Torrential rains, landslides

ಭಾರೀ ಮಳೆಯಿಂದ ಜಮ್ಮುವಿನಲ್ಲಿ ಭೂ ಕುಸಿತ, ಜಮ್ಮು- ಕಾಶ್ಮೀರ ರಾಷ್ಟ್ರೀಯ ಹೆದ್ದಾರಿ ಬಂದ್
ಕೇಂದ್ರಾಡಳಿತ ಪ್ರದೇಶ ಜಮ್ಮುವಿನ ವಿವಿಧೆಡೆ ಶನಿವಾರ ಇಡೀ ರಾತ್ರಿ ಭಾರೀ ಮಳೆಯಾಗಿದ್ದು, ಅನೇಕ ಕಡೆಗಳಲ್ಲಿ ಭೂಕುಸಿತವಾಗಿದೆ. ಇದರಿಂದಾಗಿ ಜಮ್ಮು-ಶ್ರೀನಗರ ರಾಷ್ಟ್ರೀಯ ಹೆದ್ದಾರಿ ಬಂದ್ ಆಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

3 ದಿನಗಳಲ್ಲಿ ಹಿಮಾಚಲ ಹಾಗೂ ಇತರ ರಾಜ್ಯಗಳಲ್ಲಿ ಮಳೆ ಸಂಬಂಧಿತ ಅವಘಡಗಳಲ್ಲಿ ಕನಿಷ್ಠ 50 ಮಂದಿ ಸಾವು!
ಕಳೆದ ಮೂರು ದಿನಗಳಲ್ಲಿ ಹಿಮಾಚಲ ಪ್ರದೇಶ, ಉತ್ತರಾಖಂಡ ಮತ್ತು ಒಡಿಶಾದಲ್ಲಿ ತೀವ್ರ ಮುಂಗಾರು ಮಳೆಯಿಂದ ಉಂಟಾದ ಹಠಾತ್ ಪ್ರವಾಹ ಮತ್ತು ಭೂಕುಸಿತದಲ್ಲಿ ಕನಿಷ್ಠ 50 ಜನರು ಸಾವನ್ನಪ್ಪಿದ್ದಾರೆ.

ಭೂ ಕುಸಿತ: ಗೋವಾ-ಅನ್ಮೋಡ್ ರಸ್ತೆ ಬಂದ್!
ಉತ್ತರ ಕನ್ನಡ ಜಿಲ್ಲೆಯ ಮೂಲಕ ಹಾದು ಹೋಗುವ ಗೋವಾ-ಅನ್ಮೋಡ್ ನ ಎನ್ ಹೆಚ್4A ರಸ್ತೆಯನ್ನು ಬಂದ್ ಮಾಡಲಾಗಿದೆ.

ಭಾರತೀಯ ಸೇನೆ ಮಿಸೈಲ್ ಲಾಂಚರ್ ಗಳನ್ನು ಇಂಡೊ- ಚೈನಾ ಗಡಿಗೆ ಸಾಗಿಸಲು ರಸ್ತೆ ಅಗಲೀಕರಣ ಅಗತ್ಯ: ಅಟಾರ್ನಿ ಜನರಲ್
ಗಡಿ ಪ್ರದೇಶಗಳಲ್ಲಿ ಕೇಂದ್ರ ಸರ್ಕಾರ ಕೈಗೊಳ್ಳುತ್ತಿರುವ ರಸ್ತೆ ನಿರ್ಮಾಣ ಯೋಜನೆಗಳಿಂದ ಗುಡ್ಡ ಕುಸಿತ, ಭೂ ಕುಸಿತ ಅಪಾಯಗಳು ತಲೆದೋರಿವೆ ಎಂದು ಹೇಳಿ ಯೋಜನೆಗೆ ತಡೆಯೊಡ್ಡುವಂತೆ ಎನ್ ಜಿ ಒ ಸಂಘಟನೆಯೊಂದು ಸುಪ್ರೀಂ ಕೋರ್ಟಿನಲ್ಲಿ ಅರ್ಜಿ ಸಲ್ಲಿಸಿತ್ತು.

