Uttarakhand

ಉತ್ತರಾಖಂಡ ಭೂಕುಸಿತ: ಜ್ಯೋತಿರ್ಮಠ ಬೆನ್ನಲ್ಲೇ ಶಂಕರಾಚಾರ್ಯ ಮಠಕ್ಕೂ ಅಪಾಯ, ಬಿರುಕು ಬಿಟ್ಟ ಶಿವಲಿಂಗ, ಇಡೀ ಆಶ್ರಮವೇ ಕುಸಿಯುವ ಭೀತಿ!
ಈ ಹಿಂದೆ ಕಂಡುಕೇಳರಿಯದ ಭೀಕರ ಪ್ರವಾಹಕ್ಕೆ ತುತ್ತಾಗಿದ್ದ ಉತ್ತರಾಖಂಡದಲ್ಲಿ ಈಗ ಬೀಕರ ಭೂ ಕುಸಿತ ಸಮಸ್ಯೆ ತಲೆದೋರಿದ್ದು, ಬೆಟ್ಟ-ಗುಡ್ಡಗಳಲ್ಲ.. ಇಡೀ ಊರಿಗೆ ಊರೇ ಕುಸಿಯುವ ಭೀತಿ ಎದುರಾಗಿದೆ.

ಉತ್ತರಾಖಂಡ: ಜೋಶಿಮಠದಲ್ಲಿ ದೇವಾಲಯ ಕುಸಿತ ಬಳಿಕ ಕರ್ಣಪ್ರಯಾಗ್ ಸರದಿ; 50ಕ್ಕೂ ಹೆಚ್ಚು ಮನೆಗಳಲ್ಲಿ ಬಿರುಕು
ಉತ್ತರಾಖಂಡದ ಬೆಟ್ಟದ ಪಟ್ಟಣಗಳಲ್ಲಿ ಭೂಮಿ ಮುಳುಗಡೆ ಪ್ರಕರಣಗಳು ನಿರಂತರವಾಗಿ ಹೆಚ್ಚುತ್ತಿವೆ. ಜೋಶಿಮಠದಲ್ಲಿ ನಿನ್ನೆ ದೇವಾಲಯ ಕುಸಿದುಬಿದ್ದು ಈಗಾಗಲೇ ಭಯದಲ್ಲಿ ಬದುಕುತ್ತಿರುವ ಇಲ್ಲಿನ ನಿವಾಸಿಗಳು, ಕರ್ಣಪ್ರಯಾಗದಲ್ಲಿ ಇದೇ ರೀತಿಯ ಪ್ರಕರಣಗಳು ವರದಿಯಾದ ನಂತರ ಇನ್ನಷ್ಟು ಭಯಭೀತರಾಗಿದ್ದಾರೆ.

ಉತ್ತರಾಖಂಡ್: ವಿದ್ಯಾರ್ಥಿ ಸಂಘದ ಚುನಾವಣೆ, ಎಬಿವಿಪಿ, ಸ್ವತಂತ್ರ ಅಭ್ಯರ್ಥಿಗಳು ಹೆಚ್ಚಿನ ಸ್ಥಾನಗಳಲ್ಲಿ ಗೆಲುವು
ಉತ್ತರಾಖಂಡ್ ನ ವಿದ್ಯಾರ್ಥಿ ಸಂಘಕ್ಕೆ 123 ಕಾಲೇಜುಗಳಲ್ಲಿ ನಡೆದ ಚುನಾವಣೆಯಲ್ಲಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಹಾಗೂ ಸ್ವತಂತ್ರರು ಹೆಚ್ಚಿನ ಸ್ಥಾನಗಳಲ್ಲಿ ಗೆಲುವು ಸಾಧಿಸುವ ಮೂಲಕ ಪ್ರಾಬಲ್ಯ ಮೆರೆದಿದ್ದಾರೆ.

ಉತ್ತರಾಖಂಡ್ ನಲ್ಲಿ ಕಾಮಗಾರಿ ವೇಳೆ ನೇಪಾಳದಿಂದ ಕಲ್ಲು ತೂರಾಟ
ಉತ್ತರಾಖಂಡ್ ನ ಧಾರ್ಚುಲಾದಲ್ಲಿ ನಡೆಯುತ್ತಿರುವ ಕಾಮಗಾರಿ ವೇಳೆ ನೇಪಾಳದಿಂದ ಕಲ್ಲು ತೂರಾಟ ನಡೆದಿದೆ.

