TMC

65ಕ್ಕಿಂತ ಹಿರಿಯರಿಗೆ ಅಂಚೆ ಮತದಾನ ನಿರ್ಧಾರ ಹಿಂಪಡೆಯುವಂತೆ ಚುನಾವಣಾ ಆಯೋಗಕ್ಕೆ ಟಿಎಂಸಿ ಆಗ್ರಹ
ಕೊರೋನಾ ವೈರಸ್ ಹಿನ್ನೆಲೆಯಲ್ಲಿ ಚುನಾವಣೆ ನಿಯಮಗಳಿಗೆ ತಿದ್ದುಪಡಿ ತರಲಾಗಿದ್ದು, 65 ವರ್ಷ ಮೇಲ್ಪಟ್ಟವರಿಗೆ ಅಂಚೆ ಮತದಾನಕ್ಕೆ ಅವಕಾಶ ಕಲ್ಪಿಸಲಾಗಿದೆ. ಆದರೆ ಇದಕ್ಕೆ ತೃಣಮೂಲ ಕಾಂಗ್ರೆಸ್(ಟಿಎಂಸಿ) ತೀವ್ರ ವಿರೋಧ ವ್ಯಕ್ತಪಡಿಸಿದ್ದು, 65ಕ್ಕಿಂತ ಹಿರಿಯರಿಗೆ ಅಂಚೆ ಮತದಾನ ನಿರ್ಧಾರ ಹಿಂಪಡೆಯುವಂತೆ ಸೋಮವಾರ ಚುನಾವಣಾ ಆಯೋಗಕ್ಕೆ ಒತ್ತಾಯಿಸಿದೆ.

ಕೇಂದ್ರ ಸುಳ್ಳು ಹೇಳುತ್ತಿದೆ, ಬಂಗಾಳ ಸರ್ಕಾರ ವಲಸಿಗರಿಗಾಗಿ 8 ರೈಲು ಓಡಿಸಲು ಯೋಜಿಸಿದೆ: ಅಮಿತ್ ಶಾಗೆ ಟಿಎಂಸಿ ತಿರುಗೇಟು
ಅವ್ಯವಸ್ಥಿತ ಲಾಕ್ ಡೌನ್ ಹೇರುವ ವಲಸೆ ಕಾರ್ಮಿಕರನ್ನು ನಿರಾಶ್ರಿತಗೊಳಿಸಿದ ಕೇಂದ್ರ ಸರ್ಕಾರಕ್ಕೆ ಅವರ ಬಗ್ಗೆ ಮಾತನಾಡುವ ಹಕ್ಕಿಲ್ಲ, ವಲಸೆ ಕಾರ್ಮಿಕರ ರವಾನೆಗಾಗಿ ಬಂಗಾಳ ಸರ್ಕಾರ 8 ರೈಲುಗಳ ಓಡಿಸಲು ಯೋಜನೆ ರೂಪಿಸಿದೆ ಎಂದು ಆಡಳಿತಾ ರೂಢ ತೃಣಮೂಲ ಕಾಂಗ್ರೆಸ್ ಪಕ್ಷ ಕೇಂದ್ರ ಸರ್ಕಾರಕ್ಕೆ ತಿರುಗೇಟು ನೀಡಿದೆ.

ಕೋವಿಡ್-19: ಪರಿಸ್ಥಿತಿ ಅವಲೋಕನಕ್ಕೆ ಬಂದಿದ್ದ ಕೇಂದ್ರ ತಂಡದ ವಿರುದ್ಧ ಟಿಎಂಸಿ ಅಸಮಾಧಾನ
ಪಶ್ಚಿಮ ಬಂಗಾಳದಲ್ಲಿ ಕೊರೋನಾ ವೈರಸ್ ಪರಿಸ್ಥಿತಿ ಅವಲೋಕನಕ್ಕಾಗಿ ಆಗಮಿಸಿದ್ದ ಕೇಂದ್ರೀಯ ತಂಡದ ವಿರುದ್ಧ ತೃಣಮೂಲ ಕಾಂಗ್ರೆಸ್ ಪಕ್ಷ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.

ಕೊನೆ ಉಸಿರಿರುವವರೆಗೆ ಗಲಭೆಗಳು ನಡೆಯಲು ಬಿಡುವುದಿಲ್ಲ’: ಮಮತಾ ಬ್ಯಾನರ್ಜಿ
ಪಶ್ಚಿಮ ಬಂಗಾಳ ಎಂದಿಗೂ ಅನ್ಯಾಯಕ್ಕೆ ತಲೆ ಬಾಗಿಲ್ಲ ಮತ್ತು ಅನ್ಯಾಯವನ್ನು ಬಂಗಾಳ ಎಂದಿಗೂ ಮಾಡುವುದಿಲ್ಲ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮತ್ತು ತೃಣಮೂಲ ಕಾಂಗ್ರೆಸ್ (ಟಿಎಂಸಿ) ವರಿಷ್ಠೆ ಮಮತಾ ಬ್ಯಾನರ್ಜಿ ಬುಧವಾರ ಹೇಳಿದ್ದಾರೆ.

