅಲೆಯಿಂದ ನಿಮ್ಮನ್ನು ನೀವು ಹೇಗೆ ರಕ್ಷಿಸಿಕೊಳ್ಳಬೇಕು ಎಂಬುದಕ್ಕೆ ಆರೋಗ್ಯ ಸಚಿವಾಲಯ ಮಾರ್ಗಸೂಚಿ ಪ್ರಕಟಿಸಿದೆ.

ಅಸ್ಸಾಂನಲ್ಲಿ ಆಲಿಕಲ್ಲು ಸಹಿತ ಭಾರೀ ಮಳೆ: ಗುವಾಹಟಿ ವಿಮಾನ ನಿಲ್ದಾಣದ ಮೇಲ್ಛಾವಣಿ ಕುಸಿತ
ಇಂದು ಸುರಿದ ಭಾರಿ ಮಳೆಗೆ ಈಶಾನ್ಯ ರಾಜ್ಯಗಳಲ್ಲಿ ಭಾರಿ ಹಾನಿಯಾಗಿದೆ. ತೀವ್ರ ಚಂಡಮಾರುತ ಮತ್ತು ಭಾರೀ ಮಳೆಯು ಗುವಾಹಟಿಯ ಜನಪ್ರಿಯ ಗೋಪಿನಾಥ್ ಬೊರ್ಡೊಲೋಯ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಮೇಲೆ ಪರಿಣಾಮ ಬೀರಿದೆ.

ರಾಜ್ಯದಲ್ಲಿ ಕಾಟನ್ ಕ್ಯಾಂಡಿ ನಿಷೇಧ, CAA ಜಾರಿಗೆ ಅಧಿಸೂಚನೆ, 40 ವರ್ಷಗಳಲ್ಲಿ ಕರ್ನಾಟಕದಲ್ಲಿ ಭೀಕರ ಬರಗಾಲ ಈ ದಿನದ ಸುದ್ದಿ ಮುಖ್ಯಾಂಶಗಳು: 11-03-2024

ಪಾಕಿಸ್ತಾನದಲ್ಲಿ ಭಾರೀ ಮಳೆಯಿಂದಾಗಿ ಕಳೆದ 48 ಗಂಟೆಗಳಲ್ಲಿ 37 ಮಂದಿ ಸಾವು, ಕಂಗೆಟ್ಟ ಜನ!
ಹವಾಮಾನ ವೈಪರೀತ್ಯಕ್ಕೆ ಪಾಕಿಸ್ತಾನ ತತ್ತರಿಸಿದೆ. ಪಾಕಿಸ್ತಾನದಲ್ಲಿ ಮಳೆ ಸಂಬಂಧಿತ ಘಟನೆಗಳಲ್ಲಿ ಇದುವರೆಗೆ 37 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.

ಫೆಬ್ರವರಿ ಹವಾಮಾನ: ಚಳಿ ಇರಬೇಕಾಗಿದ್ದಲ್ಲಿ ಸುಡು ಬಿಸಿಲು....ಇದಕ್ಕೆ ಎಲ್ ನಿನೋ ಕಾರಣ!
ಫೆಬ್ರವರಿ ತಿಂಗಳ ಆರಂಭದಲ್ಲಿ ಚಳಿ ಇರಬೇಕಾಗಿತ್ತು. ಆದರೆ ಈಗಲೇ ಬೇಸಿಗೆ ಕಾಲದ ಅನುಭವವಾಗುತ್ತಿದೆ. ಇತ್ತೀಚೆಗೆ ದಿನಪೂರ್ತಿ ತೇವಾಂಶದಿಂದ ಕೂಡಿದ್ದು, ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ ಎರಡು ಡಿಗ್ರಿಗಳಷ್ಟು ಹೆಚ್ಚುತ್ತಿದೆ.

ಮೈ ಕೊರೆಯುವ ಚಳಿ ಕಡಿಮೆ, ಸೆಖೆಯ ಅನುಭವ: ಈ ವರ್ಷ ಅವಧಿಗೆ ಮುನ್ನವೇ ಬೇಸಿಗೆ ಆಗಮನ!
ಸಾಮಾನ್ಯವಾಗಿ ಜನವರಿ ತಿಂಗಳು ಎಂದರೆ ಮೈಕೊರೆಯುವ ಚಳಿಯ ವಾತಾವರಣ ಇರುತ್ತದೆ. ಆದರೆ ಈ ವರ್ಷ ಮೈಕೊರೆಯುವ ಚಳಿಯ ಅನುಭವವಾಗುತ್ತಿಲ್ಲ. ಬದಲಿಗೆ ಬೇಸಿಗೆ ದಿನಗಳು ಹತ್ತಿರದಲ್ಲಿದೆ ಎಂಬ ಅನುಭವವಾಗುತ್ತಿದೆ.

ಪ್ರತಿಕೂಲ ಹವಾಮಾನ: ಅಮರನಾಥ ಯಾತ್ರೆ ಮತ್ತೆ ಸ್ಥಗಿತ
ನಿರಂತರ ಮಳೆ ಮತ್ತು ಪ್ರತಿಕೂಲ ಹವಾಮಾನದಿಂದಾಗಿ ಭಾನುವಾರ ಪುನರಾರಂಭಗೊಂಡಿದ್ದ ಅಮರನಾಥ ಯಾತ್ರೆಯನ್ನು ಸೋಮವಾರ ಮತ್ತೆ ಸ್ಥಗಿತಗೊಳಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಬೆಂಗಳೂರಿನಲ್ಲಿ ಮೊದಲ ಮುಂಗಾರು ಪೂರ್ವ ಮಳೆ: ರಾಜಧಾನಿಯಲ್ಲಿ 3.4 ಮಿ.ಮೀ ವರ್ಷಧಾರೆ
ರಾಜ್ಯದ ಕರಾವಳಿ, ಮಲೆನಾಡು ಸೇರಿದಂತೆ ಅಲ್ಲಲ್ಲಿ ಕಳೆದ ಕೆಲ ದಿನಗಳಿಂದ ಮಳೆಯಾಗುತ್ತಿದೆ. ರಾಜಧಾನಿ ಬೆಂಗಳೂರಿನಲ್ಲಿ ನಿನ್ನೆ ಗುರುವಾರ ಸಂಜೆಯಿಂದಲೇ ತುಂತುರು ಹನಿಯ ಸಿಂಚನವಾಗಿ ಮಧ್ಯರಾತ್ರಿ ಹಲವು ಭಾಗಗಳಲ್ಲಿ ಧಾರಾಕಾರ ಮಳೆಯಾಗಿದೆ.

