TTD

ತಿರುಮಲ ಶ್ರೀವಾರಿ ದೇವಾಲಯದಲ್ಲಿ ಟಿಟಿಡಿಯಿಂದ ಸಂಪ್ರದಾಯಗಳ ಉಲ್ಲಂಘನೆ- ಕಾಂಗ್ರೆಸ್ ಆರೋಪ
ತಿರುಮಲ ಶ್ರೀವಾರಿ ದೇವಸ್ಥಾನದಲ್ಲಿ ವೈಕುಂಠ ದ್ವಾರಕಾ ದರ್ಶನವನ್ನು ಹತ್ತು ದಿನಗಳವರೆಗೆ ನೀಡುವ ನಿರ್ಧಾರವನ್ನು ತಿರುಪತಿ ಕಾಂಗ್ರೆಸ್ ಮುಖಂಡ ನವೀನ್ ಕುಮಾರ್ ರೆಡ್ಡಿ ತೀವ್ರವಾಗಿ ವಿರೋಧಿಸಿದ್ದಾರೆ. ತಿರುಮಲ ದೇಗುಲದ ಸಂಪ್ರದಾಯಗಳನ್ನು ಟಿಟಿಡಿ ಮಂಡಳಿ ಅಧಿಕಾರಿಗಳು ಮುರಿಯುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

10 ವರ್ಷಕ್ಕಿಂತ ಕಡಿಮೆ, 65 ವರ್ಷಕ್ಕಿಂತ ಮೇಲ್ಪಟ್ಟವರಿಗೆ ದರ್ಶನಕ್ಕೆ ಅವಕಾಶ ಇಲ್ಲ; ಸುಳ್ಳು ಸುದ್ದಿಗಳಿಗೆ ಕಿವಿಗೊಡದಂತೆ ಭಕ್ತರಿಗೆ ಟಿಟಿಡಿ ಮನವಿ
ತಿರುಮಲ ತಿರುಪತಿ ದೇಗುಲ ದರ್ಶನ ವಿಚಾರಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ವದಂತಿಗಳ ಕುರಿತಂತೆ ಟಿಟಿಡಿ ಆಡಳಿತ ಮಂಡಳಿ ಮಹತ್ವದ ಸ್ಪಷ್ಟನೆ ನೀಡಿದೆ.

ಲಾಕ್ಡೌನ್ ತೆರವು: ಒಂದೇ ದಿನ ತಿರುಮಲ ತಿರುಪತಿಗೆ ಹರಿದು ಬಂತು ರೂ.1 ಕೋಟಿ ಆದಾಯ!
ಲಾಕ್'ಡೌನ್ ತೆರವುಗೊಂಡು ದೇಗುಲದ ಬಾಗಿಲು ತೆರೆದ ಒಂದೇ ದಿನದಲ್ಲಿ ತಿರುಮಲ ತಿರುಪತಿಯ ಹುಂಡಿಗೆ ರೂ.1 ಕೋಟಿ ಆದಾಯ ಬಂದಿದೆ ಎಂದು ತಿಳಿದುಬಂದಿದೆ.

ಕನ್ನಡ ಭಾಷೆಯಲ್ಲೂ ಶ್ರೀ ವೆಂಕಟೇಶ್ವರ ಭಕ್ತಿ ಚಾನೆಲ್: ಟಿಟಿಡಿ ಅಧ್ಯಕ್ಷ ಸುಬ್ಬಾರೆಡ್ಡಿ
ಶೀಘ್ರದಲ್ಲಿಯೇ ಶ್ರೀ ವೆಂಕಟೇಶ್ವರ ಭಕ್ತಿ ಚಾನೆಲ್ (ಎಸ್ ವಿಬಿಸಿ)ಯನ್ನು ಹಿಂದಿ, ಕನ್ನಡ ಭಾಷೆಗಳಲ್ಲೂ ಪ್ರಾರಂಭಿಸಲಾಗುವುದು ಎಂದು ತಿರುಮಲ ತಿರುಪತಿ ದೇವಸ್ಥಾನ(ಟಿಟಿಡಿ) ಅಧ್ಯಕ್ಷ ವೈ.ವಿ.ಸುಬ್ಬಾರೆಡ್ಡಿ ಪ್ರಕಟಿಸಿದ್ದಾರೆ.

ಲಡ್ಡು ತಯಾರಿಕಾ ಸಿಬ್ಬಂದಿಗಳೂ ಸೇರಿ ತಿರುಮಲ ದೇಗುಲದ 140 ಸಿಬ್ಬಂದಿಗೆ ಕೊರೋನಾ ಸೋಂಕು:ಟಿಟಿಡಿ ಅಧ್ಯಕ್ಷ ಸುಬ್ಬಾರೆಡ್ಡಿ
ತಿರುಮಲ ತಿರುಪತಿ ದೇವಸ್ಥಾನಂ (ಟಿಟಿಡಿ) ಯಲ್ಲಿ ಈವರೆಗೆ 140 ಕೋವಿಡ್ -19 ಪ್ರಕರಣಗಳು ವರದಿಯಾಗಿದ್ದು, ಇವುಗಳಲ್ಲಿ ಬಹುತೇಕ ಪ್ರಕರಣಗಳು ಕಾರ್ಮಿಕರು ಮತ್ತು ಎಪಿಎಸ್‌ಪಿ ಭದ್ರತಾ ಸಿಬ್ಬಂದಿಯಲ್ಲಿ ಕಂಡು ಬಂದಿವೆ ಎಂದು ಟಿಟಿಡಿ ಅಧ್ಯಕ್ಷ ವೈ ವಿ ಸುಬ್ಬಾ ರೆಡ್ಡಿ ಗುರುವಾರ ಇಲ್ಲಿ ತಿಳಿಸಿದ್ದಾರೆ.

