visit

ಮುಖ್ಯಮಂತ್ರಿ ಬೊಮ್ಮಾಯಿ ನಾಳೆ ದೆಹಲಿ ಪ್ರಯಾಣ: ಸಂಪುಟ ವಿಸ್ತರಣೆ ಸಂಬಂಧ ವರಿಷ್ಠರ ಜೊತೆ ಮಾತುಕತೆ
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನಾಳೆ ದೆಹಲಿಗೆ ತೆರಳುತ್ತಿದ್ದು, ಸಚಿವ ಸಂಪುಟ ವಿಸ್ತರಣೆ ಸಂಬಂಧ ಕೇಂದ್ರದ ಬಿಜೆಪಿ ವರಿಷ್ಠರ ಜೊತೆ ಮಹತ್ವದ ಮಾತುಕತೆ ನಡೆಸಲಿದ್ದಾರೆ.

ಖಾತೆ ವಹಿಸಿಕೊಂಡ ಆನಂದ್ ಸಿಂಗ್ ನಾಳೆ ದೆಹಲಿಗೆ ಭೇಟಿ: ಸಮಸ್ಯೆಗೆ ತಾರ್ಕಿಕ ಅಂತ್ಯ ಸಿಗಲಿದೆಯೇ?
ಕೊನೆಗೂ ನೀಡಿದ ಖಾತೆಯಲ್ಲಿ ಕೆಲಸ ಮಾಡಲು ಮುಂದಾಗಿರುವ ಸಚಿವ ಆನಂದ್ ಸಿಂಗ್, ನಾಳೆ ದೆಹಲಿಗೆ ವರಿಷ್ಠರ ಭೇಟಿಗೆ ತೆರಳಲಿದ್ದಾರೆ.

ಮಕ್ಕಳಿಗೆ ಇವತ್ತು ಕೋವಿಡ್ ನಿಂದ ಸ್ವತಂತ್ರ ಸಿಕ್ಕಿದೆ, ಶಾಲೆ ಆರಂಭ ಎಲ್ಲರಿಗೂ ಖುಷಿ ತಂದಿದೆ: ಸಿಎಂ ಬಸವರಾಜ ಬೊಮ್ಮಾಯಿ
ರಾಜ್ಯದಲ್ಲಿ 9ನೇ ತರಗತಿಯಿಂದ ದ್ವಿತೀಯ ಪಿಯುಸಿಯವರೆಗೆ ಆರಂಭವಾಗಿದ್ದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ಶಿಕ್ಷಣ ಸಚಿವ ಬಿ ಸಿ ನಾಗೇಶ್ ಮತ್ತು ಉನ್ನತ ಶಿಕ್ಷಣ ಸಚಿವ ಡಾ ಸಿ ಎನ್ ಅಶ್ವಥ ನಾರಾಯಣ ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ಸರ್ಕಾರಿ ಕಾಲೇಜಿಗೆ ಆಗಮಿಸಿದರು.

ಸಚಿವರ ಮಹಾ ಎಡವಟ್ಟು: ಮೃತ ಯೋಧನ ಬದಲಿಗೆ ಬದುಕಿರುವ ಯೋಧನ ಮನೆಗೆ ತೆರಳಿ ನಾರಾಯಣಸ್ವಾಮಿ ಸಾಂತ್ವನ!
ಜನಾಶೀರ್ವಾದ ಕಾರ್ಯಕ್ರಮದ ವೇಳೆ ಅತ್ಯುತ್ಸಾಹದಲ್ಲಿದ್ದ ಕೇಂದ್ರ ಸಚಿವ ಎ. ನಾರಾಯಣಸ್ವಾಮಿ, ಸೂಕ್ತ ಮಾಹಿತಿ ಪಡೆದುಕೊಳ್ಳದೇ ಭಾರಿ ಎಡವಟ್ಟು ಮಾಡಿಕೊಂಡಿಕೊಂಡಿದ್ದಾರೆ.

500 ರೂ. ಕೊಟ್ಟು ಈ ಜೈಲಿಗೆ ಹೋಗಿ... ಒಂದು ದಿನ ವಾಸ್ತವ್ಯಕ್ಕೆ ಇಲ್ಲಿದೆ ಅವಕಾಶ!
ಜೈಲಿನೊಳಗೆ ಜೀವನ ಹೇಗಿರುತ್ತೆ. ಅಲ್ಲಿ ಕೈದಿಗಳು ಯಾವ ರೀತಿ ಇರ್ತಾರೆ ಅನ್ನೋ ಕುತೂಹಲ ಸಾಮಾನ್ಯವಾಗಿ ಇರುತ್ತೆ. ಇದನ್ನ ತಿಳ್ಕೋಬೇಕು ಅನ್ನೋರಿಗೆ ಇಲ್ಲೊಂದು ಅವಕಾಶ ಸಿಗಲಿದೆ.

