war

ಮಾನವೀಯ ಆಧಾರದ ಮೇಲೆ ಇಬ್ಬರು ಅಮೆರಿಕಾ ಪ್ರಜೆಗಳ ಬಿಡುಗಡೆ ಮಾಡಿದ ಹಮಾಸ್, ಅಧ್ಯಕ್ಷ ಬೈಡನ್ ಸ್ವಾಗತ
ಹಮಾಸ್ ಉಗ್ರರು ಅಪಹರಿಸಿರುವ 200 ಒತ್ತೆಯಾಳುಗಳು ಪೈಕಿ 20 ಮಕ್ಕಳು ಸೇರಿ ಬಹುತೇಕರು ಜೀವಂತವಾಗಿದ್ದಾರೆಂದು ಇಸ್ರೇಲ್ ಹೇಳಿಕೆ ನೀಡಿದ ಬೆನ್ನಲ್ಲೇ ಗಾಜಾದಲ್ಲಿ ಬಂಧಿಸಲಾಗಿದ್ದ ಇಬ್ಬರು ಅಮೆರಿಕಾದ ಪ್ರಜೆಗಳನ್ನು ಹಮಾಸ್ ಬಿಡುಗಡೆ ಮಾಡಿದೆ.

ಯುದ್ಧ ಪೀಡಿತ ಗಾಜಾದಲ್ಲಿ ಆಹಾರ, ನೀರಿಗೆ ಹಾಹಾಕಾರ, ನೆರವಿನ ಹಸ್ತ ಚಾಚಿದ ಭಾರತೀಯ ಮೂಲದ 'ಮದರ್ ತೆರೇಸಾ ಮಿಷನರೀಸ್ ಆಫ್ ಚಾರಿಟಿ'
ಗಾಜಾ ಮೇಲಿನ ದಾಳಿಯನ್ನು ಇಸ್ರೇಲ್ ಮತ್ತಷ್ಟು ತೀವ್ರಗೊಳಿಸಿದ್ದು, ಅಲ್ಲಿ ಮಾನವೀಯತೆ ಕಣ್ಮರೆಯಾಗಿದೆ. ನೀರು, ಆಹಾರ, ಶೌಚಾಲಯ ವ್ಯವಸ್ಥೆಗಳಿಲ್ಲದೆ, ಮುಗ್ಧ ಮಕ್ಕಳು, ಹಿರಿಯ ನಾಗರೀಕರು, ಯುವಕರ ಸಹಾಯಕ್ಕಾಗಿ ಮೊರೆ ಇಡುತ್ತಿದ್ದಾರೆ.

ಯುದ್ಧಪೀಡಿತ ಇಸ್ರೇಲ್ ನಿಂದ ತವರಿಗೆ ಮರಳಿದ 6 ಮಂದಿ ಕನ್ನಡಿಗರು
ಯುದ್ಧಪೀಡಿತ ಇಸ್ರೇಲ್‌ನಲ್ಲಿ ಸಿಲುಕಿದ್ದ ರಾಜ್ಯದ 6 ಮಂದಿ ಕನ್ನಡಿಗರು ಕೊನೆಗೂ ಸುರಕ್ಷಿತವಾಗಿ ತವರಿಗೆ ಮರಳಿದ್ದಾರೆ.

ಇಸ್ರೇಲ್-ಹಮಾಸ್ ಯುದ್ಧ: 1,500ಕ್ಕೂ ಹೆಚ್ಚು ಪ್ಯಾಲೆಸ್ತೈನಿಯರ ಸಾವು; 1.1 ಮಿಲಿಯನ್ ಜನರು ಉತ್ತರ ಗಾಜಾ ತೊರೆಯಲು ಗಡುವು!
ಇಸ್ರೇಲ್ ಮತ್ತು ಹಮಾಸ್ ನಡುವಿನ ಸಂಘರ್ಷದಲ್ಲಿ ಕನಿಷ್ಠ 1,537ಕ್ಕೂ ಪ್ಯಾಲೆಸ್ತೈನಿಯರು ಸಾವನ್ನಪ್ಪಿದ್ದು, ಇತರ 6,612 ಮಂದಿ ಗಾಯಗೊಂಡಿದ್ದಾರೆ ಎಂದು ಗಾಜಾದಲ್ಲಿನ ಪ್ಯಾಲೆಸ್ತೈನ್ ಆರೋಗ್ಯ ಸಚಿವಾಲಯದ ಮಾಹಿತಿ ಉಲ್ಲೇಖಿಸಿ ಸಿಎನ್ ಎನ್ ವರದಿ ಮಾಡಿದೆ.

24 ಗಂಟೆಗಳಲ್ಲಿ ದಕ್ಷಿಣ ಗಾಜಾಕ್ಕೆ ಸ್ಥಳಾಂತರಗೊಳ್ಳಿ: ಇಸ್ರೇಲ್ ಆದೇಶ ತಿರಸ್ಕರಿಸಿದ ಹಮಾಸ್
ಗಾಜಾಪಟ್ಟಿಯಲ್ಲಿ ಬೀಡು ಬಿಟ್ಟಿರುವ ಹಮಾಸ್ ಉಗ್ರರನ್ನು ನಿರ್ನಾಮ ಮಾಡದೆ ಬಿಡುವುದಿಲ್ಲ ಎಂದು ಪಣತೊಟ್ಟಿರುವ ಇಸ್ರೇಲ್ ಉತ್ತರ ಗಾಜಾದಲ್ಲಿರುವ ಪ್ಯಾಲೆಸ್ಟೀನಿಯನ್ ಜನರನ್ನು 24 ಗಂಟೆಗಳ ಅವಧಿಯಲ್ಲಿ ದಕ್ಷಿಣ ಗಾಜಾಕ್ಕೆ ಸ್ಥಳಾಂತರಗೊಳ್ಳುವಂತೆ ಆದೇಶಿಸಿದ್ದು, ಈ ಆದೇಶವನ್ನು ಹಮಾಸ್ ತಿರಸ್ಕರಿಸಿದೆ.

