tribals

ಆದಿವಾಸಿಗಳ ಉನ್ನತಿಗಾಗಿ 24 ಸಾವಿರ ಕೋಟಿ ರೂ.ಗಳ ಯೋಜನೆಗೆ ನ.15ರಂದು ಪ್ರಧಾನಿ ಮೋದಿ ಚಾಲನೆ
ಆದಿವಾಸಿಗಳ ಉನ್ನತಿಗಾಗಿ 24,000 ಕೋಟಿ ರೂ.ಗಳ ಯೋಜನೆಗೆ ಪ್ರಧಾನಿ ನರೇಂದ್ರ ಮೋದಿ ಅವರು ನವೆಂಬರ್ 15ರಂದು ಚಾಲನೆ ನೀಡಲಿದ್ದಾರೆ.

ಕಾಡಿನ ಮೇಲೆ ಅತ್ಯಂತ ಪ್ರೀತಿ, ಕಾಳಜಿ: ಜಾರ್ಖಂಡ್ ರಾಜ್ಯದ ಈ ಗ್ರಾಮಸ್ಥರಿಗೆ ರಸ್ತೆಯೇ ಬೇಡವಂತೆ!
ಕಾಡಿನ ಮೇಲಿನ ಒಂದು ರೀತಿಯ ಪ್ರೀತಿಯಲ್ಲಿ, ರಸ್ತೆಯ ಕೊರತೆಯಿದ್ದರೂ ಯಾವುದೇ ವಾಹನ ತಲುಪಲು ಸಾಧ್ಯವಿಲ್ಲದಿದ್ದರೂ ಕೂಡ ಹೊರ ಪ್ರಪಂಚದಿಂದ ಬಹುತೇಕ ಪ್ರತ್ಯೇಕವಾಗಿರುವ ಜಾರ್ಖಂಡ್ ರಾಜ್ಯದ ಸಿಮ್ಡೆಗಾದ ಚಿಮ್ಟಿಘಾಟಿ ಗ್ರಾಮದ ಆದಿವಾಸಿಗಳು ಎರಡು ಬಾರಿ ರಸ್ತೆ ನಿರ್ಮಿಸುತ್ತೇವೆ ಎಂದು ಪ್ರಸ್ತಾಪ ಬಂದರೂ ನಿರಾಕರಿಸಿದ್ದಾರೆ.

ಆದಿವಾಸಿಗಳು, ಅಲ್ಪಸಂಖ್ಯಾತರ ರಕ್ಷಣೆಗೆ ಬದ್ಧ: ಸಿಎಂ ಸಿದ್ದರಾಮಯ್ಯ
ರಾಜ್ಯದಲ್ಲಿ ಅಲ್ಪಸಂಖ್ಯಾತರು, ಆದಿವಾಸಿ, ಬುಡಕಟ್ಟು ಸಮುದಾಯಗಳ ಹಕ್ಕುಗಳ ರಕ್ಷಣೆಗೆ ಸರ್ಕಾರ ಬದ್ಧವಾಗಿದ್ದು, ಈ ವಿಷಯದಲ್ಲಿ ಯಾವುದೇ ಕಾರಣಕ್ಕೂ ರಾಜೀ ಮಾಡಿಕೊಳ್ಳುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬುಧವಾರ ಹೇಳಿದರು.

ಮಲೆ ಮಹದೇಶ್ವರ ಬೆಟ್ಟ: ಸರಿಯಾದ ರಸ್ತೆಗಳಿಲ್ಲದ ಕಾರಣ 'ಆದಿವಾಸಿ'ಗಳಿಗೆ ಅನ್ನಭಾಗ್ಯವೂ ಇಲ್ಲ!
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮಹತ್ವಾಕಾಂಕ್ಷೆಯ ಅನ್ನಭಾಗ್ಯ ಯೋಜನೆಯ ಪ್ರಯೋಜನಗಳು ನಾಗಮಲೆ ಮತ್ತು ಮಲೆ ಮಹದೇಶ್ವರ ಬೆಟ್ಟದ ಸಮೀಪದ ಗ್ರಾಮಗಳಲ್ಲಿ ವಾಸಿಸುವ ಆದಿವಾಸಿ ಕುಟುಂಬಗಳಿಗೆ ತಲುಪುವುದು ದುಸ್ತರವಾಗಿದೆ.

ನೈಜ ದುರ್ಬಲ ಬುಡಕಟ್ಟು ಸಮುದಾಯವನ್ನು ಮುಖ್ಯವಾಹಿನಿಗೆ ತರಲು ರಾಷ್ಟ್ರಪತಿ ದ್ರೌಪದಿ ಮುರ್ಮು ಕರೆ
ನೈಜ ದುರ್ಬಲ ಬುಡಕಟ್ಟು ಜನರ ಸರ್ವಾಂಗೀಣ ವಿಕಾಸಕ್ಕಾಗಿ ವಸತಿ, ಶಿಕ್ಷಣ, ಆರ್ಥಿಕ ಚಟುವಟಿಕೆಗಳು, ಆರೋಗ್ಯ ಸೌಕರ್ಯಗಳ ಕನಿಷ್ಠ ಮೂಲಸೌಕರ್ಯಗಳನ್ನು ಕಲ್ಪಿಸಿ, ಸುಧಾರಣೆಯ ದಾರಿ ತೋರಿಸಿದರೆ ಸಾಕು ಅವರು ಮುನ್ನಡೆಯಬಲ್ಲರು.

