UP

ಸತ್ಯಕ್ಕೆ ಸರಿಯಿಲ್ಲ, ಚಿತ್ತಕ್ಕೆ ಸ್ಥಿರವಿಲ್ಲ, ಹಸ್ತದಿಂದಧಿಕ ಹಿತರಿಲ್ಲ, ಎಷ್ಟೇ ವಿಮರ್ಶಿಸಿದರೂ ಮೋದಿಗೆ ಸದ್ಯ ಮನಃಶಾಂತಿ ಇಲ್ಲ!
ಅಂತಃಪುರದ ಸುದ್ದಿಗಳುಸ್ವಾತಿ ಚಂದ್ರಶೇಖರ್ಪ್ರಧಾನಿ ಮೋದಿಗೆ ಮನಃಶಾಂತಿ ಇಲ್ಲ! ದೇಶದ ಮುಂದೆ ಕ್ಷಮೆ ಕೇಳುವ ಪರಿಸ್ಥಿತಿ ಓರ್ವ ಪ್ರಧಾನಿಗೆ ಸೃಷ್ಟಿ ಆಗುವುದು, ಮತ್ತು ಅದನ್ನು ರಾಜಕೀಯ ತಂತ್ರ ಎಂದು ಸಮರ್ಥಿಸಿಕೊಂಡರೂ ಅಂತಹ ಪರಿಸ್ಥಿತಿ ಎದುರಿಸುವುದು ಕಷ್ಟ..

ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ವಿದ್ಯಾರ್ಥಿನಿಯರಿಗೆ ಸ್ಮಾರ್ಟ್ ಫೋನ್, ಸ್ಕೂಟಿ: ಪ್ರಿಯಾಂಕಾ ಗಾಂಧಿ
ಮುಂದಿನ ವರ್ಷ ನಡೆಯಲಿರುವ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಮಹಿಳೆಯರಿಗೆ ಶೇಕಡ 40 ರಷ್ಟು ಟಿಕೆಟ್ ನೀಡುವ ಭರವಸೆ ನೀಡಿದ ಬೆನ್ನಲ್ಲೇ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಮತ್ತೊಂದು ಮಹತ್ವದ ಘೋಷಣೆ ಮಾಡಿದ್ದಾರೆ.

ಮನೆಯ ಮೇಲ್ಛಾವಣಿ ಕುಸಿದು ಮೂವರು ದುರ್ಮರಣ, ಗಾಯಾಳು ಸ್ಥಿತಿ ಗಂಭೀರ
ಮನೆಯ ಮೇಲ್ಛಾವಣಿ ಕುಸಿದು ಮೂವರು ದುರ್ಮರಣ ಹೊಂದಿರುವ ಘಟನೆ ಉತ್ತರ ಪ್ರದೇಶದ ಕಾನ್ಫುರದಲ್ಲಿ ಇಂದು ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಉತ್ತರ ಪ್ರದೇಶದಲ್ಲಿ ಮೊಹರಮ್ ಮೆರವಣಿಗೆಗೆ ನಿರ್ಬಂಧ; ಆದರೆ ತಾಜಿಯಾಗೆ ಅನುಮತಿ
ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥ್ ನೇತೃತ್ವದ ಸರ್ಕಾರ, ಕೋವಿಡ್-19 ಸಾಂಕ್ರಾಮಿಕದ ಹಿನ್ನೆಲೆ ಮೊಹರಮ್ ಮೆರವಣಿಗೆಗೆ ನಿರ್ಬಂಧ ವಿಧಿಸಿದೆ. ಆದರೆ ಮನೆಗಳಲ್ಲಿ ತಾಜಿಯಾ ಹಾಗೂ ಮಜ್ಲಿಸ್ ಆಚರಣೆಗೆ ಅನುಮತಿ ನೀಡಿದೆ.

ಉತ್ತರ ಪ್ರದೇಶ: ಕುಟುಂಬಕ್ಕೆ ವಿಷ ಹಾಕಿದ ಅಪ್ರಾಪ್ತ ಬಾಲಕಿ ಪೊಲೀಸ್ ವಶಕ್ಕೆ
ಕುಟುಂಬ ಸದಸ್ಯರು ಸೇವಿಸುವ ಆಹಾರಕ್ಕೆ ವಿಷ ಬೆರೆಸಿದ ಅಪ್ರಾಪ್ತ ಬಾಲಕಿಯನ್ನು ಉತ್ತರ ಪ್ರದೇಶ ಪೊಲೀಸರು ಬಂಧಿಸಿದ್ದಾರೆ.

