Tumakuru

ತುಮಕೂರು: ಕೂಲಿ ಕೇಳಲು ಹೋಗಿದ್ದ ದಲಿತ ವ್ಯಕ್ತಿ ವಿರುದ್ಧ ಬಾಳೆಗೊನೆ ಕದ್ದ ಆರೋಪ; ಥಳಿತಕ್ಕೊಳಗಾಗಿದ್ದ ವ್ಯಕ್ತಿ ಸಾವು
ತಮ್ಮ ಜಮೀನಿನಲ್ಲಿದ್ದ ಬಾಳೆಗೊನೆಯನ್ನು ಕದ್ದ ಆರೋಪದ ಮೇಲೆ ಮಾಲೀಕರಿಂದ ಥಳಿತಕ್ಕೊಳಗಾಗಿದ್ದ ದಲಿತ ವ್ಯಕ್ತಿಯೊಬ್ಬರು ಆಸ್ಪತ್ರೆಯಲ್ಲಿ ಮೃತಪಟ್ಟಿರುವ ಘಟನೆ ಮಧುಗಿರಿ ತಾಲೂಕಿನ ಇಟಕ ದಿಬ್ಬನಹಳ್ಳಿ ಗ್ರಾಮದಲ್ಲಿ ನಡೆದಿದೆ.

ಚಿತ್ತ ಮಳೆಗೆ ಹಲವು ಜಿಲ್ಲೆ ತತ್ತರ: ತುಮಕೂರಿನಲ್ಲಿ ಮನೆ ಕುಸಿತ, ಕೊಚ್ಚಿ ಹೋದ ಕಾರು; ಬೆಂಗಳೂರಿನಲ್ಲಿ ಇನ್ನೆರಡು ದಿನ ಮಳೆ ಸಾಧ್ಯತೆ
ರಾಜ್ಯದಲ್ಲಿ ವರುಣ ಮತ್ತೆ ಆರ್ಭಟಿಸುತ್ತಿದ್ದಾನೆ. ರಾಜ್ಯದ ಅನೇಕ ಕಡೆ ಪ್ರತಿ ದಿನ ಮಳೆಯಾಗುತ್ತಿದ್ದು ಅನೇಕ ಅವಾಂತರಗಳು ಸಹ ಸಂಭವಿಸಿವೆ. ಕಳೆದ ರಾತ್ರಿ ಬೆಂಗಳೂರಿನಲ್ಲಿ ನಿರಂತರ ಮಳೆಯಾಗಿದ್ದು ರಸ್ತೆಗಳು ಕೆರೆಯಂತಾಗಿವೆ.

ತುಮಕೂರು: ಈದ್-ಮಿಲಾದ್ ವೇಳೆ ಮುಸ್ಲಿಮರ ಧಾರ್ಮಿಕ ಧ್ವಜ ಸುಟ್ಟ ಪ್ರಕರಣ; ಇಬ್ಬರ ಬಂಧನ
ಈದ್ ಮಿಲಾದ್ ಹಬ್ಬದ ದಿನ ಶಿರಾದಲ್ಲಿ ಮುಸ್ಲಿಮರ ಧಾರ್ಮಿಕ ಹಸಿರು ಧ್ವಜವನ್ನು ಸುಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಇಬ್ಬರು ಆರೋಪಿಗಳನ್ನು ಗುರುವಾರ ಬಂಧಿಸಿದ್ದಾರೆ.

ತುಮಕೂರು: ಪ್ರತ್ಯೇಕ ಸ್ಮಶಾನವಿಲ್ಲ, ರಸ್ತೆ ಬದಿಯಲ್ಲೇ ದಲಿತ ಮಹಿಳೆ ಅಂತ್ಯಸಂಸ್ಕಾರ!
ಪ್ರತ್ಯೇಕ ಸ್ಮಶಾನವಿಲ್ಲದೇ ದಲಿತ ಮಹಿಳೆ ಅಂತ್ಯಸಂಸ್ಕಾರ ರಸ್ತೆ ಬದಿಯಲ್ಲೇ ಮಾಡಿರುವ ಧಾರುಣ ಘಟನೆ ತುಮಕೂರಿನಲ್ಲಿ ನಡೆದಿದೆ.

