U T Khader

ಪಕ್ಷಾಂತರ ಮಾಡಿದರೆ ಸಚಿವ ಸ್ಥಾನ, ಮತದಾನ ಹಕ್ಕು ಕೂಡ ನಿರಾಕರಣೆ? ಕಠಿಣ ನಿಯಮ ಜಾರಿಗೆ ಪಕ್ಷಾಂತರ ವಿರೋಧಿ ಸಮಿತಿ ಚಿಂತನೆ
ಈ ಸಮಿತಿಗೆ ರಾಹುಲ್ ನರ್ವೇಕರ್ ಅಧ್ಯಕ್ಷತೆ ವಹಿಸಿದ್ದು, ಪಕ್ಷಾಂತರ ನಿಷೇಧ ಕಾಯ್ದೆಯನ್ನು ಬಲಪಡಿಸಲು ಅಗತ್ಯ ಕ್ರಮಗಳನ್ನು ಶಿಫಾರಸು ಮಾಡಲು ಫೆಬ್ರವರಿಯಲ್ಲಿ ರಚಿಸಲಾಗಿತ್ತು. ಯು.ಟಿ ಖಾದರ್ ಅವರೊಂದಿಗೆ ಸುರಮ ಪಾದಿ ಹಾಗೂ ಶರಿಂಗೈನ್ ಲಾಂಗ್ ಕುಮೆರ್ ಸಮಿತಿಯ ಸದಸ್ಯರಾಗಿದ್ದಾರೆ.

ಕೋರ್ಟ್ ಆದೇಶ ಸಿಕ್ಕಿದ ನಂತರ ಶಾಸಕ ವಿನಯ್ ಕುಲಕರ್ಣಿ ಭವಿಷ್ಯ ನಿರ್ಧಾರ: ಸ್ಪೀಕರ್ ಯು.ಟಿ ಖಾದರ್
ಮೇಲ್ಮನವಿ ನ್ಯಾಯಾಲಯ ಜೀವಾವಧಿ ಶಿಕ್ಷೆಗೆ ತಾತ್ಕಾಲಿಕ ತಡೆ ನೀಡಿದರೆ, ವಿನಯ್ ಕುಲಕರ್ಣಿ ಅವರು ಶಾಸಕರಾಗಿ ಮುಂದುವರಿಯಬಹುದು. ಇತ್ತೀಚೆಗೆ ಯೋಗೇಶ್ ಗೌಡರ್ ಹತ್ಯೆ ಪ್ರಕರಣದಲ್ಲಿ ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿತ್ತು.

ಸಭಾಧ್ಯಕ್ಷರೇ ಸಭಾತ್ಯಾಗ ಮಾಡುವ ಸನ್ನಿವೇಶವನ್ನು ಕಾಂಗ್ರೆಸ್ ಸರ್ಕಾರ ನಿರ್ಮಾಣ ಮಾಡಿತು: ಬಿಜೆಪಿ ವ್ಯಂಗ್ಯ
ಪ್ರಶ್ನೋತ್ತರ ಕಲಾಪದ ಬಳಿಕ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರು ಶಾಸಕರ 230 ಲಿಖಿತ ಪ್ರಶ್ನೆಗಳ ಪೈಕಿ 84 ಪ್ರಶ್ನೆಗಳಿಗೆ ಉತ್ತರ ಮಂಡಿಸಿದರು.

'ಹೀಗಾದರೆ ಸದನ ಹೇಗೆ ನಡೆಸಬೇಕು, ಉತ್ತರ ಕೊಡಿ': ಖಾದರ್ ಗರಂ; ಕಲಾಪದಿಂದ ಹೊರನಡೆದ ಸ್ಪೀಕರ್; ಮನವೊಲಿಸಿದ ಸಿಎಂ! Video
ಇಂದು ವಿಧಾನಸಭೆಯಲ್ಲಿ ಗೃಹ ಸಚಿವ ಡಾ ಜಿ ಪರಮೇಶ್ವರ್ ಅವರು ಶಾಸಕರು ಕೇಳಿದ್ದ 230 ‘ಅನ್‌ಸ್ಟಾರ್ಡ್’ ಪ್ರಶ್ನೆಗಳಲ್ಲಿ ಕೇವಲ 84ಕ್ಕೆ ಮಾತ್ರ ಉತ್ತರಗಳನ್ನು ಮಂಡಿಸಿದರು.

