Varanasi

ಹ್ಯಾಟ್ರಿಕ್ ಗೆಲುವಿನ ಉತ್ಸಾಹದಲ್ಲಿ ಪ್ರಧಾನಿ ಮೋದಿ: ವಾರಣಾಸಿಯಲ್ಲಿ ಇನ್ನು ಕೆಲವೇ ಕ್ಷಣದಲ್ಲಿ ನಾಮಪತ್ರ ಸಲ್ಲಿಕೆ
ಪ್ರಧಾನಿ ನರೇಂದ್ರ ಮೋದಿ ಅವರು 2024 ರ ಲೋಕಸಭೆ ಚುನಾವಣೆಗೆ ಉತ್ತರ ಪ್ರದೇಶದ ವಾರಣಾಸಿ ಲೋಕಸಭಾ ಕ್ಷೇತ್ರದಿಂದ ಇಂದು ಮಂಗಳವಾರ ನಾಮಪತ್ರ ಸಲ್ಲಿಸಲು ಸಜ್ಜಾಗಿದ್ದು, ಮೂರನೇ ಅವಧಿಗೆ ದಾಖಲೆಯ ಅಂತರದಲ್ಲಿ ಗೆಲುವಿನ ನಿರೀಕ್ಷೆಯಲ್ಲಿದ್ದಾರೆ.

ವಾರಣಾಸಿಯಲ್ಲಿ ನಾಮಪತ್ರ ಸಲ್ಲಿಸುವ ಮುನ್ನ ಪ್ರಧಾನಿ ಮೋದಿಯಿಂದ ಗಂಗಾಸ್ನಾನ
ಪ್ರಧಾನಿ ನರೇಂದ್ರ ಮೋದಿ ಅವರು ತಾವು ಪ್ರತಿನಿಧಿಸುತ್ತಿರುವ ವಾರಣಾಸಿ ಲೋಕಸಭಾ ಕ್ಷೇತ್ರದಿಂದ ನಾಮಪತ್ರ ಸಲ್ಲಿಸುವ ಒಂದು ದಿನ ಮೊದಲು ಸೋಮವಾರ ಸಂಜೆ ಆರು ಕಿಲೋಮೀಟರ್ ರೋಡ್ ಶೋ ನಡೆಸಲಿದ್ದಾರೆ.

ಲೋಕಸಭಾ ಚುನಾವಣೆ: ಮೇ 14ಕ್ಕೆ ವಾರಣಾಸಿಯಿಂದ ಪ್ರಧಾನಿ ಮೋದಿ ನಾಮಪತ್ರ ಸಲ್ಲಿಕೆ
ಪ್ರಧಾನಿ ನರೇಂದ್ರ ಮೋದಿ ಅವರು ಮೇ 14 ರಂದು ವಾರಣಾಸಿ ಲೋಕಸಭಾ ಕ್ಷೇತ್ರದಿಂದ ಚುನಾವಣೆಗೆ ನಾಮಪತ್ರ ಸಲ್ಲಿಸಲಿದ್ದಾರೆ. ಭಾನುವಾರ ಈ ವಿಷಯ ತಿಳಿಸಿದ ವಾರಣಾಸಿ ಬಿಜೆಪಿ ನಗರಾಧ್ಯಕ್ಷ ವಿದ್ಯಾಸಾಗರ್ ರೈ, ಮೇ 13 ರಂದು ಮೋದಿ ಅವರು ಕ್ಷೇತ್ರದಲ್ಲಿ ರೋಡ್‌ಶೋ ನಡೆಸಲಿದ್ದು, ಅದಕ್ಕೆ ಸಿದ್ಧತೆಗಳು ನಡೆಯುತ್ತಿರುವುದಾಗಿ ತಿಳಿಸಿದರು.

ವಾರಣಾಸಿ: ನರೇಂದ್ರ ಮೋದಿ ವಿರುದ್ಧ 2 ಬಾರಿ ಸೋತಿದ್ದ ಅಭ್ಯರ್ಥಿ ಮೂರನೇ ಬಾರಿಗೂ ಸ್ಪರ್ಧೆ
ಲೋಕಸಭೆ ಚುನಾವಣೆ 2024ಕ್ಕೆ ಅಭ್ಯರ್ಥಿಗಳ 4ನೇ ಪಟ್ಟಿಯನ್ನು ಕಾಂಗ್ರೆಸ್ ಬಿಡುಗಡೆ ಮಾಡಿದ್ದು, ಈ ಹಿಂದೆ ಉತ್ತರ ಪ್ರದೇಶದ ವಾರಣಾಸಿ ಕ್ಷೇತ್ರದಿಂದ ಎರಡು ಬಾರಿ ಸ್ಪರ್ಧಿಸಿ ಬಿಜೆಪಿಯ ನರೇಂದ್ರ ಮೋದಿ ಅವರ ವಿರುದ್ಧ ಸೋತಿದ್ದ ಅಭ್ಯರ್ಥಿಗೆ ಮೂರನೇ ಬಾರಿಗೂ ಟಿಕೆಟ್ ನೀಡಲಾಗಿದೆ.

