Tripura

ತ್ರಿಪುರಾ: ಅಂತಾರಾಷ್ಟ್ರೀಯ ಗಡಿಯಲ್ಲಿ ದಾಳಿ; ಗುಂಡಿಕ್ಕಿ ಬಾಂಗ್ಲಾದೇಶಿ ಸ್ಮಗ್ಲರ್ ಹತ್ಯೆಗೈದ BSF!
ದಾಳಿ ವೇಳೆ BSF ಸಿಬ್ಬಂದಿಯೊಬ್ಬರು ಗಾಯಗೊಂಡಿದ್ದಾರೆ.

2024 ರಲ್ಲಿ ತ್ರಿಪುರಾದಲ್ಲಿ 55 ರೋಹಿಂಗ್ಯಾಗಳು ಸೇರಿ 675 ಅಕ್ರಮ ವಲಸಿಗರ ಬಂಧನ: ಬಿಎಸ್ಎಫ್
ಈ ವರ್ಷದ ಜನವರಿ 1 ರಿಂದ ನವೆಂಬರ್ 30 ರವರೆಗಿನ ವಿವಿಧ ಕಾರ್ಯಾಚರಣೆಗಳಲ್ಲಿ 55 ರೋಹಿಂಗ್ಯಾ ಅಕ್ರಮ ವಲಸಿಗರು, 620 ಬಾಂಗ್ಲಾದೇಶಿ ಪ್ರಜೆಗಳು ಮತ್ತು 260 ಭಾರತೀಯರನ್ನು ಬಿಎಸ್‌ಎಫ್ ಬಂಧಿಸಿದೆ.

ತ್ರಿಪುರಾ: ಶಸ್ತ್ರಾಸ್ತ್ರ ತ್ಯಜಿಸಿ ಶರಣಾಗತಿಗೆ 400 ಉಗ್ರರು ಸಜ್ಜು!
ಈ ಉಗ್ರಗಾಮಿಗಳು ನಿಷೇಧಿತ ಉಗ್ರಗಾಮಿ ಸಂಘಟನೆಗಳಾದ ನ್ಯಾಷನಲ್ ಲಿಬರೇಶನ್ ಫ್ರಂಟ್ ಆಫ್ ತ್ರಿಪುರ (ಎನ್‌ಎಲ್‌ಎಫ್‌ಟಿ) ಮತ್ತು ಆಲ್ ತ್ರಿಪುರಾ ಟೈಗರ್ ಫೋರ್ಸ್ (ಎಟಿಟಿಎಫ್) ಗೆ ಸೇರಿದವರಾಗಿದ್ದಾರೆ.

ಎರಡು ಬಂಡುಕೋರ ಗುಂಪುಗಳೊಂದಿಗೆ ಶಾಂತಿ ಒಪ್ಪಂದಕ್ಕೆ ಕೇಂದ್ರ, ತ್ರಿಪುರಾ ಸರ್ಕಾರ ಸಹಿ
ಹಿಂಸಾಚಾರವನ್ನು ಕೊನೆಗೊಳಿಸಿ ಈಶಾನ್ಯ ರಾಜ್ಯದಲ್ಲಿ ಶಾಂತಿ ನೆಲೆಸುವ ಉದ್ದೇಶದಿಂದ ನಾರ್ತ್ ಬ್ಲಾಕ್‌ನಲ್ಲಿ ಕೇಂದ್ರ ಮತ್ತು ತ್ರಿಪುರಾ ಸರ್ಕಾರ ರಾಜ್ಯದ ಎರಡು ಬಂಡುಕೋರ ಗುಂಪುಗಳ ನಡುವೆ ಶಾಂತಿ ಒಪ್ಪಂದಕ್ಕೆ ಸಹಿ.

ತ್ರಿಪುರಾ: ಬಾಂಗ್ಲಾದೇಶದ ಏಳು ನುಸುಳುಕೋರರ ಬಂಧನ
ಖಚಿತ ಮಾಹಿತಿ ಆಧಾರದ ಮೇಲೆ ಸರ್ಕಾರಿ ರೈಲ್ವೆ ಪೊಲೀಸ್ ಸಿಬ್ಬಂದಿ ಶುಕ್ರವಾರ ಅಗರ್ತಲಾ ನಿಲ್ದಾಣದಿಂದ ಇಬ್ಬರನ್ನು ಬಂಧಿಸಿದ್ದಾರೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ದೇವಸ್ಥಾನದ ವಿಗ್ರಹ ವಿರೂಪ: ತ್ರಿಪುರಾದಲ್ಲಿ 12 ಮನೆ, ವಾಹನಗಳಿಗೆ ಕಿಡಿಗೇಡಿಗಳಿಂದ ಬೆಂಕಿ
ಜಿರಾನಿಯಾ ಉಪವಿಭಾಗದಲ್ಲಿ ಈ ಘಟನೆ ನಡೆದಿದ್ದು, ಸ್ಥಳದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ ಹೀಗಾಗಿ ಈ ಪ್ರದೇಶದಲ್ಲಿ ನಿಷೇಧಾಜ್ಞೆ ವಿಧಿಸಲಾಗಿದೆ.

