tourist

Lok Sabha Poll 2024: ಮತದಾನ ಪ್ರಮಾಣ ಹೆಚ್ಚಿಸಲು ಕ್ರಮ; ಏಪ್ರಿಲ್ 26ಕ್ಕೆ ಮೈಸೂರಿನ ಪ್ರವಾಸಿ ತಾಣಗಳು ಬಂದ್!
ಏಪ್ರಿಲ್ 26ರಂದು ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದಲ್ಲಿ ಮತದಾನ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಕ್ಷೇತ್ರ ವ್ಯಾಪ್ತಿಯ ಮೈಸೂರು ಮೃಗಾಲಯ, ಕಾರಂಜಿ ಕೆರೆ ಸೇರಿದಂತೆ ಇತರ ಪ್ರವಾಸಿ ತಾಣಗಳನ್ನು ಮುಚ್ಚಲು ಅಧಿಕಾರಿಗಳು ನಿರ್ಧರಿಸಿದ್ದಾರೆ. ಏಪ್ರಿಲ್ 26 ರಂದು ಸಾರ್ವಜನಿಕರ ಪ್ರವೇಶಕ್ಕೆ ನಿರ್ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬೆಂಗಳೂರಿನ ಪ್ರವಾಸೋದ್ಯಮಕ್ಕೆ ಒತ್ತು: ಆಟೋ ಚಾಲಕರಿಂದ 'ಟೂರಿಸ್ಟ್ ಆಟೋ' ಪರಿಕಲ್ಪನೆ ಜಾರಿ
ಬೆಂಗಳೂರಿನಲ್ಲಿ ಪ್ರವಾಸೋದ್ಯಮವನ್ನು ಉತ್ತೇಜಿಸಲು, ನಗರದ ಆಟೋ ಚಾಲಕರು ಒಟ್ಟಾಗಿ ಸ್ಥಳೀಯ ಪ್ರವಾಸ ಸೇವೆಗಳನ್ನು ಜನತೆಗೆ ಅಗ್ಗದ ದರದಲ್ಲಿ ಒದಗಿಸಲು ‘ಟೂರಿಸ್ಟ್ ಆಟೋ’ ವನ್ನು ಜಾರಿಗೆ ತರುತ್ತಿದ್ದಾರೆ.

ತಾಪಮಾನ ಹೆಚ್ಚಳ: ಕಳೆದ 10 ವರ್ಷಗಳಲ್ಲೇ ಈ ಬಾರಿ ಹಂಪಿಯಲ್ಲಿ ಪ್ರವಾಸಿಗರ ಸಂಖ್ಯೆಯಲ್ಲಿ ಭಾರೀ ಇಳಿಕೆ!
ಮಳೆ ಕೊರತೆ, ತಾಪಮಾನ ಹೆಚ್ಚಳದಿಂದಾಗಿ ವಿಶ್ವ ಪಾರಂಪರಿಕ ತಾಣ ಹಂಪಿಯಲ್ಲಿ 10 ವರ್ಷಗಳ ಬಳಿಕ ಪ್ರವಾಸಿಗರ ಸಂಖ್ಯೆಯಲ್ಲಿ ಭಾರೀ ಇಳಿಕೆ ಕಂಡು ಬಂದಿದೆ.

ಮತ್ತಿಗೋಡು ಆನೆ ಶಿಬಿರ ಪ್ರವಾಸಿಗರಿಗೆ ಮುಕ್ತ
ಮತ್ತಿಗೋಡು ಆನೆ ಶಿಬಿರ ಪ್ರವಾಸಿಗರ ಭೇಟಿಗೆ ಮುಕ್ತವಾಗಿದೆ.

