Washington

ವಿಶ್ವದ ಅತಿದೊಡ್ಡ ಕ್ರಿಪ್ಟೋ ಕರೆನ್ಸಿ ವಿನಿಮಯ ಸಂಸ್ಥೆ Binance ಹ್ಯಾಕ್; 100 ಮಿಲಿಯನ್ ಡಾಲರ್ ಗಿಂತ ಹೆಚ್ಚಿನ ಮೊತ್ತ ನಷ್ಟ!
ವಿಶ್ವದ ಅತಿದೊಡ್ಡ ಕ್ರಿಪ್ಟೋಕರೆನ್ಸಿ ವಿನಿಮಯ ಸಂಸ್ಥೆ Binance ಅನ್ನು ಹ್ಯಾಕ್ ಮಾಡಲಾಗಿದ್ದು, ಇದರಿಂದ ಸುಮಾರು 100 ಮಿಲಿಯನ್ ಡಾಲರ್ ಗಿಂತಲೂ ಹೆಚ್ಚಿನ ಹಣವನ್ನು ಕಳೆದುಕೊಂಡಿರಬಹುದು ಎಂದು ಅಂದಾಜಿಸಲಾಗಿದೆ.

ಭಾರತದ ಕೆಮ್ಮಿನ ಸಿರಪ್ ಸೇವನೆ ಬಳಿಕ 66 ಮಕ್ಕಳ ಸಾವು, ಔಷಧಿ ಪರೀಕ್ಷಿಸಲಾಗುತ್ತಿದೆ ಎಂದ WHO
ಭಾರತದಲ್ಲಿ ಮೇಡನ್ ಫಾರ್ಮಾಸ್ಯುಟಿಕಲ್ಸ್ ತಯಾರಿಸಿದ ನಾಲ್ಕು ಕೆಮ್ಮು ಮತ್ತು ಶೀತ ಸಿರಪ್‌ಗಳ ಕುರಿತು ವಿಶ್ವ ಆರೋಗ್ಯ ಸಂಸ್ಥೆ ಬುಧವಾರ ಎಚ್ಚರಿಕೆ ನೀಡಿದ್ದು, ಗ್ಯಾಂಬಿಯಾದಲ್ಲಿ 66 ಮಕ್ಕಳ ಸಾವಿಗೆ ಅವು ಸಂಬಂಧಿಸಿರಬಹುದು ಎಂದು ಎಚ್ಚರಿಸಿದೆ.

ಟ್ವಿಟರ್ ಖರೀದಿ ಒಪ್ಪಂದ ಪ್ರಕ್ರಿಯೆ ಮುಂದುವರಿಕೆ: ಎಲಾನ್ ಮಸ್ಕ್
ಖ್ಯಾತ ಮೈಕ್ರೋ ಬ್ಲಾಗಿಂಗ್ ಜಾಲತಾಣ ಟ್ವಿಟರ್ ಖರೀದಿ ವಿಚಾರವಾಗಿ ಸಾಕಷ್ಟು ಸುದ್ದಿಗೆ ಗ್ರಾಸವಾಗಿದ್ದ ಟೆಸ್ಲಾ ಮುಖ್ಯಸ್ಥ ಎಲಾನ್ ಮಸ್ಕ್ ಇದೀಗ ಮತ್ತೆ ಟ್ವಿಟರ್ ಖರೀದಿ ಪ್ರಕ್ರಿಯೆ ಮುಂದುವರೆಸಲು ತಾವು ಸಿದ್ಧವಿರುವುದಾಗಿ ಮಹತ್ವದ ಘೋಷಣೆ ಮಾಡಿದ್ದಾರೆ.

ಪುರುಷರಿಗೆ ಸ್ಕರ್ಟ್, ಮಹಿಳೆಯರಿಗೆ ಪ್ಯಾಂಟ್..; ಲಿಂಗಾಧರಿತ ಸಮವಸ್ತ್ರ ನಿಯಮ ರದ್ದು ಮಾಡಿದ ವರ್ಜಿನ್ ಅಟ್ಲಾಂಟಿಕ್!
ವರ್ಜಿನ್ ಅಟ್ಲಾಂಟಿಕ್ ವಿಮಾನಯಾನ ಸಂಸ್ಥೆ ತನ್ನ ಲಿಂಗ ಗುರುತಿನ ನೀತಿಯನ್ನು ನವೀಕರಿಸಿದ್ದು, ಉದ್ಯೋಗಿಗಳಿಗೆ ಲಿಂಗ ಸಮವಸ್ತ್ರವನ್ನು ಧರಿಸುವ ಅಗತ್ಯವನ್ನು ತೆಗೆದುಹಾಕಿದೆ.

