Vladimir Putin

ಫುಟಿನ್ ಹತ್ಯೆಗೆ ಉಕ್ರೇನ್ ಯತ್ನ: ರಷ್ಯಾ ಆರೋಪ
ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರನ್ನು ಹತ್ಯೆ ಮಾಡುವ ಪ್ರಯತ್ನದಲ್ಲಿ ಉಕ್ರೇನ್ ಎರಡು ಡ್ರೋನ್‌ಗಳೊಂದಿಗೆ ಕ್ರೆಮ್ಲಿನ್ ಮೇಲೆ ದಾಳಿ ಮಾಡಲು ಪ್ರಯತ್ನಿಸುತ್ತಿದೆ ಎಂದು ರಷ್ಯಾದ ಅಧಿಕಾರಿಗಳು ಆರೋಪಿಸಿದ್ದಾರೆ.

ಬೆಲಾರಸ್‌ನಲ್ಲಿ ಪರಮಾಣು ಶಸ್ತ್ರಾಸ್ತ್ರ ಸ್ಥಾಪನೆಗೆ ರಷ್ಯಾ ಯೋಜನೆ!
ಬ್ರಿಟಿಷ್ ಸರ್ಕಾರ ತಾನು ಉಕ್ರೇನ್‌ಗೆ ಯುರೇನಿಯಂ ಸೇರಿದಂತೆ ವಿವಿಧ ಆಯುಧಗಳನ್ನು ಪೂರೈಸುವುದಾಗಿ ಘೋಷಿಸಿದ ಬೆನ್ನಲ್ಲೇ, ಪುಟಿನ್ ತಾನು ಉಕ್ರೇನ್ ಜೊತೆ ಗಡಿ ಹಂಚಿಕೊಳ್ಳುವ ಬೆಲಾರಸ್‌ನಲ್ಲಿ ಕಾರ್ಯತಂತ್ರದ ಅಣ್ವಸ್ತ್ರಗಳನ್ನು ಅಳವಡಿಸುವುದಾಗಿ ಘೋಷಿಸಿದರು.

ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಟೀಕಿಸಿ ಹಾಡಿದ್ದ ರಷ್ಯಾದ ಪಾಪ್ ತಾರೆ ನಿಗೂಢ ಸಾವು!
ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಟೀಕಿಸಿ ಹಾಡುಗಳ ಬರೆದು ಹಾಡಿದ್ದ 35 ವರ್ಷದ ಪಾಪ್ ತಾರೆ ಡಿಮಾ ನೋವಾ ನಿಗೂಢ ಸಾವಿಗೀಡಾಗಿದ್ದಾರೆ.

ರಷ್ಯಾ - ಉಕ್ರೇನ್ ಯುದ್ಧ: ಪುಟಿನ್ ವಿರುದ್ಧ ಬಂಧನ ವಾರಂಟ್ ಹೊರಡಿಸಿದ ಅಂತಾರಾಷ್ಟ್ರೀಯ ಕೋರ್ಟ್
ಉಕ್ರೇನ್ ಮಕ್ಕಳನ್ನು ಕಾನೂನು ಬಾಹಿರವಾಗಿ ರಷ್ಯಾಗೆ ಗಡೀಪಾರು ಮಾಡಿದ ಆರೋಪದ ಮೇಲೆ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಮತ್ತು ರಷ್ಯಾದ ಅಧಿಕಾರಿ ಮಾರಿಯಾ ಅಲೆಕ್ಸೆಯೆವ್ನಾ ಎಲ್ವೊವಾ-ಬೆಲೋವಾ ಅವರ ವಿರುದ್ಧ ಅಂತರರಾಷ್ಟ್ರೀಯ...

