train

ಮೆಟ್ರೋ ಆಯ್ತು, ಈಗ ರೈಲಿನಲ್ಲೂ ರೀಲ್ಸ್ ಹಾವಳಿ: ತುಂಡು ಬಟ್ಟೆಯಲ್ಲಿ ಕುಣಿದ ಯುವತಿಗೆ ತರಾಟೆಗೆ, ವಿಡಿಯೋ
ಮೆಟ್ರೋ ರೈಲುಗಳು, ರೈಲ್ವೆ ಪ್ಲಾಟ್‌ಫಾರ್ಮ್‌ಗಳು ಮತ್ತು ಇತರ ಸಾರ್ವಜನಿಕ ಸ್ಥಳಗಳಲ್ಲಿ ಜನರು ರೀಲ್ಸ್ ಮಾಡುವ ಪ್ರವೃತ್ತಿ ವೇಗವಾಗಿ ಹೆಚ್ಚಾಗಿದೆ.

ಗದಗ: ರೈಲಿಗೆ ಸಿಲುಕಿ ಎಂಟು ಅಡಿ ಉದ್ದದ ಮೊಸಳೆ ಸಾವು
ರೈಲಿನಡಿ ಸಿಲುಕಿ ಮೊಸಳೆ ಸಾವಿಗೀಡಾಗಿರುವ ಘಟನೆ ಗದಗ ಜಿಲ್ಲೆಯಲ್ಲಿ ಸೋಮವಾರ ವರದಿಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಹಳೇ ಆಲೂರು ಗ್ರಾಮದಲ್ಲಿ ಘಟನೆ ನಡೆದಿದೆ.

ಕೆಎಸ್ ಆರ್ ನಿಲ್ದಾಣದಲ್ಲಿ ಉದ್ಯಾನ್ ಎಕ್ಸ್ ಪ್ರೆಸ್ ನಲ್ಲಿ ಬೆಂಕಿ ಅವಘಡ: ತನಿಖೆ ಪ್ರಗತಿಯಲ್ಲಿ, ಪೊಲೀಸರು ಹೇಳುವುದೇನು?
ರಾಜಧಾನಿ ಬೆಂಗಳೂರಿನ ಮಜೆಸ್ಟಿಕ್ ಪ್ರದೇಶದಲ್ಲಿರುವ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದಲ್ಲಿ ನಿಂತಿದ್ದ ಉದ್ಯಾನ್ ಎಕ್ಸ್ ಪ್ರೆಸ್ ರೈಲು ಸಂಖ್ಯೆ 11301 ರ ಬೋಗಿ 1 ಮತ್ತು 2ರಲ್ಲಿ ಇದ್ದಕ್ಕಿದ್ದಂತೆ ಬೆಂಕಿ ಕಾಣಿಸಿಕೊಂಡು ದಟ್ಟ ಹೊಗೆ ಆವರಿಸಿದ ಘಟನೆಗೆ ಸಂಬಂಧಿಸಿದಂತೆ ರೈಲ್ವೆ ಇಲಾಖೆ ಪೊಲೀಸರು ತನಿಖೆ ಆರಂಭಿಸಿದ್ದಾರೆ.

ತೆಲಂಗಾಣ: ಹಳಿ ದಾಟುತ್ತಿದ್ದ ವೇಳೆ ರೈಲು ಹರಿದು 60 ಮೇಕೆಗಳು ಸಾವು
ತೆಲಂಗಾಣದ ವಿಕಾರಾಬಾದ್ ಜಿಲ್ಲೆಯಲ್ಲಿ ರೈಲಿಗೆ ಸಿಲುಕಿ ಸುಮಾರು ಅರವತ್ತು ಮೇಕೆಗಳು ಸಾವಿಗೀಡಾಗಿವೆ ಎಂದು ಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ. ಮೇಕೆಗಳು ಕಿಷ್ಟಪ್ಪ ಎಂದು ಗುರುತಿಸಲಾದ ಕುರುಬನಿಗೆ ಸೇರಿವೆ.

ಮಂಗಳೂರು: ಕುಡಿದ ಮತ್ತಿನಲ್ಲಿ ಚಲಿಸುತ್ತಿದ್ದ ರೈಲಿನಲ್ಲಿ ಕತ್ತಿ ಝಳಪಿಸಿದ ಇಬ್ಬರ ಬಂಧನ
ಚಲಿಸುತ್ತಿದ್ದ ರೈಲಿನೊಳಗೆ ಕತ್ತಿಯನ್ನು ಝಳಪಿಸುತ್ತಿದ್ದ ಇಬ್ಬರನ್ನು ಕರ್ನಾಟಕ ರೈಲ್ವೆ ಪೊಲೀಸರು ಬಂಧಿಸಿದ್ದಾರೆ. ಇದು ಪ್ರಯಾಣಿಕರಲ್ಲಿ ಭಯ ಮತ್ತು ಗೊಂದಲವನ್ನು ಉಂಟುಮಾಡಿತು.

