VK Sasikala

ಎಐಎಡಿಎಂಕೆ ಮಾಜಿ ಸಚಿವ ಸಿವಿ ಷಣ್ಮುಗಂಗೆ ಕೊಲೆ ಬೆದರಿಕೆ: ವಿಕೆ ಶಶಿಕಲಾ ವಿರುದ್ಧ ಎಫ್‌ಐಆರ್
ಅಖಿಲ ಭಾರತ ಅಣ್ಣಾ ದ್ರಾವಿಡ ಮುನ್ನೇತ್ರ ಕಳಗಂ(ಎಐಎಡಿಎಂಕೆ) ಮುಖಂಡೆ ವಿಕೆ ಶಶಿಕಲಾ ಮತ್ತು ಅವರ ಬೆಂಬಲಿಗರ ವಿರುದ್ಧ ತಮಿಳುನಾಡಿನ ವಿಲ್ಲುಪುರಂ ಜಿಲ್ಲೆಯ ರೋಶಾನಾಯ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ.

ವಿಕೆ ಶಶಿಕಲಾಗೆ ಜೈಲಲ್ಲಿ 'ವಿಶೇಷ ಆತಿಥ್ಯ' ಆರೋಪ: ಅಂತಿಮ ವರದಿ ಸಲ್ಲಿಕೆಗೆ ಸರ್ಕಾರಕ್ಕೆ ಹೈಕೋರ್ಟ್ 2 ತಿಂಗಳ ಗಡುವು!
ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜೆ.ಜಯಲಲಿತಾ ಅವರ ಸಹಾಯಕರಾಗಿದ್ದ ವಿ.ಕೆ.ಶಶಿಕಲಾಗೆ ಜೈಲಲ್ಲಿ ನೀಡಲಾಗುತ್ತಿದ್ದ 'ವಿಶೇಷ ಆತಿಥ್ಯ' ವಿಚಾರವಾಗಿ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ದಾಖಲಿಸಿರುವ ಎಫ್‌ಐಆರ್‌ಗೆ ಕ್ಕೆ ಸಂಬಂಧಿಸಿದಂತೆ 2 ತಿಂಗಳೊಳಗೆ ಅಂತಿಮ ವರದಿ ಸಲ್ಲಿಸುವಂತೆ ಕರ್ನಾಟಕ ಹೈಕೋರ್ಟ್ ರಾಜ್ಯಸರ್ಕಾರಕ್ಕೆ ಸೂಚಿಸಿದೆ.

ದಂಡ ಪಾವತಿಸಿದರೆ ಮುಂದಿನ ವರ್ಷ ಜನವರಿ 27ಕ್ಕೆ ಶಶಿಕಲಾ ಜೈಲಿಂದ ರಿಲೀಸ್: ಆರ್‌ಟಿಐ ಪ್ರಶ್ನೆಗೆ ಜೈಲು ಇಲಾಖೆ ಉತ್ತರ
ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜೆ.ಜಯಲಲಿತಾ ಸಹವರ್ತಿ ವಿ ಕೆ ಶಶಿಕಲಾ, ಮುಂದಿನ ವರ್ಷ ಜನವರಿಯಲ್ಲಿ ಬೆಂಗಳೂರು ಜೈಲಿನಿಂದ ಬಿಡುಗಡೆಯಾಗುವ ನಿರೀಕ್ಷೆ ಇದೆ, ಅಕ್ರಮ ಆಸ್ತಿ ಪ್ರಕರಣದಲ್ಲಿ 2017ರಲ್ಲಿ ಶಶಿಕಲಾ ಅವರಿಗೆ ಜೈಲುಶಿಕ್ಷೆಯಾಗಿತ್ತು.

ಶೀಘ್ರದಲ್ಲೇ ಶಶಿಕಲಾ ನಟರಾಜನ್ ಬಿಡುಗಡೆ ಹೇಳಿಕೆ: ಕಾರಾಗೃಹ ಇಲಾಖೆ ಸ್ಪಷ್ಟನೆ
ಉಚ್ಚಾಟಿತ ಎಐಎಡಿಎಂಕೆ ಮುಖಂಡೆ ವಿ.ಕೆ.ಶಶಿಕಲಾ ಅವರನ್ನು ಯಾವುದೇ ಸಮಯದಲ್ಲಿ ಶೀಘ್ರದಲ್ಲೇ ಬಿಡುಗಡೆ ಮಾಡಬಹುದು ಎಂಬ ಹೇಳಿಕೆಯನ್ನು ಬೆಂಗಳೂರು ಕೇಂದ್ರ ಕಾರಾಗೃಹ ಅಧಿಕಾರಿಗಳು ನಿರಾಕರಿಸಿದ್ದಾರೆ.

