Ukraine

ಕ್ರೆಮ್ಲಿನ್ ಮೇಲೆ ಡ್ರೋನ್ ದಾಳಿ: ರಷ್ಯಾ ಹೇಳಿಕೆ ತಳ್ಳಿ ಹಾಕಿದ ಉಕ್ರೇನ್
ರಷ್ಯಾ ಹೇಳಿಕೆಯನ್ನು ಉಕ್ರೇನ್ ಅಧ್ಯಕ್ಷರು ತಳ್ಳಿಹಾಕಿದ್ದು, ನಾವು ಫುಟಿನ್ ಅಥವಾ ಮಾಸ್ಕೋ ಮೇಲೆ ದಾಳಿ ಮಾಡಿಲ್ಲ ಎಂದು ಹೇಳಿದ್ದಾರೆ.

ಫುಟಿನ್ ಹತ್ಯೆಗೆ ಉಕ್ರೇನ್ ಯತ್ನ: ರಷ್ಯಾ ಆರೋಪ
ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರನ್ನು ಹತ್ಯೆ ಮಾಡುವ ಪ್ರಯತ್ನದಲ್ಲಿ ಉಕ್ರೇನ್ ಎರಡು ಡ್ರೋನ್‌ಗಳೊಂದಿಗೆ ಕ್ರೆಮ್ಲಿನ್ ಮೇಲೆ ದಾಳಿ ಮಾಡಲು ಪ್ರಯತ್ನಿಸುತ್ತಿದೆ ಎಂದು ರಷ್ಯಾದ ಅಧಿಕಾರಿಗಳು ಆರೋಪಿಸಿದ್ದಾರೆ.

ಕಾಳಿ ದೇವಿಗೆ ಅವಹೇಳನ: ಉಕ್ರೇನ್‌ನ ಉಪ ವಿದೇಶಾಂಗ ಸಚಿವರಿಂದ ಕ್ಷಮೆಯಾಚನೆ!
ಉಕ್ರೇನ್ ರಕ್ಷಣಾ ಸಚಿವಾಲಯವು ಕಾಳಿ ದೇವಿಯ ಅವಹೇಳನ ಮಾಡಿರುವ ಬಗ್ಗೆ ಉಪ ವಿದೇಶಾಂಗ ಸಚಿವ ಎಮಿನ್ ಝಪರೋವಾ ಇಂದು ವಿಷಾದ ವ್ಯಕ್ತಪಡಿಸಿದ್ದಾರೆ. ಈ ಕೃತ್ಯಕ್ಕೆ ಕ್ಷಮೆಯಾಚಿಸಿರುವ ಅವರು ನಾವು 'ವಿಶಿಷ್ಟ ಭಾರತೀಯ ಸಂಸ್ಕೃತಿ'ಯನ್ನು ಗೌರವಿಸುತ್ತೇವೆ ಎಂದು ಹೇಳಿದ್ದಾರೆ.

23 ಉಕ್ರೇನಿಯನ್ನರ ಹತ್ಯೆಗೆ ಪ್ರತೀಕಾರ; ಕ್ರೈಮಿಯಾ ತೈಲ ಡಿಪೋ ಮೇಲೆ ಉಕ್ರೇನ್ ಡ್ರೋನ್ ದಾಳಿ
ಕ್ರೈಮಿಯಾ ತೈಲ ಡಿಪೋ ಮೇಲೆ ಉಕ್ರೇನ್ ನ 2 ಡ್ರೋನ್ ಗಳು ದಾಳಿ ಮಾಡಿದ್ದು, ಬೃಹತ್ ಪ್ರಮಾಣದಲ್ಲಿ ಅಗ್ನಿ ಅವಘಡ ಸಂಭವಿಸಿದೆ ಎಂದು ರಷ್ಯಾ ಅಧಿಕಾರಿ ಮಾಹಿತಿ ನೀಡಿದ್ದಾರೆ.

ಭಾರತೀಯ ವಿದ್ಯಾರ್ಥಿಗಳಿಗೆ ಭಾರತದಿಂದಲೇ ವೈದ್ಯಕೀಯ ಪರೀಕ್ಷೆ ಬರೆಯಲು ಉಕ್ರೇನ್ ಅವಕಾಶ
ಫೆಬ್ರುವರಿ 24, 2022 ರಂದು ರಷ್ಯಾದೊಂದಿಗೆ ಸಂಘರ್ಷ ಪ್ರಾರಂಭವಾಗುವ ಮೊದಲು ಉಕ್ರೇನ್‌ನಲ್ಲಿ ಅಧ್ಯಯನ ಮಾಡುತ್ತಿದ್ದ 20,000 ಕ್ಕೂ ಹೆಚ್ಚು ಭಾರತೀಯ ವೈದ್ಯಕೀಯ ವಿದ್ಯಾರ್ಥಿಗಳಿಗೆ ಭಾರತದಿಂದಲೇ ಏಕೀಕೃತ ಅರ್ಹತಾ ಪರೀಕ್ಷೆ...

