Water crisis

ಬೆಂಗಳೂರಿನಲ್ಲಿ ತಲೆದೋರಿದ ನೀರಿನ ಸಮಸ್ಯೆ: ಸ್ವಿಮ್ಮಿಂಗ್ ಪೂಲ್ ಗಳಿಗೆ ಕಾವೇರಿ ನೀರು ಬಳಸಿದರೆ ರೂ.5000 ದಂಡ
ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ನೀರಿನ ಅಭಾವ ತಲೆದೋರಿದ್ದು, ನೀರಿನ ಸಮಸ್ಯೆ ಉಲ್ಬಣಗೊಂಡಿರುವ ಹಿನ್ನೆಲೆಯಲ್ಲಿ ನಗರದ ಈಜುಕೊಳಗಳಿಗೆ ಕಾವೇರಿ ನೀರು ಬಳಸಬಾರದು ಎಂದು ಬೆಂಗಳೂರು ಜಲಮಂಡಲಿ ಆದೇಶಿಸಿದೆ...

ನೀರಿನ ಬಿಕ್ಕಟ್ಟು: ಬೆಂಗಳೂರು ತೊರೆಯಲು ಟೆಕ್ ಉದ್ಯೋಗಿಗಳು ಮುಂದು; ನೀರಿನ ಕೊರತೆ ಇಲ್ಲ ಎಂದ ರಾಜ್ಯ ಸರ್ಕಾರ
ಬೆಂಗಳೂರಿನಲ್ಲಿ ದಿನದಿಂದ ದಿನಕ್ಕೆ ನೀರಿನ ಬಿಕ್ಕಟ್ಟು ಉಲ್ಬಣಗೊಳ್ಳುತ್ತಿದ್ದು, ಅನೇಕ ಟೆಕ್ ಉದ್ಯೋಗಿಗಳು ತಾತ್ಕಾಲಿಕವಾಗಿ ನಗರವನ್ನು ತೊರೆಯುತ್ತಿದ್ದಾರೆ ಮತ್ತು ಅನೇಕರು ಹುಟ್ಟೂರುಗಳಿಗೆ ಹೋಗುತ್ತಿದ್ದಾರೆ. ಆದರೆ, ರಾಜ್ಯ ಸರ್ಕಾರ ಬೆಂಗಳೂರಿನಲ್ಲಿ ನೀರಿನ ಕೊರತೆ ಇಲ್ಲ, ನಗರದಲ್ಲಿ ನೀರಿನ ಕೊರತೆಯ ಬಗ್ಗೆ ಬಿಜೆಪಿ ರಾಜಕೀಯ ಮಾಡುತ್ತಿದೆ ಎಂದು ದೂರಿದೆ.

ಗದಗದಲ್ಲಿ ಅನಿಯಮಿತ ನೀರು ಪೂರೈಕೆ; ಬೇಸಿಗೆಯಲ್ಲಿ ವಲಸೆ ಹೋಗುತ್ತಿದ್ದಾರೆ ಕಂದಾಯ ಗ್ರಾಮಗಳ ನಿವಾಸಿಗಳು
ಕಳೆದ ಏಳು ದಶಕಗಳಿಂದ ಗದಗದ ಕೆಲವು ಗ್ರಾಮಗಳು ಬರದಿಂದ ತತ್ತರಿಸಿರುವ ಹಿನ್ನೆಲೆಯಲ್ಲಿ ಕೆಲವು ಗ್ರಾಮಗಳ ಜನರು ಬೇಸಿಗೆಯಲ್ಲಿ ವಲಸೆ ಹೋಗುತ್ತಾರೆ. ಸದ್ಯ ಶಿರಹಟ್ಟಿ, ಮುಂಡರಗಿ, ಲಕ್ಷ್ಮೇಶ್ವರ, ರೋಣ, ಗಜೇಂದ್ರಗಡ ಮತ್ತು ಗದಗ ತಾಲ್ಲೂಕುಗಳು ಕಂದಾಯ ಗ್ರಾಮಗಳೆಂದು ಕರೆಯಲ್ಪಡುವ ಅನೇಕ ತಾಂಡಾಗಳನ್ನು ಹೊಂದಿದ್ದು, ಇಲ್ಲಿನ ಜನರು ಬೇಸಿಗೆಯಲ್ಲಿ ಗೋವಾ, ಬೆಂಗಳೂರು, ಮಂಗಳೂರು, ಶೋಲಾಪುರ ಮತ್ತು ಇತರ ದೊಡ್ಡ ನಗರಗಳಿಗೆ ವಲಸೆ ಹೋಗುತ್ತಾರೆ.