ತುಮಕೂರು: ಕಳಪೆ ಕಾಮಗಾರಿಗೆ ಸಚಿವ ಜೆ.ಸಿ. ಮಾಧುಸ್ವಾಮಿ ವಿರುದ್ಧ ಬಿಜೆಪಿ ಮುಖಂಡ ವಾಗ್ದಾಳಿ
ತುಮಕೂರಿನಲ್ಲಿ ಬಿಜೆಪಿಯೊಳಗೆ ಗುಸುಗುಸು ಶುರುವಾಗಿದೆ. ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ. ಮಾಧುಸ್ವಾಮಿ ಪ್ರತಿನಿಧಿಸುವ ಚಿಕ್ಕನಾಯಕನಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ನಡೆದಿರುವ ಕಾಮಗಾರಿಗಳು ಗುಣಮಟ್ಟದಿಂದ ಕೂಡಿಲ್ಲ ಎಂದು ಬಿಜೆಪಿ ಮುಖಂಡ ವಾಗ್ದಾಳಿ ನಡೆಸಿದ್ದಾರೆ.

'ಲಯನ್' ಖ್ಯಾತಿಯ ಹಿರಿಯ ವಕೀಲ ಶೇಷಾದ್ರಿ ನಿಧನ
ಹಿರಿಯ ವಕೀಲ ಹಾಗೂ ತುಮಕೂರಿನ ವಿದ್ಯೋದಯ ಕಾನೂನು ಶಿಕ್ಷಣ ಸಂಸ್ಥೆಯ ಟ್ರಸ್ಟಿ ಪ್ರೊ ಎಚ್.ಎಸ್.ಶೇಷಾದ್ರಿ (98 ವರ್ಷ) (HS Sheshadri) ನಿಧನರಾಗಿದ್ದಾರೆ.

ತುಮಕೂರು: ಮೂರು ವರ್ಷದ ಬಾಲಕನ ಮರ್ಮಾಂಗ ಸುಟ್ಟ ಅಂಗನವಾಡಿ ಶಿಕ್ಷಕಿ!
ವಿಲಕ್ಷಣಕಾರಿ ಘಟನೆಯೊಂದರಲ್ಲಿ ಆಗಾಗ್ಗೆ ಪ್ಯಾಂಟ್ ಒದೆ ಮಾಡಿಕೊಳ್ಳುತ್ತಿದ್ದ ಮೂರು ವರ್ಷದ ಬಾಲಕನ ಮರ್ಮಾಂಗವನ್ನು ಅಂಗನವಾಡಿ ಶಿಕ್ಷಕಿಯೊಬ್ಬರು ಸುಟ್ಟಿರುವ ಘಟನೆ ನಡೆದಿದೆ.

ತುಮಕೂರು: ಚಲಿಸುತ್ತಿದ್ದ ಲಾರಿಗೆ ಹಿಂಬದಿಯಿಂದ ಕಾರು ಡಿಕ್ಕಿ, ಇಬ್ಬರು ಮಕ್ಕಳು ಸೇರಿದಂತೆ ಮೂವರ ದಾರುಣ ಸಾವು
ಚಲಿಸುತ್ತಿದ್ದ ಲಾರಿಗೆ ಹಿಂಬದಿಯಿಂದ ಕಾರು ಡಿಕ್ಕಿಯಾಗಿ ಮೂವರು ಮೃತಪಟ್ಟ ಘಟನೆ ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ತರೂರು ಗೇಟ್ ಬಳಿ ರಾಷ್ಟ್ರೀಯ ಹೆದ್ದಾರಿ 48ರಲ್ಲಿ ನಡೆದಿದೆ.

ದುಬೈ ನಿಂದ ವಾಪಸ್ಸಾಗಲು ನಿರಾಕರಿಸಿದ ಪತ್ನಿ; ಮಕ್ಕಳಿಗೂ ವಿಷ ಉಣಿಸಿ ವ್ಯಕ್ತಿ ತಾನೂ ಆತ್ಮಹತ್ಯೆಗೆ ಶರಣು!
ದುಬೈ ನಿಂದ ಭಾರತಕ್ಕೆ ವಾಪಸ್ಸಾಗಲು ಪತ್ನಿ ಒಪ್ಪದ ಹಿನ್ನೆಲೆಯಲ್ಲಿ ಬೇಸರಗೊಂಡ ವ್ಯಕ್ತಿಯೋರ್ವ ತನ್ನ 3 ಮಕ್ಕಳಿಗೆ ವಿಷ ಉಣಿಸಿ ತಾನೂ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತುಮಕೂರಿನ ಪೂರ್ ಹೌಸ್ ಕಾಲೋನಿಯಲ್ಲಿ ನಡೆದಿದೆ.