UT Khader: ನನ್ನ ಮೌನವನ್ನು ದೌರ್ಬಲ್ಯ ಎಂದು ಪರಿಗಣಿಸಬೇಡಿ.. ಉತ್ತರಿಸದಿದ್ದ ಮೇಲೆ ಅಧಿವೇಶನ ಏಕೆ ಕರೆಯಬೇಕು; ಸ್ಪೀಕರ್ ಕಿಡಿ
ಶಾಸಕರು ಸಲ್ಲಿಸಿದ ಪ್ರಶ್ನೆಗಳಿಗೆ ಹೋಲಿಸಿದರೆ ವಿವಿಧ ಇಲಾಖೆಗಳು ನೀಡಿದ ಉತ್ತರಗಳ ಸಂಖ್ಯೆ ಕಡಿಮೆ ಇರುವುದಕ್ಕೆ ಸ್ಪೀಕರ್ ಯುಟಿ ಖಾದರ್ ಅವರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ಮಾತ್ರವಲ್ಲದೇ ಶುಕ್ರವಾರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.

'ಸಭಾಧ್ಯಕ್ಷರೇ ಏನಿದು, ಸದನವನ್ನು 9.15ಕ್ಕೆ ಶುರು ಮಾಡ್ತೀವಿ ಅಂತ ಹೇಳಿ 10.20ಕ್ಕೆ ಶುರು ಮಾಡ್ತೀರಿ': ಶಾಸಕ ಸುರೇಶ್ ಕುಮಾರ್ ಗರಂ
ವಿಧಾನ ಮಂಡಲ ಬಜೆಟ್ ಅಧಿವೇಶನ ನಡೆಯುತ್ತಿದೆ. ರಾಜ್ಯದ ಜನರ ಸಮಸ್ಯೆಗಳ ಬಗ್ಗೆ ಚರ್ಚಿಸಬೇಕಾದ ಜನಪ್ರತಿನಿಧಿಗಳೇ ಕಲಾಪಕ್ಕೆ ಗೈರಾಗುತ್ತಾರೆ, ಸರಿಯಾಗಿ ಸದನಕ್ಕೆ ಹಾಜರಾಗುವುದಿಲ್ಲ ಎಂಬ ಆರೋಪ ಇದೆ.

ರಾಜ್ಯ ವಿಧಾನಮಂಡಲ ಅಧಿವೇಶನ ಫೆಬ್ರವರಿ 4 ರವರೆಗೆ ವಿಸ್ತರಣೆ
"ಜನವರಿ 22 ರಿಂದ ಪ್ರಾರಂಭವಾದ ಒಂಬತ್ತನೇ ಅಧಿವೇಶನ ಜನವರಿ 31 ರ ಬದಲಿಗೆ ಫೆಬ್ರವರಿ 4 ರವರೆಗೆ ಮುಂದುವರಿಸಲು ಇಂದು ನಡೆದ ಸದನ ಸಲಹಾ ಸಮಿತಿ ಸಭೆಯಲ್ಲಿ ನಿರ್ಧರಿಸಲಾಗಿದೆ" ಎಂದು ಯುಟಿ ಖಾದರ್ ತಿಳಿಸಿದ್ದಾರೆ.

ಶಾಸಕರು ಸಿನಿಮೀಯ ಶೈಲಿಯಲ್ಲಿ ಕಚ್ಚಾಡುವುದು ಸರಿಯಲ್ಲ; ಇದು ಎಲ್ಲಾ ರಾಜಕಾರಣಿಗಳಿಗೂ ಕಪ್ಪು ಚುಕ್ಕೆ!
ಬಳ್ಳಾರಿಯಲ್ಲಿ ಬ್ಯಾನರ್ ವಿಚಾರಕ್ಕೆ ಗಲಾಟೆಯಾಗಿರುವುದು ಸರಿಯಲ್ಲ. ಎಲ್ಲರೂ ರಾಜಕೀಯ ಮಾಡಬೇಕು. ಆದರೆ ದ್ವೇಷದ ರಾಜಕಾರಣ ಮಾಡುವುದು ತಪ್ಪು. ಪರಸ್ಪರ ಏಕವಚನ ಬಳಕೆ ಕೂಡ ಸಮರ್ಥನೀಯವಲ್ಲ ಎಂದರು.

ಉತ್ತಮ ಜನಪ್ರತಿನಿಧಿಗಳನ್ನು ತಯಾರು ಮಾಡಲು ಒಂದು ವರ್ಷದ ಕೋರ್ಸ್ ಆರಂಭಿಸಲು ಚಿಂತನೆ: ಯು.ಟಿ ಖಾದರ್
ಪತ್ರಿಕೋದ್ಯಮ ಕೋರ್ಸ್ ಮುಗಿಸಿದವರು ಪತ್ರಕರ್ತರಾಗುತ್ತಾರೆ. ಕಾನೂನು ಓದಿದವರು ವಕೀಲರಾಗುತ್ತಾರೆ. ಅದೇ ರೀತಿ ಯಾವುದೇ ಪದವಿ ಮುಗಿಸಿದವರಿಗೆ ಒಂದು ವರ್ಷ ತರಬೇತಿ ನೀಡಿ ಉತ್ತಮ ನಾಯಕತ್ವ ರೂಪಿಸಲು ಕ್ರಮ ತೆಗೆದುಕೊಳ್ಳಲಾಗುವುದು ಎಂದರು.