ಜಯಲಲಿತಾ ಪರಮಾಪ್ತೆ ವಿಕೆ ಶಶಿಕಲಾಗೆ ಸೇರಿದ 1600 ಕೋಟಿ ರೂ. ಬೇನಾಮಿ ಆಸ್ತಿ ಮುಟ್ಟುಗೋಲು
ತಮಿಳುನಾಡಿನ ಮುಖ್ಯಮಂತ್ರಿಯಾಗಿದ್ದ ದಿವಂಗತ ಜಯಲಲಿತ ಅವರ ಪರಮಾಪ್ತ ಗೆಳತಿ ವಿ ಕೆ ಶಶಿಕಲಾ ಅವರಿಗೆ ಸೇರಿದ 1600 ಕೋಟಿ ರೂ. ಬೇನಾಮಿ ಆಸ್ತಿಯನ್ನು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಪತ್ತೆ ಹಚ್ಚಿ ಮುಟ್ಟುಗೋಲು ಹಾಕಿಕೊಂಡಿದ್ದಾರೆ.

ಆರ್ ಕೆ ನಗರ ಚುನಾವಣೆ ಫಲಿತಾಂಶದ ಬಳಿಕ ಮೊದಲ ಬಾರಿಗೆ ಶಶಿಕಲಾ ಭೇಟಿಯಾದ ದಿನಕರನ್
ಆರ್ ಕೆ ನಗರ ಚುನಾವಣೆ ಮುಗಿದ್ದು ಶಾಸಕರಾಗಿ ಆಯ್ಕೆಯಾದ ಟಿಟಿವಿ ದಿನಕರನ್ ಇಂದು ಬೆಳಗ್ಗೆ ಬೆಂಗಳೂರು ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಎಐಎಡಿಎಂಕೆ ನಾಯಕ ಶಶಿಕಾಲಾ ಅವರನ್ನು ....

ಶಶಿಕಲಾ ಕುಟುಂಬದಿಂದಾಗಿ ಜಯಾ ನಿವಾಸದ ಮೇಲೆ ಐಟಿ ದಾಳಿ: ಸಿಎಂ ಪಳನಿಸ್ವಾಮಿ
ದಿನಕರನ್ ವಿರುದ್ಧ ತಮಿಳುನಾಡು ಸಿಎಂ ಪಳನಿ ಸ್ವಾಮಿ ತಿರುಗೇಟು ನೀಡಿದ್ದು, ಶಶಿಕಲಾ ಮತ್ತು ಅವರ ಕುಟುಂಬದಿಂದಾಗಿಯೇ ಜಯಲಲಿತಾ ಅವರ ಪೋಯಸ್ ಗಾರ್ಡನ್ ನಿವಾಸದ ಮೇಲೆ ಐಟಿ ಅಧಿಕಾರಿಗಳು ದಾಳಿ ಮಾಡಿ ಶೋಧ ನಡೆಸಿದರು ಎಂದು ಹೇಳಿದ್ದಾರೆ.

ಚೆನ್ನೈನ ಫೋಯಸ್ ಗಾರ್ಡನ್ ಜಯಲಲಿತಾ ನಿವಾಸದಲ್ಲಿ ಐಟಿ ದಾಳಿ
ತಮಿಳುನಾಡಿನ ಮಾಜಿ ಸಿಎಂ ದಿ. ಜಯಲಲಿತಾ ಅವರು ವಾಸವಿದ್ದ ಚೆನ್ನೈನ ಪೋಯಸ್ ಗಾರ್ಡನ್ ನಿವಾಸದ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಶುಕ್ರವಾರ ರಾತ್ರಿ ದಾಳಿ ನಡೆಸಿದ್ದಾರೆ ಎಂದು ತಿಳಿದುಬಂದಿದೆ.

ಕುಟುಂಬ ನಾಶಕ್ಕೆ ಮೋದಿ, ಜೈಟ್ಲಿ ಯತ್ನ, ಜಯಾ ಆತ್ಮಕ್ಕೆ ಪನ್ನೀರ್ ಸೆಲ್ವಂ ಮೋಸ: ಟಿಟಿವಿ ದಿನಕರನ್
ಐಟಿ ದಾಳಿ ಮೂಲಕ ಪ್ರಧಾನಿ ಮೋದಿ ಮತ್ತು ಕೇಂದ್ರ ಸಚಿವ ಅರುಣ್ ಜೇಟ್ಲಿ ನಮ್ಮ ಕುಟುಂಬವನ್ನು ನಾಶ ಮಾಡಲು ಪ್ರಯತ್ಮಿಸಿದ್ದು, ಅವರ ಪ್ರಯತ್ನ ಎಂದೂ ಸಫಲವಾಗುವುದಿಲ್ಲ ಎಂದು ಶಶಿಕಲಾ ಸಂಬಂಧಿ ಟಿಟಿವಿ ದಿನಕರನ್ ಶನಿವಾರ ಹೇಳಿದ್ದಾರೆ.