ಉಕ್ರೇನ್‌ನಲ್ಲಿ ಸಮಗ್ರ, ನ್ಯಾಯಯುತ ಮತ್ತು ಶಾಶ್ವತ ಶಾಂತಿಗಾಗಿ ಕ್ವಾಡ್ ಕರೆ!
ಉಕ್ರೇನ್‌ನಲ್ಲಿ ಪರಮಾಣು ಶಸ್ತ್ರಾಸ್ತ್ರಗಳ ಬಳಕೆ ಅಥವಾ ಬೆದರಿಕೆಯನ್ನು 'ಸ್ವೀಕಾರಾರ್ಹವಲ್ಲ'. ಕ್ವಾಡ್ ವಿದೇಶಾಂಗ ಸಚಿವರು ಶಾಶ್ವತ ಶಾಂತಿಗಾಗಿ ಕರೆ ನೀಡಿದ್ದಾರೆ.

ಉಕ್ರೇನ್‌ನ ಐದು ಅಂತಸ್ತಿನ ಕಟ್ಟಡದ ಮೇಲೆ ರಷ್ಯಾ ಕ್ಷಿಪಣಿ ದಾಳಿ; ಮೂವರು ಸಾವು, ಆರು ಮಂದಿಗೆ ಗಾಯ
ಆಗ್ನೇಯ ಉಕ್ರೇನ್‌ನ ನಗರದ ಐದು ಅಂತಸ್ತಿನ ಅಪಾರ್ಟ್‌ಮೆಂಟ್ ಕಟ್ಟಡಕ್ಕೆ ಗುರುವಾರ ರಷ್ಯಾದ ಕ್ಷಿಪಣಿ ಅಪ್ಪಳಿಸಿದ್ದರಿಂದ ಮೂವರು ಸಾವಿಗೀಡಾಗಿದ್ದಾರೆ ಮತ್ತು ಆರು ಮಂದಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ರಷ್ಯಾ-ಉಕ್ರೇನ್ ಯುದ್ಧವು ಎರಡನೇ ವರ್ಷಕ್ಕೆ ವಿಸ್ತರಿಸಿದೆ.

ದಕ್ಷಿಣ ಕೊರಿಯಾದ ಮಿಲಿಟರಿ ಬೆಂಬಲ ಉಕ್ರೇನ್‌ಗೆ ಧನಾತ್ಮಕವಾಗಿರುತ್ತದೆ: ವೊಲೊಡಿಮಿರ್ ಝೆಲೆನ್‌ಸ್ಕಿ
ದಕ್ಷಿಣ ಕೊರಿಯಾದ ಮಿಲಿಟರಿ ಬೆಂಬಲವು ರಷ್ಯಾ ವಿರುದ್ಧದ ಯುದ್ಧದಲ್ಲಿ ತನ್ನ ದೇಶಕ್ಕೆ ಧನಾತ್ಮಕವಾಗಿರುತ್ತದೆ ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್‌ಸ್ಕಿ ಹೇಳಿದ್ದಾರೆ. ಸಹಾಯ ಮಾಡಲು ಕೊರಿಯಾ ಒಂದು ಮಾರ್ಗವನ್ನು ಕಂಡುಕೊಳ್ಳುತ್ತದೆ ಎಂದು ಭರವಸೆ ವ್ಯಕ್ತಪಡಿಸಿದ್ದಾರೆ.

ರಷ್ಯಾ-ಉಕ್ರೇನ್ ಯುದ್ಧ ಖೈದಿಗಳ ವಿನಿಮಯ: ನೂರಾರು ಸೈನಿಕರ ಬಿಡುಗಡೆ
ರಷ್ಯಾ ಮತ್ತು ಉಕ್ರೇನ್ ಯುದ್ಧ ಕೈದಿಗಳನ್ನು ವಿನಿಮಯ ಮಾಡಿಕೊಂಡಿದ್ದು, ಉಭಯ ದೇಶಗಳು ಡಜನ್ ಗಟ್ಟಲೆ ಸೈನಿಕರು ಮನೆಗೆ ಮರಳಿದ್ದಾರೆ ಎಂದು ಎರಡೂ ಕಡೆಯ ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ.

