Vinay Guruji

ಈಗಿನ ಕಾಂಗ್ರೆಸ್ ಅಡಳಿತಾವಧಿಯಲ್ಲೇ ಡಿಕೆ.ಶಿವಕುಮಾರ್ ಸಿಎಂ ಆಗುತ್ತಾರೆ: ವಿನಯ್ ಗುರೂಜಿ ಭವಿಷ್ಯ
ಡಿಕೆ ಶಿವಕುಮಾರ್ ಸಿಎಂ ಆಗುವುದು ನಿಶ್ಚಿತ. ಅಜ್ಜಯ್ಯ ನ ಮೇಲೆ ನಿಷ್ಠೆ, ಧರ್ಮದ ಮೇಲೆ ಶ್ರದ್ಧೆ ಡಿಕೆ ಶಿವಕುಮಾರ್'ಗೆ ಇದೆ. ಗುರುಗಳ ಅನುಗ್ರಹದಿಂದ ಇದೇ ಸರ್ಕಾರದ ಅವಧಿಯಲ್ಲಿ ಡಿಕೆ ಶಿವಕುಮಾರ್ ಸಿಎಂ ಸೀಟಲ್ಲಿ ಕೂರುತ್ತಾರೆ ಎಂದು ಭವಿಷ್ಯ ನುಡಿದರು.

ಹುಲಿ ಉಗುರು ಬೇಟೆ: ನಟ ಜಗ್ಗೇಶ್, ದರ್ಶನ್, ರಾಕ್ ಲೈನ್ ವೆಂಕಟೇಶ್, ವಿನಯ್ ಗುರೂಜಿಗೆ ಕಾದಿದ್ಯಾ ಸಂಕಷ್ಟ?
ಕುತ್ತಿಗೆಯಲ್ಲಿ ಧರಿಸಿದ್ದ ಚೈನಿನ ಲಾಕೆಟ್ ನಲ್ಲಿ ಹುಲಿಯ ಒರಿಜಿನಲ್ ಉಗುರು ಹಾಕಿಕೊಂಡದ್ದಕ್ಕೆ ನೇರವಾಗಿ ಬಿಗ್ ಬಾಸ್ ಕನ್ನಡ ಸೀಸನ್ 10ರ ಸ್ಪರ್ಧಿ ವರ್ತೂರು ಸಂತೋಷ್ ಬಂಧನವಾಗಿ ಜೈಲಿನ ಹಿಂದೆ ಕಂಬಿ ಎಣಿಸುತ್ತಿರುವ ಸಂದರ್ಭದಲ್ಲಿ ಹುಲಿ ಉಗುರು, ಹುಲಿ ಚರ್ಮ ಮತ್ತಷ್ಟು ಸೆಲೆಬ್ರಿಟಿಗಳಿಗೆ, ಪ್ರಮುಖ ವ್ಯಕ್ತಿಗಳಿಗೆ ಕಂಠಕವಾಗುವ ಸಾಧ್ಯತೆಯಿದೆ.

ಹುಲಿ ಉಗುರು ಧರಿಸಿದ ಪ್ರಕರಣ: ನಟ ದರ್ಶನ್, ವಿನಯ್ ಗುರೂಜಿ ವಿರುದ್ಧ ಅರಣ್ಯ ಇಲಾಖೆಯಿಂದ ತನಿಖೆ
ಹುಲಿ ಉಗುರು ಧರಿಸಿದ ಆರೋಪದ ಮೇಲೆ ಬಿಗ್ ಬಾಸ್ ಸೀಸನ್ 10ರ ಸ್ಪರ್ಧಿಯಾಗಿದ್ದ ವರ್ತೂರು ಸಂತೋಷ್ ಅವರನ್ನು ಬಂಧಿಸಿದ ನಂತರ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಅಂತಹದ್ದೇ ಪೆಂಡೆಂಟ್ ಧರಿಸಿರುವ ಫೋಟೋಗಳು...

ಹುಲಿ ಉಗುರು ಧರಿಸಿದ ಪ್ರಕರಣ: ನಟ ದರ್ಶನ್, ವಿನಯ್ ಗುರೂಜಿ ವಿರುದ್ಧ ಕ್ರಮ ಕೈಗೊಳ್ಳಲು ದೂರು
ಕನ್ನಡದ ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ 10ರ ಸ್ಪರ್ಧಿಯಾಗಿದ್ದ ವರ್ತೂರು ಸಂತೋಷ್ ಅವರು ಹುಲಿ ಉಗುರುಳ್ಳ ಡಾಲರ್ - ಚೈನ್ ನ್ನು ತಮ್ಮ ಕೊರಳಿಗೆ ಧರಿಸಿಕೊಂಡು ಅರಣ್ಯ ಕಾಯ್ದೆ ನಿಯಮ ಉಲ್ಲಂಘಿಸಿದ್ದಾರೆ ಎಂಬ ಆರೋಪದ ಮೇಲೆ ಪೊಲೀಸರು ಬಂಧಿಸಿ ಅವರೀಗ ಜೈಲಿನಲ್ಲಿದ್ದಾರೆ.