ಬೆಂಗಳೂರಿನಲ್ಲಿ ನೀರಿನ ಬಿಕ್ಕಟ್ಟು: ಮಳೆಗಾಲದವರೆಗೆ ವರ್ಕ್ ಫ್ರಂ ಹೋಂ, ಆನ್‌ಲೈನ್ ತರಗತಿಗೆ ನಿವಾಸಿಗಳ ಒತ್ತಾಯ
ಬೆಂಗಳೂರು ನಗರದಲ್ಲಿನ ನೀರಿನ ಸಮಸ್ಯೆ ಉಲ್ಬಣಗೊಳ್ಳುತ್ತಿರುವ ಹಿನ್ನೆಲೆಯಲ್ಲಿ, ಮಳೆಗಾಲ ಬರುವವರೆಗೆ ನೀರನ್ನು ಉಳಿಸಲು ವರ್ಕ್ ಫ್ರಂ ಹೋಂ (ಡಬ್ಲ್ಯುಎಫ್‌ಹೆಚ್) ಮತ್ತು ವಿದ್ಯಾರ್ಥಿಗಳಿಗೆ ಆನ್‌ಲೈನ್ ತರಗತಿಗಳಿಗೆ ಅವಕಾಶ ನೀಡುವಂತೆ ಬೆಂಗಳೂರು ನಿವಾಸಿಗಳು ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಚಾಮರಾಜನಗರ: ಬಿಂದಿಗೆ ನೀರಿಗಾಗಿ 'ಪಾಲಾರ್' ಗ್ರಾಮದ ಮಹಿಳೆಯರು ಮೈಲಿಗಟ್ಟಲೇ ನಡೆಯಬೇಕಾದ ಪರಿಸ್ಥಿತಿ!
ಪಾಲಾರ್ ಗ್ರಾಮದ ಮಹಿಳೆಯರು ಒಂದು ಬಿಂದಿಗೆ ನೀರಿಗಾಗಿ ತಮಿಳು ನಾಡು ಗಡಿಗೆ ಮೈಲಿ ಗಟ್ಟಲೆ ನಡೆದು ಹೋಗ ಬೇಕಾದ ಪರಿಸ್ಥಿತಿ ಎದುರಾಗಿದೆ.

ಅಂತರ್ಜಲ ಕುಸಿತದಿಂದ ರೈತರು ಕಂಗಾಲು; ಲಕ್ಷಗಟ್ಟಲೆ ಖರ್ಚು ಮಾಡಿ ಕೊರೆದರೂ ಬೋರ್‌ವೆಲ್‌ಗಳಿಂದ ಬಾರದ ನೀರು
ಕಾವೇರಿ ನದಿ ಉಗಮ ಸ್ಥಾನವಾದ ಕೊಡಗಿನ ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೋರಿದೆ. ಜಿಲ್ಲೆಯ ಹಲವಾರು ಪ್ರದೇಶಗಳಲ್ಲಿ ಅಂತರ್ಜಲವೂ ಕುಸಿದಿದೆ. ಇದರಿಂದಾಗಿ ರೈತರು ಹೆಚ್ಚುವರಿ ನಷ್ಟವನ್ನು ಎದುರಿಸುತ್ತಿದ್ದು, ಬೋರ್‌ವೆಲ್‌ಗಳಿಗೆ ಲಕ್ಷಗಟ್ಟಲೆ ಖರ್ಚು ಮಾಡಿದರೂ ನೀರು ಸಿಗುತ್ತಿಲ್ಲ.

ಬೆಂಗಳೂರಿನಲ್ಲಿ ನೀರಿನ ಬಿಕ್ಕಟ್ಟು: ಮಾರ್ಚ್ 11 ರಂದು ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ಪ್ರತಿಭಟನೆ
ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ನೀರಿನ ಸಮಸ್ಯೆ ತೀವ್ರಗೊಂಡಿರುವ ಹಿನ್ನೆಲೆಯಲ್ಲಿ ಆಡಳಿತಾರೂಢ ಕಾಂಗ್ರೆಸ್ ಸರ್ಕಾರದ ವಿರುದ್ಧ ಕರ್ನಾಟಕ ಬಿಜೆಪಿ ಸೋಮವಾರ (ಮಾರ್ಚ್ 11) ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಪ್ರತಿಭಟನೆ ನಡೆಸಲಿದೆ.

ಬೆಂಗಳೂರು ನಗರದಲ್ಲಿ ನೀರಿನ ಬಿಕ್ಕಟ್ಟು: ಈ ಉದ್ದೇಶಗಳಿಗೆ ಕುಡಿಯುವ ನೀರು ಬಳಸಿದರೆ ₹5000 ದಂಡ!
ಬೆಂಗಳೂರು ನಗರದಲ್ಲಿ ದಿನದಿಂದ ದಿನಕ್ಕೆ ನೀರಿನ ಬಿಕ್ಕಟ್ಟು ತೀವ್ರಗೊಳ್ಳುತ್ತಿರುವ ಹಿನ್ನೆಲೆಯಲ್ಲಿ, ಕರ್ನಾಟಕ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯು ಕುಡಿಯುವ ನೀರನ್ನು ಇತರೆ ಉದ್ದೇಶಗಳಿಗೆ ಬಳಸುವುದನ್ನು ನಿಷೇಧಿಸಿದ್ದು, ನಿಯಮ ಉಲ್ಲಂಘನೆಯಾದರೆ 5 ಸಾವಿರ ದಂಡ ವಿಧಿಸುವುದಾಗಿ ಹೇಳಿದೆ.

ಬೆಂಗಳೂರು: ವಾಟರ್ ಟ್ಯಾಂಕರ್ ಮಾಫಿಯಾ’ಗೆ ಸರ್ಕಾರ ಬ್ರೇಕ್; ಹೊಸ ದರ ನಿಗದಿ ಮಾಡಿ ಜಿಲ್ಲಾಡಳಿತ ಆದೇಶ!
ಬೇಸಿಗೆಯ ಆರಂಭವಾಗಿದ್ದು, ನಗರದಲ್ಲಿ ನೀರಿನ ಅಭಾವ ಶುರುವಾಗಿದೆ. ಈ ಸಮಸ್ಯೆಯನ್ನೇ ಬಂಡವಾಳ ಮಾಡಿಕೊಂಡು ಕೆಲವರು ಸಾರ್ವಜನಿಕರಿಂದ ತಮ್ಮಗಿಷ್ಟ ಬಂದ ದರ ನಿಗದಿ ಮಾಡಿ ಹಣ ವಸೂಲಿ ಮಾಡುತ್ತಿದ್ದರು. ಈ ಮಾಫಿಯಾಗೆ ಕೊನೆಗೂ ಸರ್ಕಾರ ಬ್ರೇಕ್ ಹಾಕಿದ್ದು, ಟ್ಯಾಂಕರ್ ನೀರಿಗೆ ದರ ನಿಗದಿ ಮಾಡಿದೆ.

