Vijayendra

BJP ಕೋರ್ ಕಮಿಟಿ ಸಭೆ: ‘ನಾಯಕತ್ವದಲ್ಲಿ ಬದಲಾವಣೆ ಇಲ್ಲ’ ಎಂದು ಸ್ಪಷ್ಟ ಸಂದೇಶ; ಸೋಮಶೇಖರ್-ಹೆಬ್ಬಾರ್ ಅಮಾನತಿಗೆ ಶಿಫಾರಸು..!
ಯತ್ನಾಳ್ ಬಂಡಾಯ ವಿಚಾರ ಈಗಾಗಲೇ ಹೈಕಮಾಂಡ್ ಅಂಗಳದಲ್ಲಿರುವುದರಿಂದ ಈ ಬಗ್ಗೆ ಕೋರ್ ಕಮಿಟಿ ಸಭೆಯಲ್ಲಿ ಹೆಚ್ಚು ಚರ್ಚೆ ನಡೆದಿಲ್ಲ ಎನ್ನಲಾಗಿದೆ.

ಬಿಜೆಪಿ ವಕ್ಫ್ ರ‍್ಯಾಲಿ: ಯತ್ನಾಳ್ ಅಭಿಯಾನದ ಬಳಿಕ ವಿಜಯೇಂದ್ರ ಶಕ್ತಿ ಪ್ರದರ್ಶನ
ವಿಜಯೇಂದ್ರ ಮತ್ತು ಯತ್ನಾಳ್ ನೇತೃತ್ವದ ಎರಡು ಬಣಗಳು ವಕ್ಫ್ ವಿವಾದದ ಕಿಚ್ಚಿನ ಕ್ರೆಡಿಟ್ ಪಡೆಯಲು ಪ್ರಯತ್ನಿಸುತ್ತಿವೆ. ಆದಾಗ್ಯೂ, ವಿಜಯೇಂದ್ರ ನೇತೃತ್ವದ ಬಣ ಯತ್ನಾಳ್ ಪರ ಹೋರಾಟಕ್ಕೆ ಬಂದಿದ್ದವರು ಸೇರಿದಂತೆ ಬಿಜೆಪಿಯ ಎಲ್ಲ ನಾಯಕರನ್ನು ಒಗ್ಗೂಡಿಸುವಲ್ಲಿ ಯಶಸ್ವಿಯಾಯಿತು.

ಮುಡಾ ಅಕ್ರಮ ತನಿಖೆ ಪ್ರಗತಿ ಬಗ್ಗೆ ಲೋಕಾಯುಕ್ತಕ್ಕೆ ಇ.ಡಿ ಪತ್ರ ಸ್ವಾಗತಾರ್ಹ: ಬಿ.ವೈ ವಿಜಯೇಂದ್ರ
ಪ್ರಾಥಮಿಕ ಹಂತದಲ್ಲಿ ಇಡಿ ನಡೆಸಿದ ತನಿಖೆಯಲ್ಲಿ 700 ಕೋಟಿ ರೂ ಗೂ ಹೆಚ್ಚು ಅಕ್ರಮ ನಡೆದಿರುವುದು ಬೆಳಕಿಗೆ ಬಂದಿದೆ ಎಂದು ವಿಜಯೇಂದ್ರ ತಿಳಿಸಿದ್ದಾರೆ. ಮುಡಾ ಅಕ್ರಮದ ಬಗ್ಗೆ ಎಳೆಎಳೆಯಾಗಿ ಬ್ರಹ್ಮಾಂಡ ಭ್ರಷ್ಟಾಚಾರವನ್ನು ಜಾರಿ ನಿರ್ದೇಶನಾಲಯ ಬಿಡಿಸಿದೆ.

ಯಡಿಯೂರಪ್ಪ-ವಿಜಯೇಂದ್ರ ಒಪ್ಪಂದ ರಾಜಕೀಯ ಮಾಡುತ್ತಿದ್ದಾರೆ: BJP ಯಲ್ಲಿ ಸಂಚಲನ ಸೃಷ್ಟಿಸಿದ ಅನಾಮಧೇಯ ಪತ್ರ
ವಿಜಯೇಂದ್ರ, ಯಡಿಯೂರಪ್ಪ ಒಪ್ಪಂದ ರಾಜಕೀಯ ಮಾಡುತ್ತಿದ್ದಾರೆ ಎಂದು ಆರೋಪಿಸಿ ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್, ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ, ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್ ಶಾಗೆ ಪತ್ರ ಬರೆಯಲಾಗಿದ್ದು, ಈ ಪತ್ರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ದೇಶದ್ರೋಹಿಗಳ ಮೇಲಿನ ಕೇಸ್ ಹಿಂಪಡೆದ ಸರ್ಕಾರ, ಸ್ವಾಮೀಜಿಗಳ ವಿರುದ್ಧ ಪ್ರಕರಣ ದಾಖಲಿಸುತ್ತಿದೆ: ವಿಜಯೇಂದ್ರ
ವಕ್ಫ್ ವಿಚಾರದಲ್ಲಿ ಫ್ರೀಡಂ ಪಾರ್ಕ್‌ನಲ್ಲಿ ಮೊನ್ನೆ ನಡೆದ ಹೋರಾಟದಲ್ಲಿ ಸ್ವಾಮೀಜಿಗಳು ರಾಜ್ಯ ಸರ್ಕಾರದ ನಡವಳಿಕೆ ವಿರುದ್ಧ ಆಕ್ರೋಶಭರಿತರಾಗಿ ಹೇಳಿಕೆ ಕೊಟ್ಟಿದ್ದರು. ಆ ಹೇಳಿಕೆ ಬಗ್ಗೆ ಸ್ವಾಮೀಜಿಗಳು ಕ್ಷಮೆಯನ್ನೂ ಕೇಳಿದ್ದಾರೆ.