ಕೋವಿಡ್ -19 ಎರಡನೇ ಅಲೆ ವೇಳೆ ಆಕ್ಸಿಜನ್ ಕೊರತೆಯಿಂದ ನೂರಾರು ಜನರ ಸಾವು- ಬಿಜೆಪಿ ಶಾಸಕ
ಕೋವಿಡ್-19 ಎರಡನೇ ಅಲೆ ವೇಳೆಯಲ್ಲಿ ಆಕ್ಸಿಜನ್ ಕೊರತೆಯಿಂದ ನೂರಾರು ಜನರು ಸಾವನ್ನಪ್ಪಿರುವುದಾಗಿ ಉತ್ತರ ಪ್ರದೇಶದ ಬಿಜೆಪಿಯ ಶಾಸಕರೊಬ್ಬರು ಹೇಳಿದ್ದಾರೆ.

ಧಾರ್ಮಿಕ ಮತಾಂತರ ಪ್ರಕರಣ: ದೆಹಲಿ, ಉತ್ತರ ಪ್ರದೇಶಗಳಲ್ಲಿ ಇ.ಡಿ ದಾಳಿ
ವಿದೇಶಗಳಿಂದ ಹಣ ಪಡೆದು ಶ್ರವಣ ದೋಷವುಳ್ಳ ವಿದ್ಯಾರ್ಥಿಗಳು ಹಾಗೂ ಬಡವರನ್ನು ಇಸ್ಲಾಮ್ ಗೆ ಮತಾಂತರಗೊಳಿಸುತ್ತಿದ್ದ ಆರೋಪದಲ್ಲಿ ಜಾರಿ ನಿರ್ದೇಶನಾಲಯ ಉತ್ತರ ಪ್ರದೇಶ, ದೆಹಲಿಗಳಲ್ಲಿ ದಾಳಿ ನಡೆಸಿದೆ.

ರಾಷ್ಟ್ರಪತಿ ಭೇಟಿ ವೇಳೆ ವಾಹನ ದಟ್ಟಣೆ: ಕೋವಿಡ್-19 ನಂತರದ ಸಮಸ್ಯೆಗೆ ಮಹಿಳೆ ಸಾವು
ರಾಷ್ಟ್ರಪತಿ ಭೇಟಿ ವೇಳೆ ವಾಹನ ದಟ್ಟಣೆಯಿಂದ ಕೋವಿಡ್-19 ನಂತರದ ಸಮಸ್ಯೆಗಳಿಂದ ಬಳಲುತ್ತಿದ್ದ ಮಹಿಳೆ ಸೂಕ್ತ ಸಮಯಕ್ಕೆ ಆಸ್ಪತ್ರೆಗೆ ತಲುಪಲಾಗದೇ ಮೃತಪಟ್ಟಿದ್ದಾರೆ.

ಯುಪಿ: ಮಸೀದಿ ಧ್ವಂಸ ಸಾಕ್ಷ್ಯಚಿತ್ರ ಕುರಿತು 'ದಿ ವೈರ್' ನ್ಯೂಸ್ ಪೋರ್ಟಲ್, ಇಬ್ಬರು ಪತ್ರಕರ್ತರ ವಿರುದ್ಧ ಎಫ್ ಐಆರ್!
ಮಸೀದಿಯೊಂದರ ಧ್ವಂಸ ಕುರಿತ ಸಾಕ್ಷ್ಯಚಿತ್ರ ವಿಚಾರವಾಗಿ ದಿ ವೈರಲ್ ನ್ಯೂಸ್ ಫೋರ್ಟಲ್ ನ ಇಬ್ಬರು ಪತ್ರಕರ್ತರು ಹಾಗೂ ಇನ್ನಿತರ ಇಬ್ಬರ ವಿರುದ್ಧ ಉತ್ತರ ಪ್ರದೇಶ ಪೊಲೀಸರು ಎಫ್ ಐಆರ್ ದಾಖಲಿಸಿದ್ದಾರೆ. ಮಸೀದಿಯನ್ನು ಅಕ್ರಮವಾಗಿ ನಿರ್ಮಿಸಲಾಗಿತ್ತು ಎಂದು ಆಡಳಿತ ಸಂಸ್ಥೆಗಳು ಹೇಳಿವೆ.

