Voters

ಬಿಜೆಪಿ ಲೂಟಿ ಮಾಡಿದ ಹಣವನ್ನು 3 ವರ್ಷದಲ್ಲಿ ನಾವು ಹಿಂದಿರುಗಿಸುತ್ತೇನೆ: ಮತದಾರರಿಗೆ ರಾಹುಲ್ ಗಾಂಧಿ ಭರವಸೆ
ಕುದುರೆ ವ್ಯಾಪಾರ’ದ ಮೂಲಕ ಬಿಜೆಪಿ ಸರ್ಕಾರ ರಚಿಸಿದ್ದು, ಕಳೆದ ಮೂರು ವರ್ಷಗಳಿಂದ ಅವರು ‘ಲೂಟಿ ಮಾಡಿದ ಹಣವನ್ನು ಹಿಂದಿರುಗಿಸುತ್ತೇನೆಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು ಮತದಾರರಿಗೆ ಭರವಸೆ ನೀಡಿದ್ದಾರೆ.

ಮತದಾರ ದೇವರುಗಳು ನನಗೆ ವೋಟ್ ಹಾಕದಿದ್ರೆ, ನಾನು ನನ್ನ ಹೆಂಡ್ತಿ ವಿಷ ಕುಡಿದು ಸಾಯುತ್ತೀವಿ: ಬಾಬುರಾವ್ ಚಿಂಚನಸೂರ
ಚುನಾವಣೆಯಲ್ಲಿ ಅಭ್ಯರ್ಥಿಗಳು ಕೆಲವೊಮ್ಮೆ ಮತದಾರರ ಮನಗೆಲ್ಲಲು ವಿಚಿತ್ರ ಬೇಡಿಕೆಗಳು, ಆಮಿಷಗಳನ್ನು ಒಡ್ಡುತ್ತಾರೆ. ಯಾದಗಿರಿ ಜಿಲ್ಲೆಯ ಗುರುಮಠಕಲ್ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಬಾಬುರಾವ್ ಚಿಂಚನಸೂರ್ ಅವರು ಇತ್ತೀಚೆಗೆ ಅಪಘಾತದಲ್ಲಿ ಗಾಯಗೊಂಡು ಈಗ ಚೇತರಿಸಿಕೊಳ್ಳುತ್ತಿದ್ದಾರೆ. ಅವರ ಪತ್ನಿ ಪತಿ ಪರವಾಗಿ ಪ್ರಚಾರ ನಡೆಸುತ್ತಿದ್ದಾರೆ.

ವಿಧಾನಸಭಾ ಚುನಾವಣೆಗೂ ಮುನ್ನ ರಾಜ್ಯದ 58,000 ಕ್ಷೇತ್ರಗಳಲ್ಲಿ 'ಪ್ರಜಾಪ್ರಭುತ್ವ ಹಬ್ಬ' ಆಚರಣೆ
ಮತದಾರರು ತಮ್ಮ ಹಕ್ಕು ಚಲಾಯಿಸುವಂತೆ ಉತ್ತೇಜಿಸಲು ಚುನಾವಣಾ ಆಯೋಗದ ಉಪಕ್ರಮದ ಭಾಗವಾಗಿ ಭಾನುವಾರ ಕರ್ನಾಟಕದಾದ್ಯಂತ 58,000ಕ್ಕೂ ಹೆಚ್ಚು ಮತಗಟ್ಟೆಗಳಲ್ಲಿ 'ಪ್ರಜಾಪ್ರಭುತ್ವ ಹಬ್ಬ'ವನ್ನು ಆಚರಿಸಲಾಯಿತು.

ವಿಧಾನಸಭೆ ಚುನಾವಣೆ: ಮಸೀದಿಗಳು ಆಯ್ತು, ಇದೀಗ ಮತದಾರರನ್ನು ಓಲೈಸಲು ಚರ್ಚ್‌ಗಳತ್ತ ಮುಖ ಮಾಡಿದ ಅಭ್ಯರ್ಥಿಗಳು
ವಿಧಾನಸಭೆ ಚುನಾವಣೆಗೆ ಇನ್ನೇನು ದಿನಗಣನೆ ಆರಂಭವಾಗಿದ್ದು, ಅಭ್ಯರ್ಥಿಗಳು ಮತದಾರರ ಓಲೈಕೆಗೆ ವಿವಿಧ ಕಸರತ್ತುಗಳನ್ನು ಮಾಡುತ್ತಿದ್ದಾರೆ. ಶುಕ್ರವಾರ ಮಸೀದಿಗಳಿಗೆ ಭೇಟಿ ನೀಡಿದ್ದ ನಂತರ, ಮತದಾರರನ್ನು ಸೆಳೆಯಲು ವಿವಿಧ ಪಕ್ಷಗಳ ಅಭ್ಯರ್ಥಿಗಳು ತಮ್ಮ ತಮ್ಮ ವಿಧಾನಸಭಾ ಕ್ಷೇತ್ರಗಳ ಚರ್ಚ್‌ಗಳ ಮುಂದೆ ಸಾಲುಗಟ್ಟಿ ನಿಲ್ಲುತ್ತಿದ್ದಾರೆ.

ವಿಧಾನಸಭಾ ಚುನಾವಣೆ: ಮತದಾರರನ್ನು ಓಲೈಸಲು ದೇವಾಲಯ, ಚರ್ಚ್, ಮಸೀದಿಗಳಿಗೆ ಅಭ್ಯರ್ಥಿಗಳ ಭೇಟಿ
ರಾಜ್ಯ ವಿಧಾನಸಭಾ ಚುನಾವಣೆಗೆ ಇನ್ನು ಕೇವಲ 11 ದಿನಗಳಷ್ಟೇ ಬಾಕಿ ಉಳಿದಿದ್ದು, ಮತದಾರರ ಓಲೈಸಲು ರಾಜಕೀಯ ಪಕ್ಷಗಳ ಅಭ್ಯರ್ಥಿಗಳು ದೇವಾಲಯ, ಚರ್ಚ್ ಹಾಗೂ ಮಸೀದಿಗಳಿಗೆ ಭೇಟಿ ನೀಡುತ್ತಿದ್ದಾರೆ.

