ರಾಜ್ಯಬಿಜೆಪಿ ಮಾಜಿ ಶಾಸಕನಿಗೆ ಗಣಿ ಇಲಾಖೆ ಬಿಗ್ ಶಾಕ್: ಅಕ್ರಮ ಗಣಿಗಾರಿಕೆಗೆ ಬರೋಬ್ಬರಿ ₹3.43 ಕೋಟಿ ದಂಡ
ಕಲ್ಲು ಗಣಿಗಾರಿಕೆ ನಿಯಮಗಳನ್ನು ಉಲ್ಲಂಘಿಸಿದ ಹಿನ್ನೆಲೆಯಲ್ಲಿ ಬ್ಯಾಡಗಿ ಕ್ಷೇತ್ರದ ಮಾಜಿ ಶಾಸಕ ಹಾಗೂ ಹಾವೇರಿ ಜಿಲ್ಲಾ ಬಿಜೆಪಿ ಘಟಕದ ಹಾಲಿ ಅಧ್ಯಕ್ಷ ವಿರೂಪಾಕ್ಷಪ್ಪ ಬಳ್ಳಾರಿ ಅವರಿಗೆ ಗಣಿ ಮತ್ತು ಭೂವಿಜ್ಞಾನ ಇಲಾಖೆಯು ₹3.43 ಕೋಟಿ ಭಾರಿ ದಂಡ ವಿಧಿಸಿ ನೋಟಿಸ್ ಜಾರಿ ಮಾಡಿದೆ. ಆ ಕುರಿತ ವರದಿ ಇಲ್ಲಿದೆ: