theft

ವಾಟ್ಸಾಪ್ DP ತಂದ ಕುತ್ತು: ಚಿನ್ನಾಭರಣ ಕದ್ದು ಸಿಕ್ಕಿಬಿದ್ದ ಕೆಲಸದಾಕೆ!
ಚಿನ್ನಾಭರಣ ದೋಚಿದ್ದ ಮನೆ ಕೆಲಸದಾಕೆ ಕದ್ದ ನೆಕ್ಲೇಸ್ ಧರಿಸಿ ವಾಟ್ಸಾಪ್ ಡಿಪಿ ಹಾಕಿಕೊಂಡಿದ್ದಳು. ಇದನ್ನು ಕಂಡುಹಿಡಿದ ಎಚ್‌ಎಎಲ್ ಪೊಲೀಸರು ತಕ್ಷಣವೇ ಆಕೆಯನ್ನು ಬಂಧಿಸಿ ಬಾಯಿಬಿಡಿಸಿದ್ದಾರೆ.

ಖತರ್ನಾಕ್ ವಾಹನ ಕಳ್ಳರ ಸೆರೆ: 20 ಲಕ್ಷ ರೂ. ಮೌಲ್ಯದ 32 ವಾಹನ ವಶಕ್ಕೆ
ನಗರದಲ್ಲಿ ನಡೆದಿದ್ದ ವಾಹನ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ದೇವನಹಳ್ಳಿ ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲನೆ ನಡೆಸಿದ್ದರು. ಈ ವೇಳೆ ಕಳ್ಳತನವಾಗಿದ್ದ ಬೈಕ್ ನೊಂದಿಗೆ ರಾಜಗೋಪಾಲ್ ಪತ್ತೆಯಾಗಿದ್ದ.

ಮನೆಯವರಿಗೆ ಬುದ್ಧಿ ಕಲಿಸಲು ಸ್ನೇಹಿತರೊಂದಿಗೆ ಕಳ್ಳತನ ಮಾಡಿದ ಬಾಲಕಿ; ಹಲವು ಪ್ರಕರಣ ಬೇಧಿಸಿದ ಪೊಲೀಸರು
ಕೇವಲ ಒಂದು ವಾರದಲ್ಲಿ ಬೆಂಗಳೂರು ಪೊಲೀಸರು ಮೂವರು ಅಪ್ರಾಪ್ತರು ಮತ್ತು ಇಬ್ಬರು ಮಹಿಳೆಯರು ಸೇರಿದಂತೆ ಒಂಬತ್ತು ಆರೋಪಿಗಳನ್ನು ಪ್ರತ್ಯೇಕ ಪ್ರಕರಣಗಳಲ್ಲಿ ಬಂಧಿಸಿದ್ದಾರೆ.

ಬೆಂಗಳೂರು: ಸೋದರಿ ಮನೆಯಲ್ಲಿಯೇ ಕಳ್ಳತನ ಮಾಡಿ ಸಿಕ್ಕಿಬಿದ್ದ 22 ವರ್ಷದ ಯುವತಿ ಬಂಧನ!
ಅಕ್ಕನ ಮನೆಯಲ್ಲಿ 52 ಲಕ್ಷ ರೂಪಾಯಿ ನಗದು ಮತ್ತು ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಕದ್ದಿದ್ದ 22 ವರ್ಷದ ಯುವತಿಯನ್ನು ಕೆಂಗೇರಿ ಪೊಲೀಸರು ಬಂಧಿಸಿದ್ದಾರೆ. ಆರೋಪಿಯನ್ನು ಲಗ್ಗೆರೆ ನಿವಾಸಿ ಉಮಾ ಎಂದು ಗುರುತಿಸಲಾಗಿದ್ದು, ಆಟೋ ಕನ್ಸಲ್ಟೆಂಟ್ ಆಗಿ ಕೆಲಸ ಮಾಡುತ್ತಿದ್ದಾರೆ.