ರಜಾದಿನಗಳಲ್ಲೂ ಅಂಚೆ ಇಲಾಖೆ ನೌಕರರಿಂದ ಕರ್ತವ್ಯ ನಿರ್ವಹಣೆ; ಏಪ್ರಿಲ್ ಮಧ್ಯದ ವೇಳೆಗೆ 20 ಲಕ್ಷ ಚುನಾವಣಾ ಗುರುತು ಪತ್ರ ವಿತರಿಸುವ ಗುರಿ
ರಾಜ್ಯ ಚುನಾವಣಾ ಆಯೋಗದ ಪರವಾಗಿ ಅಂಚೆ ಕಚೇರಿ ಮೂಲಕ ನಿತ್ಯವೂ ಸಾವಿರಾರು ಚುನಾವಣಾ ಗುರುತು ಪತ್ರ(EPIC)ಗಳನ್ನು ಕಳುಹಿಸುತ್ತಿರುವುದರಿಂದ ಕರ್ನಾಟಕ ವಿಧಾನಸಭೆ ಚುನಾವಣೆಗೆ ಇನ್ನು ಬೆರಳೆಣಿಕೆಯ ದಿನಗಳು ಇರುವುದರಿಂದ ಕರ್ನಾಟಕ ಅಂಚೆ ಇಲಾಖೆ ನೌಕರರು ಈಗ ಸರ್ಕಾರಿ ರಜಾ ದಿನಗಳಲ್ಲಿ ಮತ್ತು ಭಾನುವಾರಗಳಂದು ಸಹ ಕೆಲಸ ಮಾಡುತ್ತಿದ್ದಾರೆ.

ಕರ್ನಾಟಕ ವಿಧಾನಸಭೆ ಚುನಾವಣೆ: ರಾಜ್ಯದವರಾಗಿದ್ದು ಗುಜರಾತ್‌ನಲ್ಲಿ ತಪ್ಪದೇ ಮತದಾನ ಮಾಡಿದ ಅನುಭವಿ ನೀಡಿದ ಸಲಹೆ
96 ವರ್ಷದ ಅವರು, 17 ಲೋಕಸಭೆ ಚುನಾವಣೆಗಳಲ್ಲಿ ಮತ್ತು 1952ರಿಂದ ಹಲವಾರು ಇತರ ಚುನಾವಣೆಗಳಲ್ಲಿ ಮತ ಚಲಾಯಿಸಿದ್ದಾರೆ. ಗುಜರಾತ್ ಸರ್ಕಾರದ ನೀರಾವರಿ ಇಲಾಖೆಯ ಮುಖ್ಯ ಎಂಜಿನಿಯರ್ ಆಗಿ ನಿವೃತ್ತರಾದ ಸುಬ್ರಹ್ಮಣ್ಯಂ ಅವರು ಅನೇಕರಿಗೆ ಸ್ಫೂರ್ತಿಯಾಗಿದ್ದಾರೆ.

ಯಾವುದೇ ಪಕ್ಷ ಅಥವಾ ಅಭ್ಯರ್ಥಿಗಳು ಮತದಾರರ ಮಾಹಿತಿ ಸಂಗ್ರಹಿಸುವಂತಿಲ್ಲ: ತುಷಾರ್ ಗಿರಿನಾಥ್
ರಾಜಕೀಯ ಪಕ್ಷದ ಕಾರ್ಯಕರ್ತರು ಮತ್ತು ಅಭ್ಯರ್ಥಿಗಳು ಅಥವಾ ಅವರ ಬೆಂಬಲಿಗರು ಮತದಾರರ ಮಾಹಿತಿಗಳನ್ನು ಸಂಗ್ರಹಿಸುವಂತಿಲ್ಲ. ಮಾಹಿತಿ ಸಂಗ್ರಹಿಸುತ್ತಿರುವ ಕುರಿತು ದೂರು ಬಂದಿದ್ದೇ ಆದರೆ, ಎಫ್ಐಆರ್ ದಾಖಲಿಸುತ್ತೇವೆಂದು ಜಿಲ್ಲಾ ಚುನಾವಣಾಧಿಕಾರಿ ತುಷಾರ್ ಗಿರಿನಾಥ್ ಅವರು ಎಚ್ಚರಿಸಿದ್ದಾರೆ.

ಮತದಾರರೇ ರಾಜಕಾರಣಿಗಳನ್ನು ಭ್ರಷ್ಟರನ್ನಾಗಿಸುತ್ತಿದ್ದಾರೆ: ಹೊರಟ್ಟಿ ಆರೋಪ
ರಾಜಕಾರಣಿಗಳಿಂದ ಉಚಿತ ಕೊಡುಗೆಗಳನ್ನು ಸ್ವೀಕರಿಸುವುದು ಅಥವಾ ಬೇಡಿಕೆ ಇಡುವ ಮೂಲಕ ಜನರೇ ರಾಜಕಾರಣಿಗಳನ್ನು ಭ್ರಷ್ಟಗೊಳಿಸುತ್ತಿದ್ದಾರೆ ಎಂದು ಕರ್ನಾಟಕ ವಿಧಾನಪರಿಷತ್ ನ ಸಭಾಧ್ಯಕ್ಷರಾದ ಬಸವರಾಜ ಹೊರಟ್ಟಿ ಆರೋಪಿಸಿದ್ದಾರೆ.