ಕೇರಳಿಗರ ಪ್ರತಿಭಟನೆ, ಆಕ್ರೋಶದ ಸುಳಿವು: ಸಿಎಂ ಬೊಮ್ಮಾಯಿ ತಲಪ್ಪಾಡಿ ಚೆಕ್ ಪೋಸ್ಟ್ ಭೇಟಿ ರದ್ದು!
ಕೋವಿಡ್ 3ನೇ ಅಲೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ನೆರೆ ರಾಜ್ಯ ಕೇರಳದಿಂದ ಪ್ರಯಾಣಿಕರು ಹೆಚ್ಚಿನ ಸಂಖ್ಯೆಯಲ್ಲಿ ಕರ್ನಾಟಕದೊಳಗೆ ಬರುವುದನ್ನು ತಡೆಯಲು ತಲಪಾಡಿ ಚೆಕ್ ಪೋಸ್ಟ್ ಬಳಿ ಕಟ್ಟುನಿಟ್ಟಿನ ತಪಾಸಣೆ ಕ್ರಮವನ್ನು ರಾಜ್ಯ ಸರ್ಕಾರ ಕೈಗೊಂಡಿದೆ. ಇದು ಸಹಜವಾಗಿ ಕೇರಳಿಗರನ್ನು ಕೆರಳಿಸಿದೆ.

ಜಿಕಾ ವೈರಸ್ ವರದಿಯಾದ ಪುಣೆಗೆ ಕೇಂದ್ರ ತಂಡ ಭೇಟಿ ಸಾಧ್ಯತೆ
ಇತ್ತೀಚಿಗೆ ಜಿಕಾ ವೈರಸ್ ಪ್ರಕರಣ ಪತ್ತೆಯಾಗಿದ್ದ ಮಹಾರಾಷ್ಟ್ರದ ಪುಣೆಗೆ ದೆಹಲಿಯಿಂದ ತಜ್ಞರ ತಂಡವೊಂದು ಭೇಟಿ ನೀಡುವ ಸಾಧ್ಯತೆಯಿರುವುದಾಗಿ ಅಧಿಕಾರಿಗಳು ಸೋಮವಾರ ಹೇಳಿದ್ದಾರೆ.

ಆಗಸ್ಟ್ 17ಕ್ಕೆ ಜಮ್ಮು-ಕಾಶ್ಮೀರ, ಲಡಾಖ್'ಗೆ ಸಂಸದೀಯ ಸ್ಥಾಯಿ ಸಮಿತಿ ಭೇಟಿ
ಗೃಹ ವ್ಯವಹಾರಗಳ ಸಂಸದೀಯ ಸ್ಥಾಯಿ ಸಮಿತಿಯು ಆಗಸ್ಟ್ 17 ರಿಂದ 22 ರವರೆಗೆ ಜಮ್ಮು ಮತ್ತು ಕಾಶ್ಮೀರ ಹಾಗೂ ಲಡಾಖ್‌ಗೆ ಭೇಟಿ ನೀಡುವ ಸಾಧ್ಯತೆಗಳಿವೆ ಎಂದು ಮೂಲಗಳಿಂದ ತಿಳಿದುಬಂದಿದೆ.

ಪ್ರವಾಹ ಪೀಡಿತ ಉತ್ತರ ಕನ್ನಡ ಜಿಲ್ಲೆಗಿಂದು ಸಿಎಂ ಬಸವರಾಜ ಬೊಮ್ಮಾಯಿ ಭೇಟಿ
ಪ್ರವಾಹ ಪೀಡಿತ ಉತ್ತರ ನ್ನಡ ಜಿಲ್ಲೆಗೆ ರಾಜ್ಯದ ನೂತನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಗುರುವಾರ ಭೇಟಿ ನೀಡಿ, ಪರಿಹಾರ ಕಾರ್ಯಗಳ ಕುರಿತು ಪರಿಶೀಲನೆ ನಡೆಸಲಿದ್ದಾರೆ.