ಪರಿಸ್ಥಿತಿ ಉದ್ವಿಗ್ನ, ಮುಕ್ತವಾಗಿ ಓಡಾಡಲು ಸಾಧ್ಯವಾಗುತ್ತಿಲ್ಲ: ಪ್ಯಾಲೆಸ್ತೀನ್‌ನಲ್ಲಿರುವ ಮಂಗಳೂರು ನರ್ಸ್
ನಾನಿರುವ ಪ್ರದೇಶದಲ್ಲಿ ಪರಿಸ್ಥಿತಿ ಉದ್ವಿಗ್ನಗೊಂಡಿದ್ದು, ಮುಕ್ತವಾಗಿ ಓಡಾಡಲು ಸಾಧ್ಯವಾಗುತ್ತಿಲ್ಲ. ಪ್ರವಾಸಿಗರಿಂದ ಗಿಜಿಗುಡುತ್ತಿದ್ದ ನಮ್ಮ ನಗರ ಬಹುತೇಕ ನಿರ್ಜನವಾಗಿದೆ ಎಂದು ಸಂಕಷ್ಟಕ್ಕೆ ಸಿಲುಕಿರುವ ಪ್ಯಾಲೆಸ್ತೀನ್‌ನಲ್ಲಿರುವ ಮಂಗಳೂರು ನರ್ಸ್ ಥೆರೆಸಾ ಕ್ರಾಸ್ತಾ ಹೇಳಿದ್ದಾರೆ.

ಇಸ್ರೇಲ್-ಹಮಾಸ್ ಮಧ್ಯೆ ಕದನ, ಸಹಸ್ರ ಸಂಖ್ಯೆಯಲ್ಲಿ ಸಾವು: ಇಸ್ರೇಲ್ ರಾಯಭಾರ ಕಚೇರಿ ಸಿಬ್ಬಂದಿ ಏನಂತಾರೆ?
ಇಸ್ರೇಲ್ ಮತ್ತು ಹಮಾಸ್ ನಡುವೆ ಯುದ್ಧ ತೀವ್ರವಾಗಿದೆ. 4,800 ಕಿ.ಮೀ ದೂರದಲ್ಲಿ ಯುದ್ಧ ನಡೆಯುತ್ತಿದ್ದು, ಬೆಂಗಳೂರಿನಲ್ಲಿರುವ ಇಸ್ರೇಲ್ ನ ರಾಯಭಾರ ಕಚೇರಿ ಅಧಿಕಾರಿಗಳು ಮತ್ತು ಸಿಬ್ಬಂದಿ ತಮ್ಮ ಆತ್ಮೀಯರ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ.

ಇಸ್ರೇಲ್ ಮೇಲೆ ಉಗ್ರರ ಅಟ್ಟಹಾಸ: ಸಂಕಷ್ಟದಲ್ಲಿ ಮಂಗಳೂರಿಗರು, ಹೆಚ್ಚಿದ ಆತಂಕ!
ಇಸ್ರೇಲ್‌ನ ಜೆರುಸಲೇಂ, ಟೆಲ್ ಅವೀವ್, ಹೆರ್ಜ್ಲಿಯಾ, ನೆತನ್ಯಾ, ರಮ್ಲಾ, ಹಶರೋನ್ ನಗರಗಳಲ್ಲಿ ಮಂಗಳೂರಿನವರು ಹೆಚ್ಚಿನ ಸಂಖ್ಯೆಯಲ್ಲಿ ನೆಲೆಸಿದ್ದು, ಈ ನಗರಗಳಿಗೆ ಹಮಾಸ್ ಉಗ್ರರ ಪ್ರವೇಶವಾಗಿದೆ ಎಂಬ ಸುದ್ದಿ ಕನ್ನಡಿಗರು ಮತ್ತಷ್ಟು ಆತಂಕಕ್ಕೊಳಗಾಗುವಂತೆ ಮಾಡಿದೆ.

ಇಸ್ರೇಲ್, ಜೆರುಸಲೇಂನಲ್ಲಿ ಸಿಲುಕಿರುವ ಹಾಸನ ಜಿಲ್ಲೆಯ 20 ಮಂದಿ!
ಇಸ್ರೇಲ್–ಪ್ಯಾಲೆಸ್ತೀನ್‌ನ ಹಮಾಸ್ ಉಗ್ರರ ನಡುವಿನ ಕದನ ಭೀಕರ ಸ್ವರೂಪ ಪಡೆದುಕೊಂಡಿದ್ದು, ಎರಡೂ ಕಡೆ ದಾಳಿ-ಪ್ರತಿದಾಳಿಗಳು ತೀವ್ರಗೊಂಡಿವ. ಈ ನಡುವಲ್ಲೇ ಇಸ್ರೇಲ್ ಮತ್ತು ಜೆರುಸಲೇಂನಲ್ಲಿ ಹಾಸನದ 20 ಮಂದಿ ಸಿಲುಕಿಕೊಂಡಿದ್ದಾರೆಂದು ತಿಳಿದುಬಂದಿದೆ.