ಎಫ್-16 ಡೀಲ್: ಎಸ್ ಜೈಶಂಕರ್ ಹೇಳಿಕೆಗೆ ಅಮೆರಿಕಾ ಪ್ರತ್ಯುತ್ತರ ಹೀಗಿದೆ...
ಭಾರತ ಮತ್ತು ಪಾಕಿಸ್ತಾನ ಎರಡೂ ಯುಎಸ್‌ನ ಪಾಲುದಾರರಾಗಿದ್ದು, ವಿಭಿನ್ನ ಅಂಶಗಳಿಗೆ ಒತ್ತು ನೀಡಲಾಗಿದೆ ಎಂದು ಬಿಡೆನ್ ಆಡಳಿತ ಸೋಮವಾರ ಹೇಳಿದೆ.

ವಿಡಿಯೋ: 'ನೀವು F**** ಭಾರತೀಯರು ಎಲ್ಲೆಡೆ ಇದ್ದೀರಿ.. ಅಮೆರಿಕ ಬಿಟ್ಟು ಮೊದಲು ತೊಲಗಿ': ಜನಾಂಗೀಯ ನಿಂದನೆ ಮಾಡಿದ ಮಹಿಳೆ ಬಂಧನ
ಭಾರತೀಯರನ್ನು ಗುರಿಯಾಗಿಸಿಕೊಂಡು ಜನಾಂಗೀಯ ನಿಂದನೆ ಮಾಡಿ ಹಲ್ಲೆ ಮಾಡಿದ ಆರೋಪದ ಮೇರೆಗೆ ಅಮೆರಿಕದ ಟೆಕ್ಸಾಸ್ ನಲ್ಲಿ ಮೆಕ್ಸಿಕೋ-ಅಮೆರಿಕನ್ ಮಹಿಳೆಯನ್ನು ಪೊಲೀಸರು ಬಂಧಿಸಿದ್ದಾರೆ.

2023ರಿಂದ ಮಿಸ್ ಯೂನಿವರ್ಸ್ ಸ್ಪರ್ಧೆಗೆ ವಿವಾಹಿತ ಮಹಿಳೆಯರು ಸ್ಪರ್ಧಿಸಬಹುದು!
ಅವಿವಾಹಿತ ಯುವತಿಯರಿಗೆ ಸೀಮಿತವಾಗಿದ್ದ ವಿಶ್ವದ ಅತ್ಯಂತ ಪ್ರತಿಷ್ಠಿತ ಸೌಂದರ್ಯ ಸ್ಪರ್ಧೆ ಮಿಸ್ ಯೂನಿವರ್ಸ್ ನಲ್ಲಿ ಇನ್ನು ಮುಂದೆ ವಿವಾಹಿತ ಮಹಿಳೆಯರು ಮತ್ತು ತಾಯಂದಿರು ಕೂಡ ಸ್ಪರ್ಧಿಸಬಹುದು..

ಭಾರತ ತನ್ನ ಪರಮಾಪ್ತ 'ಅನಿವಾರ್ಯ ಪಾಲುದಾರ': 76ನೇ ಸ್ವಾತಂತ್ರ್ಯ ದಿನಾಚರಣೆ ನಿಮಿತ್ತ ಭಾರತೀಯರಿಗೆ ಶುಭ ಕೋರಿದ ಜೋ ಬೈಡನ್
76ನೇ ಸ್ವಾತಂತ್ರ್ಯ ದಿನಾಚರಣೆ ಸಂಭ್ರಮದಲ್ಲಿರುವ ಭಾರತೀಯ ನಾಗರೀಕರಿಗೆ ಶುಭಕೋರಿರುವ ಅಮೆರಿಕ ಅಧ್ಯಕ್ಷ ಜೋ ಬೈಡನ್ ಅವರು, ಭಾರತ ತನ್ನ ಪರಮಾಪ್ತ ಮತ್ತು 'ಅನಿವಾರ್ಯ ಪಾಲುದಾರ' ಎಂದು ಬಣ್ಣಿಸಿದ್ದಾರೆ.

2022ರಲ್ಲಿ ಹೆಚ್-1 ಬಿ ಸೇರಿದಂತೆ ಹಲವಾರು ವೀಸಾ ಅರ್ಜಿದಾರರ ವೈಯಕ್ತಿಕ ಸಂದರ್ಶನ ಕೈ ಬಿಟ್ಟ ಅಮೆರಿಕ!
ಕೋವಿಡ್-19 ಪ್ರಕರಣಗಳ ಹೆಚ್ಚಳದ ಆತಂಕದ ನಡುವೆ, ಹೆಚ್-1ಬಿ ಕೆಲಸಗಾರರು ಮತ್ತು ವಿದ್ಯಾರ್ಥಿಗಳು ಸೇರಿದಂತೆ 2022 ರಲ್ಲಿ ಹೆಚ್-1 ಬಿ ಕೆಲಸಗಾರರು ಮತ್ತು ವಿದ್ಯಾರ್ಥಿಗಳು ಸೇರಿದಂತೆ ಹಲವಾರು ವೀಸಾ ಅರ್ಜಿದಾರರಿಗೆ ವೈಯಕ್ತಿಕ ಸಂದರ್ಶನದ ಅಗತ್ಯತೆಗೆ ವಿನಾಯಿತಿ ನೀಡುವುದಾಗಿ ಅಮೆರಿಕಾ ಘೋಷಿಸಿದೆ.