ಶಾಂತಿ ಹಾಳಾಗುತ್ತಿರುವ ಮೂಲ ಎಲ್ಲಿದೆ, ಅದರ ತಾಯಿ ಬೇರನ್ನು ಹುಡುಕಬೇಕು; ಗಲಭೆಯಲ್ಲಿ ಯುವಕರ ಭಾಗಿ ಆತಂಕಕಾರಿ: ವಿನಯ್ ಗುರೂಜಿ
ಈದ್ ಮಿಲಾದ್ ಮೆರವಣಿಗೆ ವೇಳೆ ಕೋಮು ಗಲಾಟೆ ನಡೆದಿರುವ ಶಿವಮೊಗ್ಗ ನಗರದ ಹೊರವಲಯದ ಶಾಂತಿನಗರದ ರಾಗಿಗುಡ್ಡದಲ್ಲಿ ಪರಿಸ್ಥಿತಿ ಪೊಲೀಸರ ಬಿಗಿ ಭದ್ರತೆ ನಡುವೆ ಬೂದಿ ಮುಚ್ಚಿದ ಕೆಂಡದಂತಿದೆ.

ರೇಣುಕಾಚಾರ್ಯ ತಮ್ಮನ ಪುತ್ರನ ಸಾವು ಪ್ರಕರಣ: ಗೌರಿಗದ್ದೆ ಆಶ್ರಮಕ್ಕೆ ತೆರಳಿ ವಿನಯ್ ಗುರೂಜಿಯಿಂದ ಮಾಹಿತಿ ಕಲೆ ಹಾಕಿದ ಪೊಲೀಸರು
ದಾವಣಗೆರೆಯ ಹೊನ್ನಾಳಿ ಕ್ಷೇತ್ರದ ಶಾಸಕ ರೇಣುಕಾಚಾರ್ಯ ತಮ್ಮನ ಮಗ ಚಂದ್ರಶೇಖರ್ ಸಾವಿನ ತನಿಖೆ ನಡೆಸುತ್ತಿರುವ ಪೊಲೀಸರು ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲ್ಲೂಕಿನ ಗೌರಿಗದ್ದೆಯಲ್ಲಿರುವ ವಿನಯ್ ಗುರೂಜಿ ಆಶ್ರಮಕ್ಕೆ ತೆರಳಿ ಮಾಹಿತಿ ಕಲೆ ಹಾಕಿದ್ದಾರೆ.

ಕೋವಿಡ್ 3ನೇ ಅಲೆ ಎದುರಿಸಲು ಸಜ್ಜಾಗಿ: ಮುಖ್ಯಮಂತ್ರಿ ಯಡಿಯೂರಪ್ಪರಿಗೆ ವಿನಯ್ ಗುರೂಜಿ ಸಲಹೆ
ಕೊರೋನಾ ಎರಡನೇ ಅಲೆ ರಾಜ್ಯದಲ್ಲಿ ನರಕವನ್ನೇ ಸೃಷ್ಟಿಸಿತ್ತು. ಇನ್ನು ಮೂರನೇ ಅಲೆ ಬಗ್ಗೆ ತಜ್ಞರು ಎಚ್ಚರಿಕೆ ಮಾತುಗಳನ್ನಾಡಿದ್ದು ಇದನ್ನು ಬೆಂಬಲಿಸಿ ವಿನಯ್ ಗುರೂಜಿ ಸಹ ಕೋವಿಡ್ ಮೂರನೇ ಅಲೆಗೆ ಸಿದ್ಧತೆ ಮಾಡಿಕೊಳ್ಳಿ ಎಂದು ಸಲಹೆ ನೀಡಿದ್ದಾರೆ.

ಡಿಕೆ ಶಿವಕುಮಾರ್ ಪುತ್ರಿ-ಸಿದ್ದಾರ್ಥ್ ಪುತ್ರನ ವಿವಾಹಕ್ಕೆ ಬೆಸುಗೆ ಹಾಕಿದ್ದು ಇವರೇ!
ಮದುವೆಗಳು ಸ್ವರ್ಗದಲ್ಲಿಯೇ ನಿಶ್ಚರವಾಗಿರುತ್ತವೆ ಎಂಬ ನಾಣ್ಣುಡಿಯಿದೆ. ಆದರೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಪುತ್ರಿ ಐಶ್ವರ್ಯಾ ಮತ್ತು ಕಾಫಿ ಡೇ ಮಾಲೀಕ ಸಿದ್ದಾರ್ಥ್ ಪುತ್ರ ಅಮರ್ಥ್ಯ ಹೆಗ್ಡೆ ಮದುವೆ ಮಾತುಕತೆಗೆ ಅವಧೂತ ವಿನಯ್ ಗುರೂಜಿ ಕಾರಣ ಎಂದು ಹೇಳಲಾಗುತ್ತಿದೆ.

ಆಧ್ಯಾತ್ಮ ಗುರುವಿಗೆ ಹುಲಿ ಚರ್ಮ ತಂದ ಸಂಕಷ್ಟ!
ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಲಾಗಿದ್ದ ಫೋಟೋವೊಂದು ಸ್ವಯಂಘೋಷಿತ ಆಧ್ಯಾತ್ಮ ಗುರು ವಿನಯ್ ಗುರೂಜಿ ಅವರಿಗೆ ಸಂಕಷ್ಟ ತಂದೊಡ್ಡಿದೆ.

