training

1 ಲಕ್ಷ ನಿರುದ್ಯೋಗಿ ಯುವಜನರಿಗೆ NGO ಉನ್ನತಿ ಫೌಂಡೇಶನ್ ತರಬೇತಿ!
ಇತ್ತೀಚಿಗೆ ಬಿಡುಗಡೆಯಾದ 'ಭಾರತ ಉದ್ಯೋಗ ವರದಿ 2024' (India Employment Report 2024)ರಲ್ಲಿ ದೇಶದಲ್ಲಿ ನಿರುದ್ಯೋಗ ದರವು ಆತಂಕಕಾರಿ ವಿಷಯವಾಗಿ ಕಂಡುಬರುತ್ತಿದೆ. ಸುಮಾರು ಶೇಕಡಾ 83ರಷ್ಟು ನಿರುದ್ಯೋಗಿಗಳಲ್ಲಿ ಯುವಕರು ಇದ್ದಾರೆ ಎಂಬುದು ಬಹಿರಂಗವಾಗಿದೆ.

ಆನ್ ಲೈನ್ ನಲ್ಲಿ ಸಿಇಟಿ ಅರ್ಜಿ ಸಲ್ಲಿಕೆ ವೇಳೆ ವಿದ್ಯಾರ್ಥಿಗಳಿಗೆ ಸಮಸ್ಯೆ: ಉಪನ್ಯಾಸಕರಿಗೆ ಒಂದು ದಿನದ ತರಬೇತಿ
ಸಾಮಾನ್ಯ ಪ್ರವೇಶ ಪರೀಕ್ಷೆಗೆ (CET) ಆನ್‌ಲೈನ್ ಅರ್ಜಿಗಳನ್ನು ಭರ್ತಿ ಮಾಡುವಾಗ ವಿದ್ಯಾರ್ಥಿಗಳು ಯಾವುದೇ ದೋಷವಿಲ್ಲದೆ ಸಲ್ಲಿಸುವಂತೆ ನೋಡಿಕೊಳ್ಳಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ನಾಳೆ ಡಿಸೆಂಬರ್ 28 ರಂದು ‘ಸಿಇಟಿ ವಿದ್ಯಾರ್ಥಿ ಮಿತ್ರ’ ತರಬೇತಿ ಕಾರ್ಯಕ್ರಮ ಹಮ್ಮಿಕೊಂಡಿದೆ.

ಸೈಬರ್ ಕ್ರೈಂ ನಿಭಾಯಿಸಲು ಸ್ಥಳೀಯ ಠಾಣೆಗಳ ಪೊಲೀಸರಿಗೆ ತರಬೇತಿ: ನಗರ ಪೊಲೀಸ್ ಆಯುಕ್ತ ಬಿ.ದಯಾನಂದ
ಸೈಬರ್ ಕ್ರೈಂ ಪ್ರಕರಣಗಳು ದಿನೇದಿನೇ ಹೆಚ್ಚುತ್ತಲೇ ಇದ್ದು, ಪೊಲೀಸರು ಮತ್ತು ಸರ್ಕಾರ ಈ ವಿಷಯವಾಗಿ ಸಾಕಷ್ಟು ಜಾಗೃತಿ ಮೂಡಿಸುತ್ತಿದೆ. ಮತ್ತೂ ಒಂದು ಹೆಜ್ಜೆ ಮುಂದೆ ಹೋಗಿ ನಾವು ಕಾಲಮಿತಿಯ ತನಿಖೆಗೆ ಕಟ್ಟುನಿಟ್ಟಿನ ನಿಯಮಗಳನ್ನು ಅನುಷ್ಠಾನಕ್ಕೆ ತರಲಾಗುವುದು ಎಂದು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ಮಂಗಳವಾರ ಹೇಳಿದರು.

ನೂತನ ಶಾಸಕರಿಗೆ ಮೂರು ದಿನಗಳ ಕಾಲ ತರಬೇತಿ ಶಿಬಿರ
ರಾಜ್ಯದ 16ನೇ ವಿಧಾನಸಭೆಗೆ ನೂತನವಾಗಿ ಆಯ್ಕೆಯಾಗಿರುವ ಸದಸ್ಯರುಗಳಿಗೆ (Karnataka Legislative assembly) ಬೆಂಗಳೂರಿನ ನೆಲಮಂಗಲದ ಸಮೀಪ ಇರುವ ಧರ್ಮಸ್ಥಳದ ಕ್ಷೇಮವನದಲ್ಲಿ ಇಂದು ಜೂನ್ 26 ಸೋಮವಾರದಿಂದ 28ರ ವರೆಗೆ ಮೂರು ದಿನಗಳ ಕಾಲ ತರಬೇತಿ ಶಿಬಿರ ಆಯೋಜಿಸಲಾಗಿದೆ.

ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣ: ಎಫ್‌ಐಆರ್ ದಾಖಲಿಸಲು ಅಧಿಕಾರಿಗಳಿಗೆ ತರಬೇತಿ ನೀಡಿ; ಸರ್ಕಾರಕ್ಕೆ ಹೈಕೋರ್ಟ್
ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಹಿನ್ನೆಲೆಯಲ್ಲಿ ಪ್ರಕರಣಗಳ ಅಪರಾಧಗಳನ್ನು ದಾಖಲಿಸುವ ಸಂದರ್ಭದಲ್ಲಿ ಕೈಗೊಳ್ಳಬಹುದಾದ ಕ್ರಮಗಳ ಬಗ್ಗೆ ಚುನಾವಣಾ ವಿಚಕ್ಷಣ ದಳ(ಫ್ಲೇಯಿಂಗ್ ಸ್ಕ್ವಾಡ್)ಕ್ಕೆ ಅಗತ್ಯ ತರಬೇತಿ ನೀಡುವಂತೆ ಮುಖ್ಯ ಚುನಾವಣಾ ಆಯೋಗ, ರಾಜ್ಯ ಚುನಾವಣಾ ಆಯೋಗ, ಗೃಹ ಇಲಾಖೆ ಮತ್ತು ರಾಜ್ಯ ಪೊಲೀಸ್ ಮುಖ್ಯಸ್ಥರಿಗೆ ಹೈಕೋರ್ಟ್ ನಿರ್ದೇಶನ ನೀಡಿದೆ.

ಭಾರತೀಯ ಸೇನೆಗೆ 100 ಮಂದಿ ಮಹಿಳಾ ಅಗ್ನಿವೀರರ ಸೇರ್ಪಡೆ: ತರಬೇತಿ ಆರಂಭ
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಕನಸಿನ ಅಗ್ನಿಪಥ್ ಯೋಜನೆಯ ಮೊದಲ ಅಗ್ನಿವೀರ್ ಮಹಿಳಾ ಬ್ಯಾಚ್ಗೆ ಬೆಂಗಳೂರಿನ ನೀಲಸಂದ್ರದ ಮಿಲಿಟರಿ ಕ್ಯಾಂಪಸ್ನಲ್ಲಿ ತರಬೇತಿ ಆರಂಭವಾಗಿದೆ.

ಅನಾರೋಗ್ಯ ಪೀಡಿತ ಮಗನ ಆರೈಕೆಗೆ ಹೆಚ್ಚುವರಿ ರಜೆ ಪಡೆದುಕೊಂಡಿದ್ದ ಮುಖ್ಯೋಪಾಧ್ಯಾಯಿನಿ: ವೇತನ ಮರುಪಾವತಿಗೆ ಸರ್ಕಾರ ಆದೇಶ
ಅನಾರೋಗ್ಯ ಪೀಡಿತ ಮಗನ ಆರೈಕೆ ಹಿನ್ನೆಲೆಯಲ್ಲಿ ಹೆಚ್ಚುವರಿ ರಜೆ ಪಡೆದುಕೊಂಡಿದ್ದ ಸರ್ಕಾರಿ ಪ್ರೌಢಶಾಲೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಮುಖ್ಯೋಪಾಧ್ಯಾಯಿನಿಗೆ ರಜೆಯಲ್ಲಿದ್ದಾಗ ಪಡೆದ ಸಂಬಳವನ್ನು ಮರುಪಾವತಿಸುವಂತೆ ರಾಜ್ಯ ಸರ್ಕಾರ ಆದೇಶಿಸಿದೆ.

ಮೆಟ್ರಿಕ್ ನಂತರದ ವಸತಿ ಶಾಲೆ ವಿದ್ಯಾರ್ಥಿನಿಯರಿಗೆ 'ಸ್ವಯಂ ರಕ್ಷಣಾ' ಕೌಶಲ್ಯ ತರಬೇತಿ ನೀಡಲು ಸರ್ಕಾರ ಮುಂದು!
ಹೆಣ್ಣು ಮಕ್ಕಳ ಸಬಲೀಕರಣದ ಉದ್ದೇಶದಿಂದ ಮೆಟ್ರಿಕ್ ನಂತರದ ವಸತಿ ಶಾಲೆಗಳಲ್ಲಿ ವಿದ್ಯಾರ್ಥಿನಿಯರಿಗೆ 'ಸ್ವಯಂ ರಕ್ಷಣಾ' ಕೌಶಲ್ಯ ತರಬೇತಿ ನೀಡಲು ರಾಜ್ಯ ಸರ್ಕಾರ ಮುಂದಾಗಿದೆ.

ಕೊರೋನಾ 3ನೇ ಅಲೆಗೆ ಸಿದ್ಧತೆ: ಎಲ್ಲಾ ಜಿಲ್ಲೆಯಲ್ಲೂ ವೈದ್ಯರು, ಸಿಬ್ಬಂದಿಗಳಿಗೆ ತರಬೇತಿ ನೀಡಲು ಸರ್ಕಾರ ನಿರ್ಧಾರ
ರಾಜ್ಯದಲ್ಲಿ ಕೊರೋನಾ 3ನೇ ಅಲೆ ಆತಂಕ ಶುರುವಾಗಿರುವ ಹಿನ್ನೆಲೆಯಲ್ಲಿ ಪರಿಸ್ಥಿತಿ ಎದುರಿಸಲು ಸಿದ್ಧತೆ ನಡೆಸಲು ಮುಂದಾಗಿರುವ ರಾಜ್ಯ ಸರ್ಕಾರ ಎಲ್ಲಾ ಜಿಲ್ಲೆಯಲ್ಲಿಯೂ ವೈದ್ಯರು ಹಾಗೂ ಸಿಬ್ಬಂದಿಗಳಿಗೆ ತರಬೇತಿ ನೀಡಲು ನಿರ್ಧರಿಸಿದೆ.