BJP ಶಿಸ್ತು ಸಮಿತಿ ನೋಟಿಸ್: ಯತ್ನಾಳ್ ಗೆ ರಮೇಶ್ ಜಾರಕಿಹೊಳಿ, ಕುಮಾರ್ ಬಂಗಾರಪ್ಪ ಬೆಂಬಲ, ಸಮರ್ಥನೆ
ವಿಜಯೇಂದ್ರಗೆ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನ ನಿಭಾಯಿಸಲು ಆಗುತ್ತಿಲ್ಲ. ಅಧ್ಯಕ್ಷ ಸ್ಥಾನದಿಂದ ತಕ್ಷಣವೇ ಅವರನ್ನು ಬದಲಾವಣೆ ಮಾಡಬೇಕು. ಯಡಿಯೂರಪ್ಪ ಹುಟ್ಟು ಹೋರಾಟಗಾರ. ಆದರೆ ವಿಜಯೇಂದ್ರ ಯಡಿಯೂರಪ್ಪ ಅವರ ಕಾಲಿನ ಧೂಳಿಗೂ ಸಮನಲ್ಲ.

ಹೌದು ನಾನು ಸ್ವಾರ್ಥಿ, ಮುಂದೊಂದು ದಿನ ನಂಬರ್ 1 ರಾಜಕಾರಣಿಯಾಗುತ್ತೇನೆ: ಯತ್ನಾಳ್
ಯಡಿಯೂರಪ್ಪ ಕುಟುಂಬದ ಬಗ್ಗೆ ನಾವು ಏನೂ ಮಾತನಾಡಿಲ್ಲ, ನಾಯಕತ್ವದ ವಿಷಯದಲ್ಲಿ ಪಕ್ಷದಲ್ಲಿ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ.

ಆರೋಪಗಳಿಗೆ ದಾಖಲೆಗಳಿದ್ದರೆ ಬಿಡುಗಡೆ ಮಾಡಿ: ಯತ್ನಾಳ್'ಗೆ ವಿಜಯೇಂದ್ರ ಸವಾಲು
ಪ್ರಾಥಮಿಕ ವಿರೋಧ ಪಕ್ಷವಾಗಿ ನಾವು ಮುಡಾ ಮತ್ತು ವಾಲ್ಮೀಕಿ ನಿಗಮ ಹಗರಣಗಳು ಸೇರಿದಂತೆ ಕಾಂಗ್ರೆಸ್‌ಗೆ ಸಂಬಂಧಿಸಿದ ಹಲವು ವಿಷಯಗಳನ್ನು ಪ್ರಸ್ತಾಪಿಸಿದ್ದೇವೆ. ನಮ್ಮ ಪ್ರಯತ್ನದಿಂದಾಗಿ ಜನರು ಈ ಸರ್ಕಾರವನ್ನು ಭ್ರಷ್ಟ ಸರ್ಕಾರ ಎಂದು ಕರೆಯುತ್ತಿದ್ದಾರೆ.

ವಿಜಯೇಂದ್ರ ಒಪ್ಪಿಗೆ ಇಲ್ಲದೆ ವಕ್ಫ್ ಹೋರಾಟ: ಸ್ವಕ್ಷೇತ್ರದಲ್ಲೇ ಯತ್ನಾಳ್'ಗೆ ವಿರೋಧ
ಯತ್ನಾಳ್ ಅವರು ವಕ್ಫ್ ವಿಚಾರಕ್ಕಿಂತ ಬಿಜೆಪಿ ವಿರುದ್ಧವೇ ದನಿಯೆತ್ತಿದ್ದಾರೆ. ಯತ್ನಾಳ್ ಅವರ ಎಲ್ಲಾ ಕಾರ್ಯಗಳು ಪಕ್ಷವನ್ನು ಹಾಳು ಮಾಡುತ್ತಿವೆ. ಪಕ್ಷದ ಕಾರ್ಯಕರ್ತರ ಆತ್ಮಸ್ಥೈರ್ಯವನ್ನೂ ಕುಗ್ಗಿಸುತ್ತಿವೆ.