ಟಿಎಂಸಿನಿಂದ ರಾಜ್ಯಸಭೆಗೆ ಪ್ರಶಾಂತ್ ಕಿಶೋರ್ ಸ್ಪರ್ಧೆ: ವರದಿ
ಮುಂದಿನ ತಿಂಗಳು ಪಶ್ಚಿಮ ಬಂಗಾಳದಲ್ಲಿ ನಡೆಯಲಿರುವ ರಾಜ್ಯಸಭಾ ಚುನಾವಣೆಯಲ್ಲಿಜಕೀಯ ತಂತ್ರಜ್ಞ ಪ್ರಶಾಂತ್ ಕಿಶೋರ್ ಅವರು ಟಿಎಂಸಿ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರೆ ಎಂದು ಪಕ್ಷದ ಮೂಲವೊಂದು ಹೇಳಿದೆ. ಜನತಾದಳ(ಯು) ನಿಂದ ಉಚ್ಚಾಟಿಸಲ್ಪಟ್ಟ ಪ್ರಶಾಂತ್ ಕಿಶೋರ್ ಟಿಎಂಸಿ ನಿಂದ ರಾಜ್ಯಸಭೆಗೆ ಸ್ಪರ್ಧಿಸುವುದಾಗಿ ಮೂಲದಲ್ಲಿ ಉಲ್ಲೇಖಿಸಲಾಗಿದೆ.

ಕೇಂದ್ರೀಯ ಸಂಸ್ಥೆಗಳಿಂದ ಕಿರುಕುಳ, ಒತ್ತಡ ಸಾಕಷ್ಟು ಜನರನ್ನು ಬಲಿಪಡೆದುಕೊಂಡಿದೆ: ಮಮತಾ ಬ್ಯಾನರ್ಜಿ ಆಕ್ರೋಶ
ಕೇಂದ್ರ ಸರ್ಕಾರ ವಿವಿಧ ಏಜೆನ್ಸಿಗಳ ಒತ್ತಡ ಹಾಗೂ ಕಿರುಕುಳದಿಂದಾಗಿ ಪಶ್ಚಿಮ ಬಂಗಾಳದಲ್ಲಿ ಸಾಕಷ್ಟು ಜೀವಗಳನ್ನು ಬಲಿಪಡೆದುಕೊಂಡಿದೆ ಎಂದು ತೃಣ ಮೂಲ ಕಾಂಗ್ರೆಸ್ ಮುಖ್ಯಸ್ಥೆ ಹಾಗೂ ರಾಜ್ಯ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಬುಧವಾರ ಆರೋಪಿಸಿದ್ದಾರೆ.

ಭೂ ಕಬಳಿಸಿ ದರ್ಪ ತೋರಿದ ಮುಖಂಡ: ಪ್ರತಿಭಟಿಸಿದ್ದಕ್ಕೆ ಶಿಕ್ಷಕಿ ಕೈಕಾಲು ಕಟ್ಟಿ ಅಮಾನವೀಯ ಮೆರೆದ ಟಿಎಂಸಿ ಕಾರ್ಯಕರ್ತರು
ರಸ್ತೆ ನಿರ್ಮಾಣಕ್ಕಾಗಿ ಭೂಮಿ ಕಬಳಿಸಿದ್ದೂ ಅಲ್ಲದೆ, ವಿರೋಧ ವ್ಯಕ್ತಪಡಿಸಿದ್ದೆ ಶಿಕ್ಷಕಿಯೊಬ್ಬರ ಕೈಕಾಲುಗಳನ್ನು ಹಗ್ಗದಿಂದ ಕಟ್ಟಿ, ರಸ್ತೆಯ ಮೇಲೆ ಎಳೆದೊಯ್ದು ಹಲ್ಲೆ ನಡೆಸಿರುವ ಅಮಾನವೀಯ ಘಟನೆ ಪಶ್ಚಿಮ ಬಂಗಾಳದ ದಕ್ಷಿಣ ದಿನಾಜ್ ಪುರ್ ನ ಗಂಗ್ರಾಮ್ ಪುರ್ ಎಂಬಲ್ಲಿ ನಡೆದಿದೆ.

ಸಿಎಎ, ಎನ್‌ಆರ್‌ಸಿ ಬಗ್ಗೆ 'ದೀದಿ' ದ್ವಿಮುಖ ನೀತಿ: ಮೋದಿ-ಮಮತಾ ಭೇಟಿಗೆ ಎಡಪಂಥಿಯರ ಪ್ರತಿಭಟನೆ!
ಪೌರತ್ವ ತಿದ್ದುಪಡಿ ಕಾಯ್ದೆ(ಸಿಎಎ), ರಾಷ್ಟ್ರೀಯ ಪೌರತ್ವ ನೋಂದಣಿ(ಎನ್‌ಆರ್‌ಸಿ) ವಿಷಯವಾಗಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ದ್ವಿಮುಖ ನೀತಿ ಅನುಸರಿಸುತ್ತಿದ್ದಾರೆ ಎಂದು ಆರೋಪಿಸಿ ಎಡಪಂಥಿಯ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು.

ಪೌರತ್ವ ಕಾಯ್ದೆ ವಿರೋಧಿ ನಿಲುವಿನಿಂದಾಗಿ ಸರ್ಕಾರ ನಮ್ಮ ಸ್ತಬ್ಧಚಿತ್ರ ಪ್ರಸ್ತಾವನೆ ತಿರಸ್ಕರಿಸಿದೆ: ಟಿಎಂಸಿ ಆರೋಪ
ಗಣರಾಜ್ಯೋತ್ಸವ ಪರೇಡ್ ನಲ್ಲಿ ಭಾಗವಹಿಸಲು ಸಲ್ಲಿಸಿದ್ದ ಸ್ತಬ್ಧಚಿತ್ರದ ಪ್ರಸ್ತಾವನೆಯನ್ನು ಕೇಂದ್ರ ಸರ್ಕಾರ ತಿರಸ್ಕರಿಸಲು ಕಾರಣ ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಟಿಎಂಸಿ ಪ್ರತಿಭಟನೆ ನಡೆಸುತ್ತಿರುವುದು ಎಂದು ತೃಣಮೂಲ ಕಾಂಗ್ರೆಸ್ ತಿರುಗೇಟು ನೀಡಿದೆ.