ಉತ್ತರ ಪ್ರದೇಶ: ಮಹಿಳೆಗೆ 3.5 ಕೋಟಿ ರೂ. ವಂಚನೆ, ಖಾಸಗಿ ಬ್ಯಾಂಕ್ ಮ್ಯಾನೇಜರ್, ಮತ್ತಿತರ ಐವರ ಬಂಧನ
ಮಹಿಳೆಯೊಬ್ಬರಿಗೆ 3.5 ಕೋಟಿ ರೂಪಾಯಿ ವಂಚಿಸಿದ ಖಾಸಗಿ ಬ್ಯಾಂಕ್ ನ ಮ್ಯಾನೇಜರ್, ಕ್ಯಾಷಿಯರ್ ಮತ್ತು ಇತರ ನಾಲ್ವರನ್ನು ವಾರಣಾಸಿ ಪೊಲೀಸರು ಬಂಧಿಸಿದ್ದಾರೆ. ನಿವೃತ್ತ ಶಿಕ್ಷಕಿ ಶಂಪಾ ರಕ್ಷಿತ್ ವಂಚನೆಗೊಳಗಾದವರು.

ಮುಂದಿನ ಐದು ವರ್ಷಗಳಲ್ಲಿ ಭಾರತ ಅಭಿವೃದ್ಧಿಯಲ್ಲಿ ಮಾದರಿ ದೇಶವಾಗಲಿದೆ, ಇದು 'ಮೋದಿ ಗ್ಯಾರಂಟಿ'
ಕಾಶಿಯನ್ನು ಈಗ ಪರಂಪರೆ-ಅಭಿವೃದ್ಧಿಯ ಮಾದರಿಯಾಗಿ ನೋಡಲಾಗುತ್ತಿದೆ: BHU ನಲ್ಲಿ ಪ್ರಧಾನಿ ಮೋದಿ ಮಾತು

ಜ್ಞಾನವಾಪಿ ಪ್ರಕರಣ: ಹಿಂದೂಗಳ ಪೂಜೆಗೆ ತಡೆ ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆಗೆ ಅಲಹಾಬಾದ್ ಹೈಕೋರ್ಟ್ ನಕಾರ
ಜ್ಞಾನವಾಪಿ ಪ್ರಕರಣಕ್ಕೆ ಸಂಬಂಧಿಸಿದಂತೆ ಹಿಂದೂಗಳ ಪೂಜೆಗೆ ತಡೆ ಕೋರಿ ಸಲ್ಲಿಸಲಾಗಿದ್ದ ಅರ್ಜಿ ವಿಚಾರಣೆಗೆ ಅಲಹಾಬಾದ್ ಹೈಕೋರ್ಟ್ ನಕಾರ ವ್ಯಕ್ತಪಡಿಸಿದೆ.

ಜ್ಞಾನವಾಪಿ ಪ್ರಕರಣ: ವಿವಾದಿತ ಮಸೀದಿಯೊಳಗಿನ ಶಿವಲಿಂಗ ಆಕೃತಿ ಸ್ಥಳದ ಸಂಪೂರ್ಣ ಸ್ವಚ್ಛತೆಗೆ 'ಸುಪ್ರೀಂ' ಆದೇಶ
ಜ್ಞಾನವಾಪಿ ಪ್ರಕರಣಕ್ಕೆ ಸಂಬಂಧಿಸಿದಂತೆ ವಿವಾದಿತ ಮಸೀದಿ ಅವರಣದಲ್ಲಿರುವ ಶಿವಲಿಂಗ ಆಕೃತಿ ಸ್ಥಳದ ಸಂಪೂರ್ಣ ಸ್ವಚ್ಛತೆಗೆ 'ಸುಪ್ರೀಂ ಕೋರ್ಟ್' ಆದೇಶ ನೀಡಿದೆ.

ಬಿಎಚ್‌ಯು ಕ್ಯಾಂಪಸ್ ನಲ್ಲಿ ಐಐಟಿ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ: ಮೂವರ ಬಂಧನ
ಬನಾರಸ್ ಹಿಂದೂ ವಿವಿ ಅವರಣದಲ್ಲಿ ಐಐಟಿ ವಿದ್ಯಾರ್ಥಿನಿ ಮೇಲೆ ನಡೆದಿದ್ದ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ವಾರಣಾಸಿ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.

