Vijayawada

ವಿಜಯವಾಡ: ಅನಾರೋಗ್ಯ ಪೀಡಿತ ಬೀದಿ ನಾಯಿಗಳಿಗೆ ವೈದ್ಯಕೀಯ ನೆರವು ಕಲ್ಪಿಸುವ ಪ್ರಾಣಿಪ್ರಿಯ ವೆಂಕಟೇಶ್ವರಲು!
ಆಂಧ್ರ ಪ್ರದೇಶದ 71 ವರ್ಷದ ಮುರುಳ ವೆಂಕಟೇಶ್ವರಲು ವಿಜಯವಾಡದಲ್ಲಿರುವ ತನ್ನ ವಿಶಿಷ್ಠ ಆಶ್ರಮದಲ್ಲಿ ಅನಾರೋಗ್ಯಕ್ಕೊಳಗಾದ ಬೀದಿನಾಯಿಗಳಿಗೆ ವೈದ್ಯಕೀಯ ನೆರವು ನೀಡುತ್ತಾ ಬಂದಿದ್ದಾರೆ.

ವಿಜಯವಾಡ: ಮಕ್ಕಳಿಗೆ ಸೋಂಕು ತಗುಲುತ್ತದೆ ಎಂಬ ಭಯದಿಂದ ಕೋವಿಡ್ ಪಾಸಿಟಿವ್ ದಂಪತಿ ಆತ್ಮಹತ್ಯೆಗೆ ಶರಣು
ಕೊರೋನಾ ಪಾಸಿಟಿವ್ ದೃಢಪಟ್ಟಿದ್ದ ದಂಪತಿಗಳಿಬ್ಬರು ತಮ್ಮ ಮಕ್ಕಳಿಗೆ ಸೋಂಕು ತಗುಲಬಹುದು ಎಂಬ ಭಯದಿಂದ ಆತ್ಮಹತ್ಯೆಗೆ ಶರಣಾಗಿರುವ ದಾರುಣ ಘಟನೆ ಆಂಧ್ರ ಪ್ರದೇಶದ ಕೃಷ್ಣ ಜಿಲ್ಲೆಯ ಪೆಡಾನಾದಲ್ಲಿ ಗುರುವಾರ ರಾತ್ರಿ ನಡೆದಿದೆ.

ಎನ್440ಕೆ ರೂಪಾಂತರಿ ಕೋವಿಡ್-19 ಬಗ್ಗೆ ಭಯಪಡಬೇಕಾದ ಅಗತ್ಯವಿಲ್ಲ: ತಜ್ಞರು
ಎನ್ 440ಕೆ ರೂಪಾಂತರಿ ಕೋವಿಡ್-19 ಇತರ ಕೊರೋನಾವೈರಸ್ ಗಿಂತ ಹೆಚ್ಚಿನ ಅಪಾಯಕಾರಿ ಎಂಬ ವರದಿಗಳ ಬಗ್ಗೆ ಜನರು ಭಯಪಡಬೇಕಾದ ಅಗತ್ಯವಿಲ್ಲ ಎಂದು ತಜ್ಞರು ಹೇಳಿದ್ದಾರೆ.

ರೈತರಿಗೆ ಪರಿಹಾರ ನೀಡದಿದ್ದಲ್ಲಿ ಪ್ರತಿಭಟನೆ: ಪವನ್ ಕಲ್ಯಾಣ್ ಎಚ್ಚರಿಕೆ
ನಿವಾರ್ ಚಂಡಮಾರುತದಿಂದ ಬೆಳೆ ನಷ್ಟವಾದ ರೈತರಿಗೆ ಪ್ರತಿ ಎಕರೆಗೆ 35 ಸಾವಿರ ರೂ. ಪರಿಹಾರ ನೀಡಬೇಕೆಂದು ಜನ ಸೇನಾ ಪಕ್ಷದ ಅಧ್ಯಕ್ಷ ಪವನ್ ಕಲ್ಯಾಣ್ ಆಂಧ್ರ ಪ್ರದೇಶ ಸರ್ಕಾರವನ್ನು ಒತ್ತಾಯಿಸಿದ್ದಾರೆ. ಒಂದು ವೇಳೆ ಬೇಡಿಕೆ ಈಡೇರಿಸುವಲ್ಲಿ ಸರ್ಕಾರ ವಿಫಲವಾದ್ದಲ್ಲಿ ಪ್ರತಿಭಟನೆ ನಡೆಸುವುದಾಗಿ ಅವರು ಎಚ್ಚರಿಕೆ ನೀಡಿದ್ದಾರೆ.

ಪೋಲಾವರಂ ಜಲಾಶಯ ಬಳಿ 100 ಅಡಿ ಎತ್ತರದ ವೈಎಸ್ ಆರ್ ಪ್ರತಿಮೆ ಸ್ಥಾಪನೆಗೆ ಚಂದ್ರಬಾಬು ನಾಯ್ಡು ಆಕ್ಷೇಪ
ಪೋಲಾವರಂ ಜಲಾಶಯ ಬಳಿ ಮಾಜಿ ಮುಖ್ಯಮಂತ್ರಿ ವೈಎಸ್ ರಾಜಶೇಖರ ರೆಡ್ಡಿ ಅವರ 100 ಅಡಿ ಎತ್ತರದ ಪ್ರತಿಮೆಯನ್ನು ಸ್ಥಾಪಿಸಲು ಹೊರಟಿರುವ ಆಂಧ್ರ ಪ್ರದೇಶ ಸರ್ಕಾರದ ಕ್ರಮವನ್ನು ತೆಲುಗು ದೇಶಂ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಮತ್ತು ಮಾಜಿ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ತೀವ್ರವಾಗಿ ಆಕ್ಷೇಪಿಸಿದ್ದಾರೆ.