'ಶಕ್ತಿ' ಪರಿಣಾಮ: ರೈಲುಗಳಲ್ಲಿ ಶೇ.20ರಷ್ಟು, ವೋಲ್ವೋದಲ್ಲಿಯೂ ಮಹಿಳಾ ಪ್ರಯಾಣಿಕರ ಸಂಖ್ಯೆ ಇಳಿಕೆ!
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಕೆಂಪು ಬೋರ್ಡ್ ಬಸ್ಸುಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣವನ್ನು ಕಲ್ಪಿಸುವ ಶಕ್ತಿ ಯೋಜನೆ ಜಾರಿಗೆ ಬಂದ ನಂತರ ರೈಲುಗಳಲ್ಲಿ ಮತ್ತು ವೋಲ್ವೋ ಬಸ್ಸುಗಳಲ್ಲಿ ಸಹ ಮಹಿಳಾ ಪ್ರಯಾಣಿಕರ ಸಂಖ್ಯೆ ಕಡಿಮೆಯಾಗಿದೆ.

ಕಲಬುರಗಿ ಡೆಮೋ ರೈಲು ಹಳಿ ಮೇಲೆ ಬಿತ್ತು ಭಾರೀ ಗಾತ್ರದ ಬಂಡೆ: ಚಾಲಕನ ಸಮಯ ಪ್ರಜ್ಞಯಿಂದ ತಪ್ಪಿದ ಅನಾಹುತ!
ಮರಗುತ್ತಿ ಸುರಂಗ ಮಾರ್ಗದಲ್ಲಿ ಬಂಡೆಗಲ್ಲೊಂದು ಕಳಚಿ ಹಳಿ ಮೇಲೆಯೇ ಬಿದ್ದಾಗ, ಬಂಡೆ ಬಿದ್ದ ಸದ್ದಿನಿಂದ ಜಾಗೃತಗೊಂಡ ಚಾಲಕ ತಕ್ಷಣ ರೈಲಿನ ವೇಗ ತಗ್ಗಿಸುವ ಮೂಲಕ ಕಲಬುರಗಿ- ಬೀದರ್ ರೈಲು ಮಾರ್ಗದಲ್ಲಿನ ಸುರಂಗದಲ್ಲಿ ನಡೆಯಬಹುದಾಗಿದ್ದ ರೈಲು ಅವಘಡ ತಪ್ಪಿದಂತಾಗಿದೆ.

ಬೆಳಗಾವಿ: ಮದುವೆ ಖುಷಿಯಲ್ಲಿ ಊರಿಗೆ ಬರುತ್ತಿದ್ದ ಯೋಧ ರೈಲಿನಿಂದ ಕಾಲು ಜಾರಿ ಬಿದ್ದು ದುರ್ಮರಣ!
ಇನ್ನು ಕೆಲವೇ ದಿನಗಳಲ್ಲಿ ಹಸೆಮಣೆ ಏರಬೇಕಿದ್ದ ಯೋಧನೊಬ್ಬ ರೈಲಿನಿಂದ ಕಾಲು ಜಾರಿ ಬಿದ್ದು, ಮಸಣದ ಹಾದಿ ತುಳಿದ ಘಟನೆ ಬೆಳಗಾವಿಯಲ್ಲಿ ನಡೆದಿದೆ.

ಒಡಿಶಾ ರೈಲು ದುರಂತ: ರೈಲ್ವೇ ಸಿಗ್ನಲ್ ವ್ಯವಸ್ಥೆ ಬಗ್ಗೆ ವಿಪಕ್ಷಗಳ ಕಿಡಿ
ಒಡಿಶಾ ರೈಲು ದುರಂತ ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತರ ಕುರಿತು ತೀವ್ರ ಸಂತಾಪ ವ್ಯಕ್ತಪಡಿಸಿದ ವಿರೋಧ ಪಕ್ಷಗಳ ನಾಯಕರು, ಅಪಘಾತಕ್ಕೆ ಕಾರಣವಾದ ರೈಲ್ವೆಯ ಸಿಗ್ನಲಿಂಗ್ ವ್ಯವಸ್ಥೆಯ ಬಗ್ಗೆ ಕಿಡಿಕಾರುತ್ತಿದ್ದಾರೆ.