ಬಾಂಗ್ಲಾದೇಶ ಬಿಕ್ಕಟ್ಟು: ಈಶಾನ್ಯದ 4 ರಾಜ್ಯಗಳ ಗಡಿಭಾಗದಲ್ಲಿ ಭದ್ರತೆ ಹೆಚ್ಚಳ; ಬಿಹಾರದಲ್ಲಿಯೂ ಕಟ್ಟೆಚ್ಚರ
ಬಾಂಗ್ಲಾದೇಶದಲ್ಲಿ ಹಿಂದೂಗಳ ಮನೆಗಳ ಮೇಲೆ ನಡೆದ ದಾಳಿಗಳ ಬಗ್ಗೆ ವರದಿಯಾದ ಘಟನೆಗಳ ಬಗ್ಗೆ ಕೇಳಲಾದ ಪ್ರಶ್ನೆಗೆ, ಅಲ್ಲಿನ ಬಹುಸಂಖ್ಯಾತ ಸಮುದಾಯದ ಜನರು ಈ ಘಟನೆಗಳನ್ನು ತಡೆದು ರಕ್ಷಣೆ ನೀಡುತ್ತಿದ್ದಾರೆ ಎಂದು ಸೋಷಿಯಲ್ ಮೀಡಿಯಾ ಮೂಲಕ ತಿಳಿಯುತ್ತಿದ್ದೇನೆ ಎಂದರು.

ತ್ರಿಪುರಾದಲ್ಲಿ ಬುಡಕಟ್ಟು ಯುವಕನ ಸಾವಿನಿಂದ ಪರಿಸ್ಥಿತಿ ಉದ್ವಿಗ್ನ: ಕರ್ಫ್ಯೂ ಜಾರಿ, ಇಂಟರ್ನೆಟ್ ಸ್ಥಗಿತ!
ತ್ರಿಪುರಾದ ಗಂಡಚೆರಾ ಪ್ರದೇಶದಲ್ಲಿ ನಿನ್ನೆ ರಾತ್ರಿ ಬುಡಕಟ್ಟು ಯುವಕನೋರ್ವ ಸಾವನ್ನಪ್ಪಿದ್ದ ನಂತರ ಎರಡು ಗುಂಪುಗಳ ನಡುವೆ ಘರ್ಷಣೆ ನಡೆದಿದ್ದು ಇದಾದ ನಂತರ ಮತ್ತೊಂದು ಗುಂಪು ಅಂಗಡಿಗಳನ್ನು ಧ್ವಂಸ ಮಾಡಿ ಬೆಂಕಿ ಹಚ್ಚಿದೆ.

ತ್ರಿಪುರಾದಲ್ಲಿ ಆಘಾತಕಾರಿ ಘಟನೆ; ಹಣ ಕದಿಯುತ್ತಿದ್ದ ಮಗನ ಕತ್ತು ಹಿಸುಕಿ ಸಾಯಿಸಿದ ತಾಯಿ
ತ್ರಿಪುರಾದಲ್ಲಿ ಮಹಿಳೆಯೊಬ್ಬರು ತನ್ನ ಒಂಬತ್ತು ವರ್ಷದ ಮಗನ ದುರ್ವರ್ತನೆಯಿಂದ ಹತಾಶೆಗೊಂಡು ಆತನನ್ನು ನಿಭಾಯಿಸಲು ಸಾಧ್ಯವಾಗದೆ ಕತ್ತು ಹಿಸುಕಿ ಕೊಂದಿರುವ ಆಘಾತಕಾರಿ ಘಟನೆ ನಡೆದಿದೆ ಎಂದು ಪೊಲೀಸರಿಗೆ ತಿಳಿಸಿದ್ದಾರೆ. ಸೋಮವಾರ ಸಂಜೆ ಅಗರ್ತಲಾದ ಜೋಯ್‌ನಗರದಲ್ಲಿ ಈ ದುರಂತ ಬೆಳಕಿಗೆ ಬಂದಿದೆ.