ಪ್ರೇಯಸಿ ಮನೆಗೆ ನುಗ್ಗಿ ಪೋಷಕರ ಎದುರೇ ಯುವತಿಯ ಕತ್ತು ಸೀಳಿದ ಭಗ್ನ ಪ್ರೇಮಿ!
ತನ್ನ ಪ್ರೀತಿ ನಿರಾಕರಿಸಿದ ಯುವತಿಯ ಮನೆಗೇ ನುಗ್ಗಿದ ಪಾಗಲ್ ಪ್ರೇಮಿಯೊಬ್ಬ ಆಕೆಯ ಪೋಷಕರ ಎದುರೇ ಯುವತಿ ಕುತ್ತಿಗೆ ಸೇಳಿ ಕೊಲೆ ಮಾಡಿರುವ ಘಟನೆ ಆಂಧ್ರ ಪ್ರದೇಶದ ವಾಣಿಜ್ಯ ರಾಜಧಾನಿ ವಿಜಯವಾಡದಲ್ಲಿ ನಡೆದಿದೆ.

ವಿಜಯವಾಡದಲ್ಲಿ ಮತ್ತೊಂದು ಕೈಗಾರಿಕಾ ದುರಂತ, ಸ್ಫೋಟದಲ್ಲಿ 2 ಸಾವು!
ಆಂಧ್ರ ಪ್ರದೇಶದ ವಾಣಿಜ್ಯ ರಾಜಧಾನಿ ವಿಜಯವಾಡದಲ್ಲಿ ಮತ್ತೊಂದು ಕೈಗಾರಿಕಾ ದುರಂತ ಸಂಭವಿಸಿದ್ದು, ಕೈಗಾರಿಕಾ ಎಸ್ಟೇಟ್ ನಲ್ಲಿ ಸಂಭವಿಸಿದ ಸ್ಫೋಟದಲ್ಲಿ ಇಬ್ಬರು ಸಾವನ್ನಪ್ಪಿರುವ ಘಟನೆ ಗುರುವಾರ ನಡೆದಿದೆ.

ವಿಜಯವಾಡದ ಕೋವಿಡ್ ಕೇರ್ ಹೊಟೇಲ್ ನಲ್ಲಿ ಅಗ್ನಿ ಅವಘಡ, ಮೃತರ ಸಂಖ್ಯೆ 10ಕ್ಕೇರಿಕೆ, ಸರ್ಕಾರ ತಲಾ 50 ಲಕ್ಷ ರೂ ಪರಿಹಾರ
ಇತ್ತೀಚೆಗೆ ದುರಂತದ ಮೇಲೆ ದುರಂತಗಳು ನಡೆಯುತ್ತವೇ ಇವೆ. ಆಂಧ್ರಪ್ರದೇಶದ ವಿಜಯವಾಡದ ಸ್ವರ್ಣ ಪ್ಯಾಲೆಸ್ ಹೊಟೇಲ್ ನಲ್ಲಿ ಭಾನುವಾರ ನಸುಕಿನ ಜಾವ ಅಗ್ನಿ ಅವಘಡ ಉಂಟಾಗಿದ್ದು ಮೃತಪಟ್ಟವರ ಸಂಖ್ಯೆ 10ಕ್ಕೆ ಏರಿಕೆ ಆಗಿದೆ.

ಪ್ರತಿಭಟನೆ ನಡುವೆ ವಿಕೇಂದ್ರಿಕೃತ ಆಂಧ್ರ ಅಭಿವೃದ್ಧಿ ವರದಿಗೆ ಜಗನ್ ಸಂಪುಟ ಅನುಮೋದನೆ
ವಿಕೇಂದ್ರಿಕೃತ ಆಂಧ್ರ ಪ್ರದೇಶ ಅಭಿವೃದ್ಧಿಗೆ ಸಂಬಂಧಿಸಿದಂತೆ ಜಿಎನ್ ರಾವ್ ಕಮಿಟಿ ಮತ್ತು ಬೊಸ್ಟನ್ ಸಲಹಾ ಗ್ರೂಪ್ ( ಬಿಸಿಜಿ) ವರದಿ ಪರಿಶೀಲನೆಗೆ ರಚಿಸಲಾಗಿದ್ದ ಉನ್ನತ ಮಟ್ಟದ ಸಮಿತಿ ಸಲ್ಲಿಸಿರುವ ವರದಿಗೆ ಮುಖ್ಯಮಂತ್ರಿ ವೈಎಸ್ ಜಗನ್ ಮೋಹನ್ ರೆಡ್ಡಿ ನೇತೃತ್ವದ ಆಂಧ್ರ ಪ್ರದೇಶ ಸಚಿವ ಸಂಪುಟ ಇಂದು ಅನುಮೋದನೆ ನೀಡಿದೆ.