ಉತ್ತರಾಖಂಡ: ಕಾಳಿ ನದಿ ನಿರ್ಮಾಣ ಕಾಮಗಾರಿ ವಿರೋಧಿಸಿ ಭಾರತೀಯ ಕಾರ್ಮಿಕರ ಮೇಲೆ ನೇಪಾಳಿಗರಿಂದ ಕಲ್ಲು ತೂರಾಟ!
ಉತ್ತರಾಖಂಡದ ಪಿಥೋರಗಢ್ದಲ್ಲಿರುವ ಭಾರತ-ನೇಪಾಳ ಗಡಿಯಲ್ಲಿ ಕಾಳಿ ನದಿ ನಿರ್ಮಾಣ ಕಾಮಗಾರಿ ವಿರೋಧಿಸಿ ಭಾರತೀಯ ಕಾರ್ಮಿಕರ ಮೇಲೆ ನೇಪಾಳಿಗರು ಕಲ್ಲು ತೂರಾಟ ನಡೆಸಿದ್ದು ಪರಿಸ್ಥಿತಿ ಉದ್ವಿಗ್ನಗೊಂಡಿದೆ.

ಉತ್ತರಾಖಂಡ ವಿಧಾನಸಭೆಯಲ್ಲಿ ಮತಾಂತರ ನಿಷೇಧ, ಮಹಿಳಾ ಮೀಸಲಾತಿ ಮಸೂದೆ ಅಂಗೀಕಾರ
ಪೂರಕ ಬಜೆಟ್ ಅಧಿವೇಶನದ ಎರಡನೇ ದಿನವಾದ ಗುರುವಾರ ಉತ್ತರಾಖಂಡ ವಿಧಾನಸಭೆಯಲ್ಲಿ ಎರಡು ಪ್ರಮುಖ ಮಸೂದೆಗಳನ್ನು ಧ್ವನಿ ಮತದ ಮೂಲಕ ಅಂಗೀಕರಿಸಲಾಗಿದೆ.

ಭಾರತ-ಅಮೆರಿಕ ಜಂಟಿ ಸೇನಾ ಯುದ್ಧ ಅಭ್ಯಾಸದ ಚಿತ್ರಗಳು; ಹದ್ದು, ನಾಯಿಗಳಿಗೂ ತರಬೇತಿ
ಉತ್ತರಾಖಂಡದಲ್ಲಿ ಎಲ್ಎಸಿಯಿಂದ ಸುಮಾರು 100 ಕಿ.ಮೀ. ದೂರದಲ್ಲಿರುವ ತಪೋವನದಲ್ಲಿ 18ನೇ ಭಾರತ-ಅಮೆರಿಕ ಜಂಟಿ ಸೇನಾ 'ಯುದ್ಧ ಅಭ್ಯಾಸ' ನಡೆಯುತ್ತಿದ್ದು, ಹದ್ದು, ನಾಯಿಗಳಿಗೂ ತರಬೇತಿ ನೀಡಲಾಗುತ್ತಿದೆ.

ಉತ್ತರಾಖಂಡದ ಚಮೋಲಿಯಲ್ಲಿ ಪ್ರಪಾತಕ್ಕೆ ಉರುಳಿ ಬಿದ್ದ ವಾಹನ, 12 ಮಂದಿ ಸಾವು
ಉತ್ತರಾಖಂಡದ ಚಮೋಲಿ ಜಿಲ್ಲೆಯಲ್ಲಿ ಶುಕ್ರವಾರ ಪ್ರಯಾಣಿಕರ ವಾಹನವೊಂದು ಆಳವಾದ ಪ್ರಪಾತಕ್ಕೆ ಉರುಳಿಬಿದ್ದ ಪರಿಣಾಮ ಇಬ್ಬರು ಮಹಿಳೆಯರು ಸೇರಿದಂತೆ 12 ಜನ ಸಾವನ್ನಪ್ಪಿದ್ದಾರೆ ಮತ್ತು ಮೂವರು ಗಾಯಗೊಂಡಿದ್ದಾರೆ...

ಉತ್ತರಾಖಂಡ: ವರನ ಕಡೆಯವರು ನೀಡಿದ ಲೆಹೆಂಗಾ ಚೆನ್ನಾಗಿಲ್ಲವೆಂದು ಮದುವೆಯನ್ನೇ ರದ್ದುಗೊಳಿಸಿದ ವಧು
ಮದುವೆಗಳು ಸ್ವರ್ಗದಲ್ಲೇ ನಿಶ್ಚಯವಾಗಿರುತ್ತದೆ ಎನ್ನುತ್ತಾರೆ ದೊಡ್ಡವರು. ಇದು ನಿಜವೋ ಸುಳ್ಳೋ ತಿಳಿಯದು. ಉತ್ತರಾಖಂಡದ ಹಲ್ದ್ವಾನಿಯ ವಧುವೊಬ್ಬಳು ದುಬಾರಿ ಲೆಹೆಂಗಾ ನೀಡಿಲ್ಲವೆಂಬ ಕಾರಣಕ್ಕೆ ನಿಶ್ಚಯವಾಗಿದ್ದ ಮದುವೆಯನ್ನು ನಿರಾಕರಿಸಿದ್ದಾಳೆ.