ಮಳೆಗೆ ಕೇರಳ ತತ್ತರ: ಪ್ರವಾಹ, ಭೂ ಕುಸಿತದಿಂದ ಮೃತಪಟ್ಟವರ ಸಂಖ್ಯೆ 27ಕ್ಕೆ ಏರಿಕೆ
ಕೇರಳದಲ್ಲಿ ಪ್ರವಾಹ, ಭೂಕುಸಿತಕ್ಕೆ ಕಾರಣವಾದ ಧಾರಾಕಾರ ಮಳೆಯು ಇಲ್ಲಿಯವರೆಗೆ 27 ಜನರ ಜೀವವನ್ನು ಬಲಿ ತೆಗೆದುಕೊಂಡಿದೆ.

ಮಳೆಗೆ ಕೇರಳ ತತ್ತರ: ಪ್ರವಾಹ, ಭೂಕುಸಿತಕ್ಕೆ ಮೃತಪಟ್ಟವರ ಸಂಖ್ಯೆ 19ಕ್ಕೆ ಏರಿಕೆ; 11 ಮೃತದೇಹಗಳು ಪತ್ತೆ
ಕೇರಳದಲ್ಲಿ ಧಾರಾಕಾರ ಮಳೆಯಿಂದ ಸಂಭವಿಸಿದ ಭೂಕುಸಿತ ಹಾಗೂ ಪ್ರವಾಹದಿಂದಾಗಿ ಮೃತಪಟ್ಟವರ ಸಂಖ್ಯೆ 19ಕ್ಕೆ ಏರಿಕೆಯಾಗಿದೆ. ಭಾನುವಾರ ಮಧ್ಯಾಹ್ನ ಕೊಟ್ಟಾಯಂನಲ್ಲಿ 12, ಇಡುಕಿಯಲ್ಲಿ 6 ಹಾಗೂ ಕೊಝಿಕೋಡ್ ನಲ್ಲಿ 1 ಸಾವಿನ ಪ್ರಕರಣಗಳು ವರದಿಯಾಗಿದೆ.

ಮಹಾರಷ್ಟ್ರದಲ್ಲಿ ಭೂಕುಸಿತ, ಪ್ರವಾಹಕ್ಕೆ 71 ಮಂದಿ ಸಾವು!
ಮಹಾರಾಷ್ಟ್ರದಲ್ಲಿ ಸುರಿಯುತ್ತಿರುವ ಧಾರಾಕಾರವಾಗಿ ಭೂಕುಸಿತ ಹಾಗೂ ಗುಡ್ಡಗಳ ಕುಸಿತ ಉಂಟಾಗಿದ್ದು ಕನಿಷ್ಟ 71 ಗ್ರಾಮಸ್ಥರು ಸಾವನ್ನಪ್ಪಿದ್ದಾರೆ.

ಎಂಜಿನಿಯರಿಂಗ್ ದೋಷಗಳೇ ಭೂಕುಸಿತಕ್ಕೆ ಕಾರಣ: ತಜ್ಞರ ಸಮಿತಿಯಿಂದ ಸರ್ಕಾರಕ್ಕೆ ವರದಿ ಸಲ್ಲಿಕೆ
ಎಂಜಿನಿಯರಿಂಗ್ ದೋಷಗಳೇ ರಾಜ್ಯದಲ್ಲಿ ಎದುರಾದ ಭೂಕುಸಿತಕ್ಕೆ ಕಾರಣ ಎಂದು ಕರ್ನಾಟಕ ಜೀವವೈವಿಧ್ಯ ಮಂಡಳಿಯ ತಜ್ಞರ ಸಮಿತಿ ಸರ್ಕಾರಕ್ಕೆ ತಿಳಿಸಿದೆ.

ಕೊಡಗಿನಲ್ಲಿ ಪ್ರಕೃತಿ ವಿಕೋಪ , ಭೂಕುಸಿತ : ಕಾಫಿ ಉದ್ಯಮ ಕಂಗಾಲು
ಕೊಡಗು ಜಿಲ್ಲೆಯಲ್ಲಿ ಇತ್ತೀಚೆಗೆ ಸುರಿದ ಧಾರಾಕಾರ ಮಳೆ, ಪ್ರವಾಹ ಮತ್ತು ಭೂಕುಸಿತದಿಂದ ಲಕ್ಷಾಂತರ ಎಕರೆ ಕಾಫಿ ಬೆಳೆ, ಕಾಫಿ ತೋಟಗಳು ನೆಲಕಚ್ಚಿವೆ.

