TMC, BJP workers

ಪಶ್ಚಿಮ ಬಂಗಾಳದಲ್ಲಿ ಟಿಎಂಸಿಗೆ ಮತ್ತೊಂದು ಆಘಾತ: ಮತ್ತೋರ್ವ ಟಿಎಂಸಿ ನಾಯಕ ಬಿಜೆಪಿಗೆ ಸೇರ್ಪಡೆ
ಪಶ್ಚಿಮ ಬಂಗಾಳದಲ್ಲಿ ಚುನಾವಣೆಯ ಸಂದರ್ಭದಲ್ಲಿ ಟಿಎಂಸಿಗೆ ಮತ್ತೊಂದು ಆಘಾತ ಎದುರಾಗಿದ್ದು, ತನ್ನ ಶಾಸಕ ಮಿಹಿರ್ ಗೋಸ್ವಾಮಿ ಪಕ್ಷ ತೊರೆದಿದ್ದು ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ.

ಟಿಎಂಸಿಗೆ ತೀವ್ರ ಹಿನ್ನಡೆ: ಪಶ್ಚಿಮ ಬಂಗಾಳ ಸಾರಿಗೆ ಸಚಿವ ಸುವೇಂದು ಅಧಿಕಾರಿ ರಾಜೀನಾಮೆ
ಪಕ್ಷದ ನಾಯಕತ್ವದೊಂದಿಗೆ ಮುನಿಸಿಕೊಂಡಿದ್ದ ತೃಣಮೂಲ ಕಾಂಗ್ರೆಸ್ ಹಿರಿಯ ಮುಖಂಡ ಹಾಗೂ ಪಶ್ಚಿಮ ಬಂಗಾಳ ಸಾರಿಗೆ ಸಚಿವ ಸುವೇಂದು ಅಧಿಕಾರಿ ಅವರು ಶುಕ್ರವಾರ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಅವರ ಮುಂದಿನ ರಾಜಕೀಯ ನಡೆ ಕುತೂಹಲ ಮೂಡಿಸಿದೆ.

ಬಿಜೆಪಿ ನನ್ನನ್ನು ಬಂಧಿಸಿದರೂ, ಜೈಲಿನಿಂದಲೇ ಚುನಾವಣೆಯಲ್ಲಿ ಟಿಎಂಸಿಯನ್ನು ಗೆಲ್ಲಿಸುತ್ತೇನೆ: ಮಮತಾ ಬ್ಯಾನರ್ಜಿ
ಬಿಜೆಪಿಯನ್ನು "ಸುಳ್ಳಿನ ಕಸ" ಮತ್ತು "ರಾಷ್ಟ್ರದ ಅತಿದೊಡ್ಡ ಶಾಪ" ಎಂದು ಜರಿದಿರುವ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು, ಕೇಸರಿ ಪಕ್ಷ ನನ್ನನ್ನು ಬಂಧಿಸಿದರೂ ಮುಂಬರುವ ಚುನಾವಣೆಯಲ್ಲಿ ಜೈಲಿನಿಂದಲೇ ತಾವು ಟಿಎಂಸಿಯನ್ನು ಗೆಲ್ಲಿಸುವುದಾಗಿ ಬುಧವಾರ ಹೇಳಿದ್ದಾರೆ.

ಪಶ್ಚಿಮ ಬಂಗಾಳದಲ್ಲಿ ಓವೈಸಿಗೆ ತೀವ್ರ ಹಿನ್ನಡೆ: ಟಿಎಂಸಿ ಸೇರಿದ ಎಂಐಎಂ ನಾಯಕರು!
ಪಶ್ಚಿಮ ಬಂಗಾಳದಲ್ಲಿ ಎಐಎಂಐಎಂ ಪಕ್ಷಕ್ಕೆ ತೀವ್ರ ಆಘಾತ ಎದುರಾಗಿದ್ದು, ಪಕ್ಷದ ಪ್ರಮುಖ ನಾಯಕರು ಟಿಎಂಸಿ ಸೇರಿದ್ದಾರೆ.

ರಾಜಕೀಯ ತೊರೆದು ಆತ್ಮಹತ್ಯೆಗೆ ಸಿದ್ಧ, ಬಿಜೆಪಿಗೆ ಸೇರಲಾರೆ: ಸೌಗತ ರಾಯ್
ಪಶ್ಚಿಮ ಬಂಗಾಳದ ಕನಿಷ್ಠ ಐವರು ತೃಣಮೂಲ ಕಾಂಗ್ರೆಸ್ ಸಂಸದರು ಪಕ್ಷಕ್ಕೆ ರಾಜಿನಾಮೆಕೊಟ್ಟು , ಬಿಜೆಪಿಗೆ ಬರಲಿದ್ದಾರೆ ಎಂಬ ಬಿಜೆಪಿ ನಾಯಕರ ಹೇಳಿಕೆ ಟಿಎಂಸಿ ಸಂಸದ ಸೌಗತ ರಾಯ್ ಖಡಕ್ ಪ್ರತಿಕ್ರಿಯೆ ನೀಡಿದ್ದಾರೆ.

