Uttar Pradesh police

ಲಖಿಂಪುರ್ ಹಿಂಸಾಚಾರ: 2ನೇ ಎಫ್‌ಐಆರ್‌ನಲ್ಲಿ ಪ್ರತಿಭಟನಾಕಾರರಿಂದ ಬಿಜೆಪಿ ಕಾರ್ಯಕರ್ತರ ಮೇಲೆ ದಾಳಿ ದಾಖಲು!
ಲಖಿಂಪುರ್ ಖೇರಿ ಹಿಂಸಾಚಾರದ ಬಗ್ಗೆ ದಾಖಲಾದ ಎರಡನೇ ಎಫ್‌ಐಆರ್ ನಲ್ಲಿ ಕೃಷಿ ಕಾನೂನು ವಿರೋಧಿ ಪ್ರತಿಭಟನಾಕಾರರು ಬಿಜೆಪಿ ಕಾರ್ಯಕರ್ತರ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ದಾಖಲಿಸಲಾಗಿದೆ.

ತಿರುಚಿದ ವಿಡಿಯೋಗಳನ್ನು ನಿಯಂತ್ರಿಸಲು ಟ್ವಿಟರ್ ಸಮರ್ಥವಾಗಿದೆ ಎಂಬುದನ್ನು ಸಾಬೀತುಪಡಿಸಿ: ಕರ್ನಾಟಕ ಹೈಕೋರ್ಟ್
ಟ್ವಿಟರ್ ನ ವ್ಯವಸ್ಥಾಪಕ ನಿರ್ದೇಶಕ ಮನೀಷ್ ಮಹೇಶ್ವರವರಿಗೆ ಖುದ್ದು ಹಾಜರಾಗುವಂತೆ ಸೂಚಿಸಿದ್ದ ಉತ್ತರ ಪ್ರದೇಶ ಪೊಲೀಸರ ಕ್ರಮವನ್ನು ಕರ್ನಾಟಕ ಹೈಕೋರ್ಟ್ ಖಂಡಿಸಿದೆ.

ಟ್ವಿಟರ್ ವರ್ಸಸ್ ಉತ್ತರ ಪ್ರದೇಶ ಪೊಲೀಸರು: ವಿಚಾರಣೆ ಮುಂದೂಡಿದ ಕರ್ನಾಟಕ ಹೈಕೋರ್ಟ್
ಉತ್ತರಪ್ರದೇಶದ ವೃದ್ಧ ಮುಸ್ಲಿಂ ವ್ಯಕ್ತಿಯೊಬ್ಬರ ಮೇಲಿನ ಹಲ್ಲೆ ವಿಡಿಯೋ ಟ್ವೀಟಗಳು ವೈರಲ್ ಸಂಬಂಧ ಟ್ವೀಟರ್ ಇಂಡಿಯಾ ಎಂಡಿ ಮನೀಶ್ ಮಹೇಶ್ವರಿಗೆ ಗಾಜಿಯಾಬಾದ್ ಪೊಲೀಸರ ಸಮನ್ಸ್ ಸಂಬಂಧದ ವಿಚಾರಣೆಯನ್ನು ಕರ್ನಾಟಕ ಹೈಕೋರ್ಟ್ ಮುಂದೂಡಿದೆ.

ಕೋಮು ಸಂಘರ್ಷಕ್ಕೆ ಯತ್ನ: ಟ್ವೀಟರ್, ರಾಣಾ ಆಯೂಬ್ ಸೇರಿ 9 ಮಂದಿ ವಿರುದ್ಧ ಎಫ್ಐಆರ್ ದಾಖಲಿಸಿದ ಯುಪಿ ಪೊಲೀಸರು!
ಘಾಜಿಯಾಬಾದ್‌ನಲ್ಲಿ ಕೆಲ ಮಂದಿ ತನ್ನ ಮೇಲೆ ಹಲ್ಲೆ ನಡೆಸಿದ್ದಾರೆಂದು ಆರೋಪಿಸಿದ್ದ ವೃದ್ಧ ಮುಸ್ಲಿಂ ವ್ಯಕ್ತಿ ವಿಡಿಯೋ ವೈರಲ್ ಆಗಿದ್ದು ಈ ಸಂಬಂಧ ಉತ್ತರ ಪ್ರದೇಶ ಪೊಲೀಸರು ಮೈಕ್ರೋಬ್ಲಾಗಿಂಗ್ ಪ್ಲಾಟ್‌ಫಾರ್ಮ್ ಟ್ವಿಟರ್, ನ್ಯೂಸ್ ಪೋರ್ಟಲ್ ಮತ್ತು ಆರು ವ್ಯಕ್ತಿಗಳ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

ಹತ್ರಾಸ್ ಪ್ರಕರಣ: ಸಂತ್ರಸ್ತೆಯ ಸಹೋದರ, ತಾಯಿಯಿಂದಲೇ ಕೊಲೆ; ಪ್ರಮುಖ ಆರೋಪಿಯಿಂದ ಎಸ್ ಪಿಗೆ ಪತ್ರ!
ಹತ್ರಾಸ್ ಗ್ಯಾಂಗ್ ರೇಪ್ ಪ್ರಕರಣದ :ಪ್ರಮುಖ ಆರೋಪಿ ಉತ್ತರ ಪ್ರದೇಶ ಪೊಲೀಸರಿಗೆ ಪತ್ರ ಬರೆದಿದ್ದು, ಸಹೋದರ ಮತ್ತು ತಾಯಿಯೇ 19 ವರ್ಷದ ತಮ್ಮ ಮಗಳನ್ನು ಹತ್ಯೆ ಮಾಡಿದ್ದಾರೆ ಎಂದು ಆರೋಪಿಸಿದ್ದಾನೆ.

