unlock

ಕೋವಿಡ್-19 ಅನ್'ಲಾಕ್: ಜನರ ಬೇಜವಾಬ್ದಾರಿ; ನಗರದಲ್ಲಿ ನಿಯಮ ಉಲ್ಲಂಘಿಸುವವರ ಸಂಖ್ಯೆಯಲ್ಲಿ ಹೆಚ್ಚಳ!
ರಾಜ್ಯದಲ್ಲಿ ಅನ್'ಲಾಕ್ 2.0 ಹಾಗೂ ಅನ್ ಲಾಕ್ 3.0 ಆರಂಭವಾಗುತ್ತಿದ್ದಂತೆಯೇ ಜನರಲ್ಲಿ ಬೇಜವಾಬ್ದಾರಿತನ ಹೆಚ್ಚಾಗುತ್ತಿದ್ದು, ಮಾಸ್ಕ್ ಧರಿಸದೆ, ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಕೊರೋನಾ ನಿಯಮ ಉಲ್ಲಂಘಿಸುತ್ತಿರುವ ಪ್ರಕರಣಗಳ ಸಂಖ್ಯೆ ನಗರದಲ್ಲಿ ಹೆಚ್ಚಾಗುತ್ತಿದೆ.

ಅನ್'ಲಾಕ್ ಘೋಷಣೆಯಾದರೂ ಕೊಡಗು ಪ್ರವಾಸಿ ತಾಣಗಳು ಇನ್ನೂ ಕ್ಲೋಸ್: ಪ್ರವಾಸಿಗರಿಗೆ ನಿರಾಸೆ
ಕೊಡಗು ಜಿಲ್ಲೆಯಲ್ಲಿ ಅನ್'ಲಾಕ್ ಘೋಷಣೆಯಾಗಿ ಹಲವು ದಿನಗಳು ಕಳೆದರೂ ಪ್ರವಾಸಿ ತಾಣಗಳು ಮಾತ್ರ ಬಂದ್ ಆಗಿರುವುದು ಪ್ರವಾಸಿಗರಲ್ಲಿ ನಿರಾಸೆಯನ್ನುಂಟು ಮಾಡಿದೆ.

ಕಡೆಗೂ ಕೊಡಗು ಅನ್‌ಲಾಕ್: ಸಹಜ ಸ್ಥಿತಿಯತ್ತ ಜನಜೀವನ
ಕೊಡಗು ಜಿಲ್ಲೆಯಲ್ಲೂ ಕೋವಿಡ್ ಪಾಸಿಟಿವ್ ಪ್ರಕರಣಗಳು ಇಳಿಮುಖವಾಗುತ್ತಿದ್ದು ಶುಕ್ರವಾರದಿಂದ ಲಾಕ್‌ಡೌನ್ ಸಡಿಲಿಕೆಯಾಗಲಿದೆ.

ಕೋವಿಡ್ ಅನ್ ಲಾಕ್: ದೆಹಲಿಯಲ್ಲಿ ನಾಳೆಯಿಂದ ಜಿಮ್ ಗಳು ಪುನರಾರಂಭ
ರಾಷ್ಟ್ರ ರಾಜಧಾನಿಯಲ್ಲಿ ಕೋವಿಡ್-19 ಪ್ರಕರಣಗಳ ಇಳಿಕೆ ಮುಂದುವರೆದಿದ್ದು, ಮುಂದಿನ ವಾರಕ್ಕಾಗಿ ಹೊಸ ಸಡಿಲಿಕೆಗಳನ್ನು ದೆಹಲಿ ವಿಪತ್ತು ನಿರ್ವಹಣಾ ಪ್ರಾಧಿಕಾರ ಶನಿವಾರ ಪ್ರಕಟಿಸಿದೆ.

ಕೊರೋನಾ ಇಳಿಮುಖ: ತೆಲಂಗಾಣ, ಆಂಧ್ರಪ್ರದೇಶಕ್ಕೆ ಕೆಎಸ್ಆರ್'ಟಿಸಿಯಿಂದ ಬಸ್ ಸೇವೆ ಆರಂಭ
ಕರ್ನಾಟಕದ ಕೆಲವೊಂದು ಜಿಲ್ಲೆಗಳು ಈಗಾಗಲೇ ಅನ್‌ಲಾಕ್ ಆಗಿದ್ದು, ಜನಜೀವನ ಈ ಹಿಂದಿನಂತೆ ಪುನಾರಂಭಗೊಳ್ಳುತ್ತಿದೆ. ಇದರ ಮಧ್ಯೆಯೇ ಕರ್ನಾಟಕ ಸರ್ಕಾರ ಅಂತಾರಾಜ್ಯ ಸಾರಿಗೆ ಮತ್ತೆ ಪುನಾರಂಭ ಮಾಡಲು ಮುಂದಾಗಿದ್ದು, ಅದರ ಪ್ರಥಮ ಹೆಜ್ಜೆಯಾಗಿ ಪಕ್ಕದ ರಾಜ್ಯಗಳಾದ ತೆಲಂಗಾಣ, ಆಂಧ್ರಪ್ರದೇಶಕ್ಕೆ ಬಸ್ ಸೇವೆ ಮರು ಆರಂಭ ಮಾಡಿದೆ.

ರಾಜ್ಯದ ಇತರ 6 ಜಿಲ್ಲೆಗಳಲ್ಲಿ ಅನ್'ಲಾಕ್: ಹೊಸ ಆದೇಶ!
ರಾಜ್ಯದಲ್ಲಿ ಕೊರೋನಾ 2ನೇ ಅಲೆ ಇಳಿಮುಖವಾಗುತ್ತಿರುವ ಹಿನ್ನೆಲೆಯಲ್ಲಿ 17 ಜಿಲ್ಲೆಗಳಲ್ಲಿ ಲಾಕ್ಡೌನ್ ನಿಯಮ ಇನ್ನಷ್ಟು ಸಡಿಲಿಕೆ ಮಾಡಿದ್ದ ರಾಜ್ಯ ಸರ್ಕಾರ ಸೋಮವಾರ ಏಕಾಏಕಿ ಮತ್ತೆ 6 ಜಿಲ್ಲೆಗಳನ್ನು ಅನ್'ಲಾಕ್ 2.0 ಪಟ್ಟಿಗೆ ಸೇರ್ಪಡೆಗೊಳಿಸಿ ಆದೇಶಿಸಿದೆ.

ಧಾರವಾಡ ಜಿಲ್ಲೆ ಅನಲಾಕ್ ಮಾಡುವಂತೆ ಜಗದೀಶ್ ಶೆಟ್ಟರ್ ಮನವಿ: ಸರ್ಕಾರದಿಂದ ಪರಿಷ್ಕೃತ ಆದೇಶ
10 ದಿನಗಳ ಕೋವಿಡ್ ಪಾಸಿಟಿವಿಟಿ ಸರಾಸರಿ ದರ ಶೇ.4.5 ರಷ್ಟಿದ್ದ ಕಾರಣ ಅನ್‌ಲಾಕ್ ಜಿಲ್ಲೆಗಳ ಪಟ್ಟಿಗೆ ಢಾರವಾಡವನ್ನೂ ಸೇರಿಸಿ ಪರಿಷ್ಕೃತ ಆದೇಶ ಹೊರಡಿಸಲಾಗಿದೆ.

ಜೂನ್ 14ರ ನಂತರ 5 ಹಂತಗಳಲ್ಲಿ ಅನ್ ಲಾಕ್ ಮಾಡಲು ಸರ್ಕಾರ ನಿರ್ಧಾರ: ಕಂದಾಯ ಸಚಿವ ಆರ್. ಅಶೋಕ್
ಲಾಕ್ ಡೌನ್ ಏಕಾಏಕಿ ತೆರೆಯುತ್ತಿಲ್ಲ, 5 ಹಂತಗಳಲ್ಲಿ ರಾಜ್ಯದಲ್ಲಿ ಅನ್ ಲಾಕ್ ಪ್ರಕ್ರಿಯೆ ನಡೆಯಲಿದೆ ಎಂದು ಕಂದಾಯ ಸಚಿವ ಆರ್ ಅಶೋಕ್ ತಿಳಿಸಿದ್ದಾರೆ.

ತಗ್ಗಿದ ಕೋವಿಡ್ ಅಬ್ಬರ: ಅನ್ ಲಾಕ್ ಪ್ರಕ್ರಿಯೆ ಆರಂಭ, ಕರ್ನಾಟಕದ ಅನ್ ಲಾಕ್ ಭವಿಷ್ಯ ಇಂದು ನಿರ್ಧಾರ?
ದೇಶಾದ್ಯಂತ ಮಾರಕ ಕೊರೋನಾ ವೈರಸ್ 2ನೇ ಅಲೆಯ ಅಬ್ಬರ ಗಣನೀಯವಾಗಿ ತಗ್ಗಿದ್ದು, ಸೋಂಕು ನಿಯಂತ್ರಣಕ್ಕೆ ಲಾಕ್ ಡೌನ್ ಮೊರೆ ಹೋಗಿದ್ದ ಹಲವು ರಾಜ್ಯಗಳು ಇಂದಿನಿಂದ ಹಂತಹಂತವಾಗಿ ಅನ್ ಲಾಕ್ ಮಾಡಲು ನಿರ್ಧರಿಸಿವೆ.