ಪಶ್ಚಿಮ ಬಂಗಾಳ: ಪಕ್ಷದ ಕಾರ್ಯಕರ್ತರ ಸಾವು ಪ್ರತಿಭಟಿಸಿ 12 ಗಂಟೆ ಬಂದ್ ಗೆ ಬಿಜೆಪಿ ಕರೆ
ಪಕ್ಷದ ಕಾರ್ಯಕರ್ತರ ಮೇಲಿನ ಹಲ್ಲೆ, ಸಾವನ್ನು ಪ್ರತಿಭಟಿಸಿ ರಾಜ್ಯ ಬಿಜೆಪಿಯಿಂದ 12 ಗಂಟೆಗಳ ಕಾಲ ಬಂದ್ ಗೆ ಕರೆ ನೀಡಲಾಗಿದೆ. ಕೋಚ್ ಬೆಹಾರ್ ನಲ್ಲಿ ಪಕ್ಷದ ಕಾರ್ಯಕರ್ತರ ಮೇಲೆ ಹಲ್ಲೆ ನಡೆದು ಸಾವನ್ನಪ್ಪಿದ ನಂತರ ಈ ಬಂದ್ ನಡೆಸಲಾಗುತ್ತಿದೆ.

ತೃಣಮೂಲ ಕಾಂಗ್ರೆಸ್ ಮಮತಾ ಬ್ಯಾನರ್ಜಿಯವರ ಕೈಯಲ್ಲಿ ಉಳಿದಿಲ್ಲ: ಶಾಸಕ ಮಿಹಿರ್ ಗೋಸ್ವಾಮಿ
ತೃಣಮೂಲ ಕಾಂಗ್ರೆಸ್ ನ ಆಡಳಿತ ಮಮತಾ ಬ್ಯಾನರ್ಜಿಯವರ ಕೈಯಲ್ಲಿ ಉಳಿದಿಲ್ಲ, ಹೀಗಾಗಿ ಆ ಪಕ್ಷದಲ್ಲಿ ಇನ್ನು ಇರಲು ಸಾಧ್ಯವಿಲ್ಲ ಎಂದು ಮಿಹಿರ್ ಗೋಸ್ವಾಮಿಯವರು ಹೇಳಿದ್ದು ವ್ಯಾಪಕವಾಗಿ ಚರ್ಚೆಯಾಗುತ್ತಿದೆ.

ಪಶ್ಚಿಮ ಬಂಗಾಳ: ಅಪರಿಚಿತ ದುಷ್ಕರ್ಮಿಗಳಿಂದ ಟಿಎಂಸಿ ಕಾರ್ಯಕರ್ತನ ಮೇಲೆ ಗುಂಡಿನ ದಾಳಿ, ಹತ್ಯೆ
ಪಶ್ಚಿಮ ಬಂಗಾಳದ ಪಾಸ್ಚಿಮ್ ಬರ್ಧಮನ್ ಜಿಲ್ಲೆಯ ಅಂಡಾಲ್ ನಲ್ಲಿ ಅಪರಿಚಿತ ದುಷ್ಕರ್ಮಿಗಳು ನಡೆಸಿದ ಗುಂಡಿನ ದಾಳಿಯಲ್ಲಿ ಟಿಎಂಸಿ ಕಾರ್ಯಕರ್ತನೊಬ್ಬ ಸಾವನ್ನಪ್ಪಿದ್ದು, ಮತ್ತಿಬ್ಬರು ಗಾಯಗೊಂಡಿರುವುದಾಗಿ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಗುರುವಾರ ತಿಳಿಸಿದ್ದಾರೆ.

ಮೂವರು ಬಿಜೆಪಿ ಕಾರ್ಯಕರ್ತರ ಹತ್ಯೆ ಹಿಂದೆ ಎಲ್ಇಟಿ ಕೈವಾಡ
ಕುಲ್ಗಾಮ್ ನಲ್ಲಿ ಕಳೆದ ರಾತ್ರಿ ಮೂವರು ಬಿಜೆಪಿ ಕಾರ್ಯಕರ್ತರ ಹತ್ಯೆಯ ಹಿಂದೆ ಲಷ್ಕರ್ ಎ ತೊಯ್ಬಾ ಉಗ್ರರ ಕೈವಾಡವಿದೆಯೆಂದು ಕಾಶ್ಮೀರ ವಲಯದ ಐಜಿಪಿ ವಿಜಯ್ ಕುಮಾರ್ ಶುಕ್ರವಾರ ತಿಳಿಸಿದ್ದಾರೆ.