ನ್ಯಾಟೋದ ಪರಮಾಣು ಸಾಮರ್ಥ್ಯ ನಿರ್ಲಕ್ಷಿಸುವಂತಿಲ್ಲ; ಮತ್ತೆ ಬೆದರಿಕೆ ಹಾಕಿದ ರಷ್ಯಾ ಅಧ್ಯಕ್ಷ ಪುಟಿನ್
ಉಕ್ರೇನ್ ಗೆ ನೆರವು ನೀಡುತ್ತಿರುವ ನ್ಯಾಟೋದ ಪರಮಾಣು ಸಾಮರ್ಥ್ಯ ನಿರ್ಲಕ್ಷಿಸುವಂತಿಲ್ಲ ಎಂದು ಹೇಳಿರುವ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಮತ್ತೆ ಪರಮಾಣು ಬೆದರಿಕೆ ಹಾಕಿದ್ದಾರೆ.

ರಷ್ಯಾ-ಉಕ್ರೇನ್ ಯುದ್ಧ: ಪುಟಿನ್ ಹತ್ಯೆ ಆತನ ಆಪ್ತರಿಂದಲೇ ಆಗುತ್ತೆ; ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ ಭವಿಷ್ಯ
ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ತನ್ನ ಆಪ್ತರಿಂದಲೇ ಹತ್ಯೆಗೀಡಾಗುತ್ತಾರೆ ಎಂದು ಉಕ್ರೇನ್ ಅಧ್ಯಕ್ಷ ವೊಲೋಡಿಮಿರ್ ಝೆಲೆನ್ಸ್ಕಿ ಹೇಳಿದ್ದಾರೆ.

ಸೇಂಟ್ ಪೀಟರ್ಸ್ ಬರ್ಗ್ ಹೋಟೆಲ್ ಮಹಡಿಯಿಂದ ಬಿದ್ದು ರಷ್ಯಾ ಅಧ್ಯಕ್ಷರ ಆಪ್ತೆ ನಿಗೂಢ ಸಾವು
ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಸರ್ಕಾರದ ರಕ್ಷಣಾ ಇಲಾಖೆಯ ಉನ್ನತ ಅಧಿಕಾರಿಣಿ ನಿಗೂಢವಾಗಿ ಸಾವನ್ನಪ್ಪಿರುವ ಘಟನೆ ಶುಕ್ರವಾರ ವರದಿಯಾಗಿದೆ.

ಗಣರಾಜ್ಯೋತ್ಸವ: ಭಾರತಕ್ಕೆ ಶುಭ ಕೋರಿದ ರಷ್ಯಾ ಅಧ್ಯಕ್ಷ ಪುಟಿನ್
74ನೇ ಗಣರಾಜ್ಯೋತ್ಸವ ಸಂಭ್ರಮದಲ್ಲಿರುವ ಭಾರತಕ್ಕೆ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಗುರುವಾರ ಶುಭ ಕೋರಿದ್ದಾರೆ.

'ಕದನ ವಿರಾಮ'ವಿದ್ದರೂ ಸಾಂಪ್ರದಾಯಿಕ ಕ್ರಿಸ್‌ಮಸ್ ದಿನದಂದು ಉಕ್ರೇನ್ ಮೇಲೆ ರಷ್ಯಾ ದಾಳಿ, ಇಬ್ಬರು ಸಾವು
ಉಕ್ರೇನ್‌ನಲ್ಲಿ ಸಾಂಪ್ರದಾಯಿಕ ಕ್ರಿಸ್‌ಮಸ್ ಆಚರಣೆ ನಡೆಯುವ ಹಿನ್ನೆಲೆಯಲ್ಲಿ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಕದನ ವಿರಾಮ ಘೋಷಿಸಿದ್ದರು ಕೂಡ ಇಬ್ಬರು ಉಕ್ರೇನಿಯನ್ನರು ಸಾವಿಗೀಡಾಗಿದ್ದಾರೆ ಮತ್ತು ಒಂಬತ್ತು ಮಂದಿ ಗಾಯಗೊಂಡಿದ್ದಾರೆ ಎಂದು ಕೀವ್ ಆಡಳಿತ ಭಾನುವಾರ ತಿಳಿಸಿದೆ.