ಒಡಿಶಾ ರೈಲು ದುರಂತ: ಎಲ್ಲರಿಗಿಂತ ಮೊದಲು ಸ್ಪಂದಿಸಿ 200 ಜನರ ಪ್ರಾಣ ಉಳಿಸಿದ ಆದಿವಾಸಿಗಳು!
ಫೂಲಮಣಿ ಹೆಂಬ್ರುಮ್ ತನ್ನ ಮನೆಯ ಅಂಗಳದಲ್ಲಿ ಅಡುಗೆ ಮಾಡುತ್ತಿದ್ದಾಗ ಕಳೆದ ಶುಕ್ರವಾರ ಸಂಜೆ ಒಂದು ದೊಡ್ಡ ಶಬ್ದ ಕೇಳಿಸಿತು. ತಕ್ಷಣ ಫೂಲಮಣಿ ಮತ್ತು ಅವಳ ಪತಿ ರಘು ಮನೆಯಿಂದ ಸುಮಾರು 200 ಮೀಟರ್ ದೂರದಲ್ಲಿರುವ ರೈಲ್ವೆ ಹಳಿಗಳತ್ತ...

ಈವರೆಗೂ ಯಾರೊಬ್ಬರೂ ನಮ್ಮ ನೆರವಿಗೆ ಬಂದಿಲ್ಲ: ಸುಡಾನ್‌ನಲ್ಲಿ ಸಿಲುಕಿರುವ ಆದಿವಾಸಿಗಳು
ಯುದ್ಧ ಪೀಡಿತ ಸುಡಾನ್‌ನಲ್ಲಿ ಸಿಲುಕಿರುವ ಕನ್ನಡಿಗರು ಮತ್ತು ಹಕ್ಕಿಪಿಕ್ಕಿ ಬುಡಕಟ್ಟು ಜನಾಂಗದವರ ಕುರಿತು ಕೇಂದ್ರ ವಿದೇಶಾಂಗ ಸಚಿವ ಎಸ್ ಜೈಶಂಕರ್ ಮತ್ತು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಡುವಿನ ಮಾತಿನ ಸಮರ ಮುಂದುವರೆದಿದ್ದು...

ತೆಪ್ಪಕಾಡು ಆನೆ ಶಿಬಿರಕ್ಕೆ ಪ್ರಧಾನಿ ಮೋದಿ ಭೇಟಿ: ಆದಿವಾಸಿಗಳಿಗೆ ಮನೆ ಒದಗಿಸುವಂತೆ ಆಸ್ಕರ್ ಪ್ರಶಸ್ತಿ ವಿಜೇತ ಚಿತ್ರದ ಸ್ಟಾರ್ ದಂಪತಿ ಮನವಿ
ತೆಪ್ಪಕಾಡು ಆನೆ ಶಿಬಿರದಲ್ಲಿ ವಾಸಿಸುತ್ತಿರುವ ಎಲ್ಲಾ ಆದಿವಾಸಿಗಳಿಗೆ ಮನೆಗಳನ್ನು ಒದಗಿಸಿ ಮತ್ತು ಈ ಪ್ರದೇಶದ ಬುಡಕಟ್ಟು ಮಕ್ಕಳ ಶಿಕ್ಷಣಕ್ಕೆ ಸಹಾಯ ಮಾಡುವಂತೆ ಆಸ್ಕರ್ ವಿಜೇತ ಸಾಕ್ಷ್ಯಚಿತ್ರ - ದಿ ಎಲಿಫೆಂಟ್ ವಿಸ್ಪರರ್ಸ್‌ನ ತಾರೆ ಬೆಳ್ಳಿ ಅವರು ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ಭಾನುವಾರ ಮನವಿ ಮಾಡಿದರು.

ಅಸೆಂಬ್ಲಿ ಚುನಾವಣೆ: ಆದಿವಾಸಿ ಬುಡಕಟ್ಟು ಸಮುದಾಯದವರಿಗೆ 40 ಜನಾಂಗೀಯ ಮತಗಟ್ಟೆಗಳ ಸ್ಥಾಪನೆ
ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ನಿರ್ದಿಷ್ಟವಾಗಿ ದುರ್ಬಲ ಬುಡಕಟ್ಟು ಸಮುದಾಯದವರಿಗಾಗಿ 40 ಜನಾಂಗೀಯ (ಎಥ್ನಿಕ್ ) ಮತಗಟ್ಟೆಗಳನ್ನು ಸ್ಥಾಪಿಸಲಾಗುವುದು ಎಂದು ಭಾರತೀಯ ಚುನಾವಣಾ ಆಯೋಗ ತಿಳಿಸಿದೆ. ರಾಜ್ಯದಲ್ಲಿ ಮೇ 10 ರಂದು ಒಂದೇ ಹಂತದಲ್ಲಿ ಮತದಾನ ನಡೆಯಲಿದ್ದು, ಮೇ 13 ರಂದು ಮತ ಎಣಿಕೆ ನಡೆಯಲಿದೆ.

