
ಡೆಮೊಕ್ರಾಟ್ಸ್ ವಿರುದ್ಧ ಟ್ರಂಪ್ ಆರೋಪ: ಅಮೆರಿಕ ಅಧ್ಯಕ್ಷರ ಟ್ವೀಟ್ ಗೆ ಟ್ವಿಟರ್ ನಿಂದ ನಿರ್ಬಂಧ!
ಅಮೆರಿಕ ಅಧ್ಯಕ್ಷೀಯ ಚುನಾವಣೆಯ ಮತ ಎಣಿಕೆಯಲ್ಲಿ ಡೆಮೋಕ್ರೆಟಿಕ್ ಪಕ್ಷದ ಜೋಯ್ ಬೈಡೆನ್ ಹಾಗೂ ಹಾಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದೆ.

ಚೀನಾದಲ್ಲಿ ಲಡಾಖ್, ಜಮ್ಮು ಮತ್ತು ಕಾಶ್ಮೀರ ನಕ್ಷೆ ವಿವಾದ: ಭಾರತದ ಕ್ಷಮೆ ಕೋರಿದ ಟ್ವಿಟರ್!
ಭಾರತದ ಅವಿಭಾಜ್ಯ ಅಂಗಗಳಾದ ಲಡಾಖ್, ಜಮ್ಮು ಮತ್ತು ಕಾಶ್ಮೀರಗಳನ್ನು ಚೀನಾದಲ್ಲಿ ತೋರಿಸಿ ಟೀಕೆಗೆ ಗುರಿಯಾಗಿದ್ದ ಟ್ವಿಟರ್ ಸಂಸ್ಥೆ ಇದೀಗ ಭಾರತದ ಕ್ಷಮೆ ಕೋರಿದೆ.

ಲಡಾಖ್ ನ್ನು ಚೀನಾದಲ್ಲಿ ತೋರಿಸಿದ ಟ್ವಿಟರ್ ಗೆ ಸಂಸತ್ ಸಮಿತಿ ತರಾಟೆ: ಲಿಖಿತ ಪ್ರತಿಕ್ರಿಯೆಗೆ ಸೂಚನೆ
ಲಡಾಖ್ ನ್ನು ಚೀನಾದಲ್ಲಿ ತೋರಿಸಿದ್ದ ಟ್ವಿಟರ್ ವಿರುದ್ಧ ಸಂಸತ್ ಸಮಿತಿ ಕೆಂಡಾಮಂಡಲವಾಗಿದ್ದು, ಲಿಖಿತ ಪ್ರತಿಕ್ರಿಯೆ ಹಾಗೂ ಪ್ರಮಾಣಪತ್ರ ಸಲ್ಲಿಕೆ ಮಾಡುವಂತೆ ಸೂಚನೆ ನೀಡಿದೆ.

ದೇಶದ ನಕ್ಷೆಯನ್ನು ತಪ್ಪಾಗಿ ತೋರಿಸಿದ ಟ್ವಿಟರ್ ಗೆ ಕೇಂದ್ರ ಸರ್ಕಾರ ಎಚ್ಚರಿಕೆ
ಟ್ವಿಟರ್ ಸಿಇಒ ಗೆ ಪತ್ರ ಬರೆದಿರುವ ಕೇಂದ್ರ ಸರ್ಕಾರ, ದೇಶದ ನಕ್ಷೆಯನ್ನು ತಪ್ಪಾಗಿ ನಿರೂಪಿಸುವುದರ ಬಗ್ಗೆ ತೀವ್ರ ಅಸಮ್ಮತಿಯನ್ನು ತಿಳಿಸಿದೆ ಮತ್ತು ದೇಶದ ಸಾರ್ವಭೌಮತ್ವ ಮತ್ತು ಸಮಗ್ರತೆಯನ್ನು ಅಗೌರವಗೊಳಿಸುವ ಮೈಕ್ರೋ-ಬ್ಲಾಗಿಂಗ್ ವೇದಿಕೆಯ ಯಾವುದೇ ಪ್ರಯತ್ನವು ಸಂಪೂರ್ಣವಾಗಿ ಸ್ವೀಕಾರಾರ್ಹವಲ್ಲ ಎಂದು ಪ್ರತಿಪಾದಿಸಿದೆ.