ಯುಪಿ ಪೊಲೀಸರ ‘ಅತ್ಯಾಚಾರ ನಡೆದಿಲ್ಲ’ ಹೇಳಿಕೆ ‘ಬೇಜವಾಬ್ದಾರಿತನದ್ದು’: ನಿವೃತ್ತ ಪೊಲೀಸ್ ಅಧಿಕಾರಿ, ವಿಧಿವಿಜ್ಞಾನ ತಜ್ಞರು
ಹತ್ರಾಸ್ ಸಂತ್ರಸ್ತೆಯ ಮೇಲೆ ಅತ್ಯಾಚಾರ ನಡೆದಿಲ್ಲ ಎಂಬ ಉತ್ತರ ಪ್ರದೇಶ ಪೊಲೀಸರ ಹೇಳಿಕೆ ಅತ್ಯಂತ “ಬೇಜವಾಬ್ದಾರಿತನದ” ಮತ್ತು “ವೃತ್ತಿಪರವಲ್ಲದ” ಹಾಗೂ “ತಪ್ಪಾದ” ಹೇಳಿಕೆ ಎಂದು ನಿವೃತ್ತ ಉನ್ನತ ಪೊಲೀಸ್ ಅಧಿಕಾರಿ, ವಿಧಿವಿಜ್ಞಾನ ಮತ್ತು ಕಾನೂನು ತಜ್ಞರು ಹೇಳಿದ್ದಾರೆ.

ವಿಶ್ವ ಹಿಂದೂ ಮಹಾಸಭಾ ಅಧ್ಯಕ್ಷನ ಹತ್ಯೆ ಪ್ರಕರಣ, 2ನೇ ಪತ್ನಿ ಸೇರಿ ಮೂವರ ಬಂಧನ
ದೇಶಾದ್ಯಂತ ತೀವ್ರ ಕುತೂಹಲ ಕೆರಳಿಸಿದ್ದ ವಿಶ್ವ ಹಿಂದೂ ಮಹಾಸಭಾ ಸಂಸ್ಥಾಪಕ ಅಧ್ಯಕ್ಷ ರಂಜೀತ್ ಬಚ್ಚನ್ ಹತ್ಯೆ ಪ್ರಕರಣವನ್ನು ಭೇದಿಸಿರುವ ಉತ್ತರ ಪ್ರದೇಶ ಪೊಲೀಸರು, ಕೊಲೆಗೀಡಾದ ರಂಜೀತ್ ಬಚ್ಚನ್ ನ ಎರಡನೆಯ ಪತ್ನಿ ಸೇರಿ ಮೂವರನ್ನು ಬಂಧಿಸಿದ್ದಾರೆ.

'ಕುತ್ತಿಗೆ ಪಟ್ಟಿ ಹಿಡಿದು ನೂಕಿದರು': ಉತ್ತರ ಪ್ರದೇಶ ಪೊಲೀಸರ ವಿರುದ್ಧ ಪ್ರಿಯಾಂಕಾ ಗಾಂಧಿ ಆರೋಪ
ನಿವೃತ್ತ ಐಪಿಎಸ್ ಅಧಿಕಾರಿ ಎಸ್.ಆರ್.ದರಪುರಿ ಅವರ ನಿವಾಸಕ್ಕೆ ಭೇಟಿ ನೀಡುವ ವೇಳೆ ನನ್ನನ್ನು ತಡೆದ ಉತ್ತರ ಪ್ರದೇಶ ಪೊಲೀಸರು ಹಲ್ಲೆ ಮಾಡಿದ್ದಾರೆ ಎಂದು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಗಂಭೀರ ಆರೋಪ ಮಾಡಿದ್ದಾರೆ.

ಸಿಎಎ ಪ್ರತಿಭಟನೆ: ಅಮಾಯಕರ ಮುಟ್ಟಲ್ಲ.. ಆದರೆ..: ಪ್ರತಿಭಟನಾಕಾರರಿಗೆ ಯುಪಿ ಪೊಲೀಸ್ ಎಚ್ಚರಿಕೆ
ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಉತ್ತರ ಪ್ರದೇಶದಲ್ಲಿ ಮತ್ತೆ ಪ್ರತಿಭಟನೆಗಳು ಭುಗಿಲೇದ್ದಿದ್ದು, ಈ ವೇಳೆ ಪ್ರತಿಭಟನಾಕಾರರಿಗೆ ಉತ್ತರ ಪ್ರದೇಶ ಡಿಜಿಪಿ ಒಪಿ ಸಿಂಗ್ ಅವರು ಎಚ್ಚರಿಕೆ ನೀಡಿದ್ದಾರೆ.