ಬೆಳಗಾವಿ: ಕಳ್ಳತನದ ಶಂಕೆ; ಸೋದರ ಸಂಬಂಧಿಗೆ ಥಳಿಸಿ ಕೊಲೆ ಮಾಡಿದ ಆರೋಪಿ ಬಂಧನ
ತಮ್ಮ ಮನೆಯಲ್ಲಿ ಕಳ್ಳತನ ಮಾಡಿದ್ದಾರೆಂದು ಶಂಕಿಸಿ ಸಂಬಂಧಿಕರೊಬ್ಬರಿಗೆ ಥಳಿಸಿ ಕೊಲೆ ಮಾಡಿರುವ ಘಟನೆ ಬೆಳಗಾವಿ ತಾಲ್ಲೂಕಿನ ಸುತಗಟ್ಟಿ ಗ್ರಾಮದಲ್ಲಿ ಭಾನುವಾರ ಸಂಜೆ ನಡೆದಿದೆ. ಮೃತರನ್ನು ಸುತಗಟ್ಟಿ ನಿವಾಸಿ ರಾಯಪ್ಪ ಬಸವನಿ ಮನ್ನಿಕೇರಿ (30) ಎಂದು ಗುರುತಿಸಲಾಗಿದೆ. ಕೊಲೆ ಮಾಡಿದ ಆರೋಪಿ ಶೆಟ್ಟಿಯಪ್ಪ ಕಲ್ಲಪ್ಪ ಮನ್ನಿಕೇರಿ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.

ಸಂಗೀತ ನಿರ್ದೇಶಕ ಗುರುಕಿರಣ್ ಮನೆಯಲ್ಲಿ ಕಳ್ಳತನ: ಕಪಾಟಿನಲ್ಲಿದ್ದ ಹಣ ನಾಪತ್ತೆ!
ಖ್ಯಾತ ಸಂಗೀತ ನಿರ್ದೇಶಕ ಗುರುಕಿರಣ್ ಅವರ ಬೆಂಗಳೂರು ನಿವಾಸದಲ್ಲಿ ಕಳ್ಳತನವಾಗಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಕೆಐಎ: ಲಗೇಜ್ ಬ್ಯಾಗ್‌ನಲ್ಲಿದ್ದ 1.5 ಲಕ್ಷ ರೂ. ಕಳವು, ದೂರು ದಾಖಲು!
ಇಂಡಿಗೋ ವಿಮಾನದಲ್ಲಿ ಚೆನ್ನೈನಿಂದ ಬೆಂಗಳೂರಿಗೆ ಬಂದಿದ್ದ ಸಾಮಾಜಿಕ ಕಾರ್ಯಕರ್ತರೊಬ್ಬರ ಬ್ಯಾಗ್ ನಲ್ಲಿದ್ದ 1.5 ಲಕ್ಷ ರೂ. ಕಳವಾಗಿದ್ದು, ಈ ಸಂಬಂಧ ಬೆಂಗಳೂರು ವಿಮಾನ ನಿಲ್ದಾಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ರಾಕ್‌ಲೈನ್ ವೆಂಕಟೇಶ್ ಸೋದರನ ಮನೆಯಲ್ಲಿ ಕಳ್ಳತನ; 7 ನೇಪಾಳಿ ಪ್ರಜೆಗಳ ಬಂಧನ, 3 ಕೆಜಿ ಚಿನ್ನ ವಶ
ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್ ಅವರ ಸಹೋದರನ ಮನೆಯಲ್ಲಿ ಕಳ್ಳತನವಾದ ಒಂದು ತಿಂಗಳ ನಂತರ, ಪೊಲೀಸರು ಏಳು ನೇಪಾಳಿಗರ ತಂಡವನ್ನು ಬಂಧಿಸಿದ್ದಾರೆ ಮತ್ತು ಬಂಧಿತರಿಂದ 3 ಕೆಜಿ ಚಿನ್ನ ಸೇರಿದಂತೆ 1.53 ಕೋಟಿ ರೂ. ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ಮೊಬೈಲ್ ಕಳ್ಳತನ ಜಾಲವನ್ನು ಭೇದಿಸಿದ ಪೊಲೀಸರು: 1,037 ಮೊಬೈಲ್ ಗಳು ವಶಕ್ಕೆ
ದುಬಾರಿ ಮೌಲ್ಯದ ಮೊಬೈಲ್ ಕಳವು ಮಾಡಿಸಿ ಬಳಿಕ ಹೊರ ರಾಜ್ಯಗಳಲ್ಲಿ ಅವುಗಳನ್ನು ಮಾರಾಟ ಮಾಡುತ್ತಿದ್ದ ಖದೀಮರ ತಂಡದ ನಾಯಕ ಸೇರಿದಂತೆ ನಾಲ್ವರು ಆರೋಪಿಗಳನ್ನು ಬನ್ನೇರುಘಟ್ಟ ಠಾಣೆ ಪೊಲೀಸರು ಬಂಧನಕ್ಕಳಪಡಿಸಿದ್ದಾರೆ.