ರಾಷ್ಟ್ರೀಯತಾವಾದಿ ವಿಷಯಗಳಿಗೆ ಟ್ವಿಟರ್, ಫೇಸ್ಬುಕ್ ನಿಂದ ಅನಿಯಂತ್ರಿತ ಕತ್ತರಿ ಪ್ರಯೋಗ: ತೇಜಸ್ವಿ ಸೂರ್ಯ ಆರೋಪ
ಬಳಕೆದಾರರು ಪೋಸ್ಟ್ ಮಾಡಿದ ರಾಷ್ಟ್ರೀಯತಾವಾದಿ ವಿಷಯಗಳನ್ನು ಟ್ವೀಟರ್, ಫೇಸ್ ಬುಕ್ ಅನಿಯಂತ್ರಿತವಾಗಿ ಕತ್ತರಿ ಪ್ರಯೋಗ ಮಾಡುತ್ತಿವೆ ಎಂದು ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ಆರೋಪಿಸಿದ್ದು, ಇದನ್ನು ತಡೆಗಟ್ಟುವ ನಿಟ್ಟಿನಲ್ಲಿ ಸರ್ಕಾರದ ಮಧ್ಯಪ್ರವೇಶ ಬಯಸಿದ್ದಾರೆ.

ನನ್ನ ಬಾಯಿ ಮುಚ್ಚಿಸುವ ಯತ್ನದಲ್ಲಿ ಇಷ್ಟೊಂದು ಸಮಯ ವ್ಯಯಿಸಿದಿರಾ: ನಿಮ್ಮ ಆರೋಪ ನಿರಾಧಾರ; ಅನುರಾಗ್ ಕಶ್ಯಪ್
ನಿರ್ದೇಶಕ ಮತ್ತು ಬರಹಗಾರ ಅನುರಾಗ್ ಕಶ್ಯಪ್ ಮೇಲೆ ನಟಿ ಪಾಯಲ್ ಘೋಷ್ ಮಾಡಿರುವ ಲೈಂಗಿಕ ಕಿರುಕುಳ ಆರೋಪಕ್ಕೆ ಇದೀಗ ಅನುರಾಗ್ ಕಶ್ಯಪ್ ಸರಣಿ ಟ್ವೀಟ್ ಮೂಲಕ ತಿರುಗೇಟು ನೀಡಿದ್ದಾರೆ

ಪ್ರಧಾನಿ ಮೋದಿ ಸರ್ಕಾರಿ ಕಂಪನಿಗಳ ಮಾರಾಟದ ಅಭಿಯಾನ ನಡೆಸುತ್ತಿದ್ದಾರೆ; ರಾಹುಲ್ ಗಾಂಧಿ
ಜೀವ ವಿಮಾ ಕಾರ್ಪೊರೇಷನ್ (ಎಲ್ಐಸಿ) ಶೇ.25ರಷ್ಟು ಷೇರನ್ನು ಮಾರಾಟ ಮಾಡುವ ಕೇಂದ್ರ ಸರ್ಕಾರದ ನಿರ್ಧಾರದ ವಿರುದ್ಧ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಟ್ವೀಟರ್ನಲ್ಲಿ ಬಾಲಕಿಗೆ 'ಬೆದರಿಕೆ, ಚಿತ್ರಹಿಂಸೆ': ಫ್ಯಾಕ್ಟ್ ಚೇಕಿಂಗ್ ವೆಬ್ಸೈಟ್ ಸಹ ಸಂಸ್ಥಾಪಕ ವಿರುದ್ಧ ಎಫ್ಐಆರ್!
ಟ್ವೀಟರ್ ಮೂಲಕ ಬಾಲಕಿಗೆ ಬೆದರಿಕೆ ಮತ್ತು ಹಿಂಸೆ ನೀಡಿದ್ದಕ್ಕಾಗಿ ಆಲ್ಟ್ ನ್ಯೂಸ್ ಸಹ ಸಂಸ್ಥಾಪಕ ಮೊಹಮ್ಮದ್ ಜುಬೈರ್ ವಿರುದ್ಧ ದೆಹಲಿ ಪೊಲೀಸ್ ಸೈಬರ್ ಸೆಲ್ ಎಫ್ಐಆರ್ ದಾಖಲಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಧಾನಮಂತ್ರಿ ನರೇಂದ್ರ ಮೋದಿ ವಯಕ್ತಿಕ ವೆಬ್ ಸೈಟ್ ನ ಟ್ಟಿಟ್ಟರ್ ಖಾತೆ ಹ್ಯಾಕ್
ಪ್ರಧಾನಿ ನರೇಂದ್ರ ಮೋದಿ ಅವರ ವೈಯಕ್ತಿಕ ವೆಬ್ಸೈಟ್ಗೆ ಲಿಂಕ್ ಆಗಿರುವ ಟ್ವಿಟರ್ ಖಾತೆ ಹ್ಯಾಕ್ ಆಗಿರುವುದನ್ನು ಗುರುವಾರ ಟ್ವಿಟರ್ ಖಚಿತ ಪಡಿಸಿದೆ.