ಮಂಗಳೂರು: ಮಂಗಳಾ ಈಜುಕೊಳದಲ್ಲಿ ಮುಳುಗಿ ಗುರುಗ್ರಾಮದ ಪ್ರವಾಸಿಗ ಸಾವು
ಮಂಗಳೂರಿನ ಲೇಡಿಹಿಲ್‌ನ ಮಂಗಳಾ ಈಜುಕೊಳದ ನೀರಿನಲ್ಲಿ ಮುಳುಗಿ 30 ವರ್ಷದ ವ್ಯಕ್ತಿಯೊಬ್ಬರು ಸಾವಿಗೀಡಾಗಿರುವ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

764 ಅಡಿ ಎತ್ತರದಿಂದ ಜಿಗಿತ: ಚೀನಾದಲ್ಲಿ ಅತಿ ಎತ್ತರದ ಬಂಜೀ ಜಂಪ್ ಮಾಡಿದ ವ್ಯಕ್ತಿ ಸಾವು!
ವಿಶ್ವದಲ್ಲೇ ಅತಿ ಎತ್ತರದ ಬಂಜೀ ಜಂಪ್ ನಿಂದ ಜಿಗಿದು ಚೀನಾದಲ್ಲಿ ಜಪಾನ್ ನ ಪ್ರವಾಸಿಗನೋರ್ವ ಸಾವನ್ನಪ್ಪಿದ್ದಾರೆ.

ಬೆಂಗಳೂರು: ಎಂಜಿ.ರಸ್ತೆಯಲ್ಲಿ ವಿದೇಶಿ ಪ್ರವಾಸಿಗನ ಮೊಬೈಲ್ ಕಸಿದ ಕಳ್ಳರು, ದೂರು ದಾಖಲು
ನಗರದ ಎಂಜಿ ರಸ್ತೆಯಲ್ಲಿ ಬೈಕ್‌ನಲ್ಲಿ ಬಂದ ಇಬ್ಬರು ಅಪರಿಚಿತ ದರೋಡೆಕೋರರು ಆಸ್ಟ್ರೇಲಿಯಾದ ಪ್ರವಾಸಿಗರೊಬ್ಬರ ಮೊಬೈಲ್ ದೋಚಿ ಪರಾರಿಯಾಗಿರುವ ಘಟನೆ ಸೋಮವಾರ ನಡೆದಿದೆ.

ಚಿಕ್ಕಮಗಳೂರು: ಮುಳ್ಳಯ್ಯನಗಿರಿ, ದತ್ತಪೀಠ ಭಾಗಕ್ಕೆ ಬರುವ ಪ್ರವಾಸಿಗರಿಗೆ ನಿಷೇಧ
ನವೆಂಬರ್ 4-6ರವರೆಗೆ ಮೂರು ದಿನಗಳ ಕಾಲ ಚಿಕ್ಕಮಗಳೂರಿನ ಪ್ರವಾಸಿ ತಾಣಗಳಾದ ಮುಳ್ಳಯ್ಯನಗಿರಿ, ದತ್ತಪೀಠ ಸೇರಿದಂತೆ ಪ್ರಸಿದ್ಧ ಪ್ರವಾಸಿ ತಾಣಗಳಿಗೆ ಭೇಟಿ ನೀಡುವ ಪ್ರವಾಸಿಗರಿಗೆ ಜಿಲ್ಲಾಡಳಿತ ಮಂಡಳಿ ನಿಷೇಧ ಹೇರಿ ಆದೇಶ ಹೊರಡಿಸಿದೆ.

ಪ್ರವಾಸಿಗರಿಗೆ ಸಿಹಿಸುದ್ದಿ; ವಿಜಯದಶಮಿಯಂದು ಸಾರ್ವಜನಿಕರಿಗೆ ಬನ್ನೇರುಘಟ್ಟ ಜೈವಿಕ ಉದ್ಯಾನವನ ಪ್ರವೇಶ ಮುಕ್ತ
ವಿಜಯ ದಶಮಿ ಪ್ರಯುಕ್ತ ಪ್ರವಾಸಿಗರಿಗೆ ಸಂತಸದ ಸುದ್ದಿಯೊಂದು ಹೊರಬಿದ್ದಿದ್ದು, ಈ ಬಾರಿಯ ವಿಜಯ ದಶಮಿಯಂದು (ಅಕ್ಟೋಬರ್ 24) ಆನೇಕಲ್ ತಾಲ್ಲೂಕಿನ ಬನ್ನೇರುಘಟ್ಟ ಜೈವಿಕ ಉದ್ಯಾನವನ ತೆರೆದಿರುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