ಟಿಟಿಡಿ ಸಿಬ್ಬಂದಿಯಲ್ಲಿ ಕೊರೋನಾ ಪಾಸಿಟಿವ್: ತಿರುಪತಿ ಶ್ರೀ ಗೋವಿಂದರಾಜ ಸ್ವಾಮಿ ದೇಗುಲ ಬಂದ್
ಟಿಟಿಡಿ ಸಿಬ್ಬಂದಿಯೊಬ್ಬರಲ್ಲಿ ಕೊರೋನಾ ವೈರಸ್ ದೃಢಪಟ್ಟ ಹಿನ್ನೆಲೆಯಲ್ಲಿ ತಿರುಪತಿ ಶ್ರೀ ಗೋವಿಂದರಾಜ ಸ್ವಾಮಿ ದೇವಾಲಯವನ್ನು ಬಂದ್ ಮಾಡಲಾಗಿದೆ ಎಂದು ಶುಕ್ರವಾರ ತಿಳಿದುಬಂದಿದೆ.

ತಿರುಪತಿ ತಿಮ್ಮಪ್ಪನ ಸ್ಥಿರಾಸ್ತಿ ವಿಕ್ರಯಗೊಳಿಸುವ ಟಿಟಿಡಿ ಪ್ರಸ್ತಾವನೆಗೆ ಬಿಜೆಪಿ ಖಂಡನೆ
ದೇಶದ ವಿವಿಧ ಪ್ರದೇಶಗಳಲ್ಲಿರುವ ತನ್ನ ಸ್ಥಿರಾಸ್ತಿಗಳನ್ನು ಹರಾಜು ಮೂಲಕ ಮಾರಾಟ ಮಾಡುವ ತಿರುಪತಿ-ತಿರುಮಲ ದೇವಸ್ಥಾನ ಮಂಡಳಿ(ಟಿಟಿಡಿ) ಪ್ರಸ್ತಾವನೆಯನ್ನು ತೆಲಂಗಾಣ ಬಿಜೆಪಿ ಭಾನುವಾರ ತೀವ್ರವಾಗಿ ಖಂಡಿಸಿದೆ.

ಕೊರೋನಾ ವೈರಸ್: ತಬ್ಲೀಘಿಗಳೂ ಸೇರಿದಂತೆ ವೈರಸ್ ಶಂಕಿತ ಸೋಂಕಿತರಿಗೆ ಚಿಕಿತ್ಸೆ ನೀಡಲು ಛತ್ರಗಳನ್ನು ಬಳಸಿ: ಟಿಟಿಡಿ
ಆಂಧ್ರ ಪ್ರದೇಶ ಮತ್ತು ತೆಲಂಗಾಣದಲ್ಲಿ ಮಾರಕ ಕೊರೋನಾ ವೈರಸ್ ಹಾವಳಿ ಹೆಚ್ಚಾಗಿರುವಂತೆಯೇ ಇತ್ತ ತಿರುಪತಿ ತಿರುಮಲ ದೇವಸ್ಥಾನ (ಟಿಟಿಡಿ) ತನ್ನ ಟಿಟಿಡಿ ಛತ್ರಗಳನ್ನೇ ಕ್ವಾರಂಟೈನ್ ಕೇಂದ್ರಗಳಾಗಿ ಬಳಸಿಕೊಳ್ಳುವಂತೆ ಸರ್ಕಾರಕ್ಕೆ ಹೇಳಿದೆ.

ತಿರುಮಲದಲ್ಲಿ ಶಂಕಿತ ಸೋಂಕಿತನ ಪ್ರವೇಶ: ತಿಮ್ಮಪ್ಪನ ದೇಗುಲ ಸ್ವಚ್ಛತಾ ಕಾರ್ಯಕ್ಕೆ ಮುಸ್ಲಿಂ ಭಕ್ತನ ಸಾಥ್, ಸ್ಪ್ರೇಯರ್ ಕೊಡುಗೆ!
ಖ್ಯಾತ ಧಾರ್ಮಿಕ ಯಾತ್ರಾ ತಾಣ ತಿರುಪತಿ ತಿರುಮಲ ದೇಗುಲಕ್ಕೆ ಕೊರೋನಾ ವೈರಸ್ ಸೋಂಕಿತ ಶಂಕಿತ ವ್ಯಕ್ತಿ ಪ್ರವೇಶ ಮಾಡಿರುವ ಬೆನ್ನಲ್ಲೇ ದೇಗುಲ ಆಡಳಿತ ಮಂಡಳಿ ಟಿಟಿಡಿ, ದೇಗುಲದ ಸ್ವಚ್ಛತಾ ಕಾರ್ಯ ಆರಂಭಿಸಿದ್ದು, ಈ ಕಾರ್ಯಕ್ಕೆ ಮುಸ್ಲಿಂ ಭಕ್ತರೊಬ್ಬರು ಸಾಥ್ ನೀಡಿದ್ದಾರೆ.

